ಹೊಸವರ್ಷಕ್ಕೆ ಒಂದಷ್ಟು ತಮಾಷೆಯ ಸಂಕಲ್ಪಗಳು!

ಬೆಂಗಳೂರು, ಜನವರಿ 01 : ಹೊಸ ವರ್ಷ ಬಂದಿದೆ. ಈ ವರ್ಷ ನಾನು ಈ ಕೆಲಸ ಮಾಡುತ್ತೇನೆ, ಆ ಕೆಲಸ ಮಾಡುತ್ತೇನೆ ಎಂದು ಯೋಜನೆ ಹಾಕಿಕೊಳ್ಳುವುದು ಸುಲಭ. ಆದರೆ, ಅದನ್ನು ಜಾರಿಗೆ ತರುವುದು ಕಷ್ಟದ ಕೆಲಸ ಎಂಬುದು ಎಲ್ಲರಿಗೂ ತಿಳಿದ ವಿಚಾರ.

20015ರ ಆರಂಭದಲ್ಲಿ ನೀವು ಅಂದುಕೊಂಡ ಕೆಲಸಗಳಲ್ಲಿ ಎಷ್ಟನ್ನು ಮಾಡಿದ್ದೀರಿ? ಎಂದು ಒಮ್ಮೆ ನೆನಪು ಮಾಡಿಕೊಳ್ಳಿ. 2016ರ ಆರಂಭದಲ್ಲಿಯೂ ಹಲವಾರು ಯೋಜನೆಗಳನ್ನು ಹಾಕಿಕೊಂಡಿರುತ್ತೀರಿ. ಇಂದಿನಿಂದಲೇ ಅವುಗಳನ್ನು ಮಾಡುವ ಪಣ ತೊಡಿ. ಇಲ್ಲವಾದಲ್ಲಿ ಮುಂದಿನ ವರ್ಷವೂ ಮಾಡಬಹುದು.

ಇಲ್ಲೊಂದಿಷ್ಟು ಹೊಸ ವರ್ಷದ ಸಂಕಲ್ಪಗಳಿವೆ ಈ ವರ್ಷ ಇವುಗಳನ್ನು ಮಾಡಲು ಸಾಧ್ಯವೇ? ಎಂದು ಆಲೋಚಿಸಿ. ಸಾಧ್ಯವಾದರೆ ಮಾಡಿ, ಇಲ್ಲವಾದಲ್ಲಿ ಮುಂದಿನ ವರ್ಷಕ್ಕೆ ಮುಂದೂಡಿ. ಅಷ್ಟಕ್ಕೂ ನಾವು ಮಾಡುತ್ತಿರುವುದು ಪ್ರತಿಜ್ಞೆಯಲ್ಲ ಸಂಕಲ್ಪ ಮಾತ್ರ. ಓದುಗರಿಗೆಲ್ಲಾ 2016ರ ಶುಭಾಶಯಗಳು...

ಸಿಗ್ನಲ್ ಜಂಪ್ ಮಾಡೋಲ್ಲ

ಸಿಗ್ನಲ್ ಜಂಪ್ ಮಾಡೋಲ್ಲ

ಬೆಂಗಳೂರು ಸೇರಿದಂತೆ ವಾಹನ ದಟ್ಟಣೆ ಹೆಚ್ಚಿರುವ ನಗರಗಳಲ್ಲಿನ ಜನರ ಸಂಕಲ್ಪವಿದು. ಈ ವರ್ಷ ಸಿಗ್ನಲ್ ಜಂಪ್ ಮಾಡದೇ ಗಾಡಿ ಓಡಿಸುತ್ತೇನೆ ಎಂಬುದು. ಸಂಚಾರಿ ಪೊಲೀಸರು ಹಿಡಿದು ದಂಡ ಹಾಕಿದಾಗಲೇ ಹೋ ಸಿಗ್ನಲ್ ಜಂಪ್ ಮಾಡಿದೆ ಎಂದು ಅರ್ಥವಾಗುತ್ತದೆ.

ಪ್ರತಿದಿನ ಜಿಮ್‌ಗೆ ಹೋಗುತ್ತೇನೆ

ಪ್ರತಿದಿನ ಜಿಮ್‌ಗೆ ಹೋಗುತ್ತೇನೆ

ಇದು ಹಲವು ಜನರ ಪ್ರತಿವರ್ಷದ ಸಂಕಲ್ಪ. ಜನವರಿ ತಿಂಗಳ ಚಳಿ ಜಿಮ್‌ ಕಡೆ ಮುಖ ಹಾಕಲು ಬಿಡದೆ ಹಾಸಿಗೆಗೆ ನಿಮ್ಮನ್ನು ಕಟ್ಟಿ ಹಾಕುತ್ತದೆ. ಈ ವರ್ಷದ ಆರಂಭದಲ್ಲಿಯೂ ಜಿಮ್‌ಗೆ ಹೋಗುವ ಸಂಕಲ್ಪ ನಿಮ್ಮದಾಗಿದ್ದರೆ. ಅದನ್ನು ಜಾರಿಗೆ ತನ್ನಿ, ಇಲ್ಲವಾದಲ್ಲಿ ಮುಂದಿನ ವರ್ಷ ಹೋದರಾಯಿತು.

ಮನೆ ಊಟ ಮಾಡುತ್ತೇನೆ

ಮನೆ ಊಟ ಮಾಡುತ್ತೇನೆ

ಬೆಂಗಳೂರು ಸೇರಿ ಬೇರೆ-ಬೇರೆ ನಗರದಲ್ಲಿ ಒಂಟಿಯಾಗಿ ವಾಸವಾಗಿದ್ದರೆ ನಿಮ್ಮ ಸಂಕಲ್ಪ ಹೋಟೆಲ್ ಊಟ ಕಡಿಮೆ ಮಾಡುತ್ತೇನೆ. ಪ್ರತಿದಿನ ಮನೆಯಲ್ಲಿ ಅಡಿಗೆ ಮಾಡುತ್ತೇನೆ ಎಂಬುದಾಗಿರುತ್ತದೆ. ಆದರೆ, ಇದನ್ನು ಜಾರಿಗೆ ತರುವುದು ಕಷ್ಟದ ಕೆಲಸ ಎಂಬದು ನಿಮಗೂ ತಿಳಿದಿದೆ. ಬೆಳಗ್ಗೆ ಲೇಟಾಗಿ ಎದ್ದಾಗ ಮನೆಯಲ್ಲಿ ಒಲೆ ಹಚ್ಚಲು ಮನಸ್ಸು ಬರುವುದಿಲ್ಲ.

ಪೇಸ್ಟ್, ಸೋಪು ತಂದಿಟ್ಟುಕೊಳ್ಳುತ್ತೇನೆ

ಪೇಸ್ಟ್, ಸೋಪು ತಂದಿಟ್ಟುಕೊಳ್ಳುತ್ತೇನೆ

ಸ್ನಾನಕ್ಕೆ ಹೋದಾಗ ಪೇಸ್ಟ್, ಸೋಪು, ಶ್ಯಾಂಪು ಖಾಲಿ ಆಗಿರುವುದು ತಿಳಿಯುತ್ತದೆ. ಈ ಬಾರಿ ಮೊದಲೇ ಸೋಪು ತಂದಿಟ್ಟುಕೊಳ್ಳುತ್ತೇನೆ ಎಂದು ಸಂಕಲ್ಪ ಮಾಡಿ. ನಂತರ ಅದು ಮರೆತು ಹೋಗುವುದು ಖಂಡಿತ. ಸಂಕಲ್ಪ ಮಾತ್ರ ಮಾಡಿದ್ದು ಪ್ರತಿಜ್ಞೆ ಅಲ್ಲ. ಸಮಾಧಾನ ಮಾಡಿಕೊಳ್ಳಿ.

ಕರೆಂಟ್, ವಾಟರ್ ಬಿಲ್ ಸರಿಯಾದ ಸಮಯಕ್ಕೆ ಕಟ್ಟುತ್ತೇನೆ

ಕರೆಂಟ್, ವಾಟರ್ ಬಿಲ್ ಸರಿಯಾದ ಸಮಯಕ್ಕೆ ಕಟ್ಟುತ್ತೇನೆ

ಯಾವಾಗಲೂ ಕರೆಂಟ್ ಬಿಲ್ ಕಟ್ಟುವುದು ಮರೆತು ಹೋಗುವುದು ಜಾಸ್ತಿ. ಸರಿಯಾದ ಟೈಮ್‌ಗೆ ಕರೆಂಟ್ ಬಿಲ್, ವಾಟರ್ ಬಿಲ್ ಕಟ್ಟುತ್ತೇನೆ ಎಂದು ಸಂಕಲ್ಪ ಮಾಡಿಕೊಳ್ಳಿ. ಸರಿಯಾದ ಸಮಯಕ್ಕೆ ಕಟ್ಟದಿದ್ದರೆ ದಂಡವನ್ನಂತೂ ಕಟ್ಟಲೇಬೇಕು.

ಮೊಬೈಲ್ ಬಿಟ್ಟು ಪುಸ್ತಕ ಓದ್ತೇನೆ!

ಮೊಬೈಲ್ ಬಿಟ್ಟು ಪುಸ್ತಕ ಓದ್ತೇನೆ!

ಈಗ ಎಲ್ಲರ ಕೈಯಲ್ಲಿಯೂ ಮೊಬೈಲ್. ವಾಟ್ಸಪ್, ಫೇಸ್‌ಬುಕ್ ಎಂದು ಬ್ಯುಸಿಯಾಗಿರುವ ಜನರು ಪುಸ್ತಕವನ್ನು ಮರೆತಿದ್ದಾರೆ ಎಂಬುದು ಹಲವರ ದೂರು. 2016ರಲ್ಲಿ ಮೊಬೈಲ್ ಬದಿಗಿಟ್ಟು ಪುಸ್ತಕ ಓದುತ್ತೇನೆ ಎಂಬ ಸಂಕಲ್ಪ ತೊಡಿ. ಇದನ್ನು ಬೇರೆಯವರಿಗೆ ವಾಟ್ಸಪ್ ಮಾಡಬೇಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+