Teachers Day: ಟೀಚರ್ಸ್, ವಿದ್ಯಾರ್ಥಿಗಳ ನಡುವಿನ ಒಂದಿಷ್ಟು ತರ್ಲೆ ಜೋಕ್ಸ್
ಗುಂಡ: ನಿನ್ನ ಹೆಂಡತಿಗೆ ಹೋಗಿ ರೋಸ್ ಕೊಡು..
ತಿಮ್ಮ: ಯಾಕೆ?
ಗುಂಡ: ಶಿಕ್ಷಕರ ದಿನಾಚರಣೆ ಕಣಪ್ಪಾ..
ತಿಮ್ಮ: ಗೊತ್ತಪ್ಪಾ.. ಆದರೆ ನನ್ನ ಹೆಂಡತಿ ಟೀಚರ್ ಅಲ್ಲಾ..
ಗುಂಡ: ಅದು ಗೊತ್ತಿದೆ ನನಗೆ, ನಿನ್ನ ಹೆಂಡತಿಯಿಂದ ಪಾಠ ಕಲಿತಷ್ಟು ನೀನು ಎಲ್ಲೂ ಕಲಿತಿರಲ್ಲಾ.. ಅದಕ್ಕೆ
--
ಟೀಚರ್: ನೀವು ನನ್ನ ತರಗತಿಯಲ್ಲಿ ನಿದ್ದೆ ಮಾಡಲು ಸಾಧ್ಯವಿಲ್ಲ..
ವಿದ್ಯಾರ್ಥಿ : ಗೊತ್ತಿದೆ ಮೇಡಂ.. ಆದರೆ..
ಟೀಚರ್: ಏನು ಆದರೆ?
ವಿದ್ಯಾರ್ಥಿ: ನೀವು ಸ್ವಲ್ಪ ಮೆತ್ತಗೆ ಪಾಠ ಮಾಡಿದರೆ, ನಾನು ಮಲಗಿಕೊಳ್ಲಬಹುದು
--

ಟೀಚರ್: ಇವತ್ತು ಬೆಳಗ್ಗೆ ಅರ್ಧದಿನ ಮಾತ್ರ ಕ್ಲಾಸ್, ಯಾಕೆಂದರೆ ಇವತ್ತು ಟೀಚರ್ಸ್ ಡೇ
ವಿದ್ಯಾರ್ಥಿಗಳು: ಹುರ್ರೇ....
ಟೀಚರ್: ಮಿಕ್ಕರ್ಥ ಕ್ಲಾಸ್ ಮಧ್ಯಾಹ್ನದ ಮೇಲೆ..
--
ತಿಮ್ಮ: ಪೋಷಕರಿಗೆ ಟೀಚರ್ಸ್ ವರ್ಗದವರಿಗೆ ಹೆಚ್ಚಿನ ಸಂಬಳ ಕೊಡಲಾಗುತ್ತಿದೆ ಎಂದು ಅನಿಸುವುದು ಯಾವಾಗ?
ಗುಂಡ: ದಸರಾ, ಕ್ರಿಸ್ಮಸ್ ರಜೆಯ ವೇಳೆ
--
ಕೆಲವು ಮಕ್ಕಳು ತಮ್ಮ ಕ್ಲಾಸ್ ಟೀಚರ್ ಬಗ್ಗೆ ಪ್ರಿನ್ಸಿಪಾಲ್ ಅವರಿಗೆ ದೂರು ನೀಡುತ್ತಾರೆ..
ಪ್ರಿನ್ಸಿಪಾಲ್: ಏನು ಮಕ್ಕಳಾ, ಏನು ನಿಮ್ಮ ಸಮಸ್ಯೆ?
ಮಕ್ಕಳು: ನಮ್ಮ ಕ್ಲಾಸ್ ಟೀಚರ್ ಬಗ್ಗೆ ಕಂಪ್ಲೇಂಟ್ ಮಾಡಬೇಕಿತ್ತು..
ಪ್ರಿನ್ಸಿಪಾಲ್: ಏನದು?
ಮಕ್ಕಳು: ನಮ್ಮ ಟೀಚರ್ ಗೆ ಏನೂ ಗೊತ್ತಿಲ್ಲ ಸರ್, ಎಲ್ಲದಕ್ಕೂ ನಮಗೇ ಆನ್ಸರ್ ಮಾಡಿ.. ಆನ್ಸರ್ ಮಾಡಿ ಅಂತಾರೆ...












Click it and Unblock the Notifications