ತ್ವರಿತ ಅಲರ್ಟ್ ಗಳಿಗಾಗಿ
For Daily Alerts

ಜೋಕ್ಸ್: ಅಪ್ಪಾ.. ಮದುವೆಗೆ ಎಷ್ಟು ಖರ್ಚಾಗುತ್ತೆ?
ಮರಿಗುಂಡ: ಅಪ್ಪಾ.. ಮದುವೆಗೆ ಎಷ್ಟು ಖರ್ಚಾಗುತ್ತೆ?
ಗುಂಡ: ಯಾಕೋ ನಿನಗೆ ಅದೆಲ್ಲಾ.
ಮರಿಗುಂಡ: ಹೇಳಪ್ಪಾ
ಗುಂಡ: ಸರಿಯಾಗಿ ಗೊತ್ತಿಲ್ಲಾ ಕಣೋ, ಇನ್ನೂ ಲೆಕ್ಕ ಹಾಕೋಕೆ ಹೋಗಿಲ್ಲಾ.
***
ಗುಂಡ ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣ ಮಾಡುತ್ತಾನೆ.
ಪೈಲಟ್ ರನ್ ವೇ ನಲ್ಲಿ ವಿಮಾನ ಚಲಾಯಿಸಲು ಶುರುಮಾಡಿದನ್ನು ಕಂಡು..
ಸೀಟ್ ನಿಂದ ಓಡಿ ಬಂದ ಗುಂಡ ಪೈಲಟ್ ಕೆನ್ನೆಗೆ ರಪ್ಪನೆ ಬಾರಿಸಿ ಹೇಳ್ತಾನೆ..
'ನಿನ್ನಜ್ಜಿ .. ನನಗೆ ಈಗಾಗಲೇ ಲೇಟ್ ಆಗ್ತಾ ಇದೆ. ದುಡ್ಡು ಖರ್ಚಾದರೂ ಪರವಾಗಿಲ್ಲಾಂತ ವಿಮಾನದಲ್ಲಿ ಬಂದರೆ
ಆಕಾಶದಲ್ಲಿ ಹಾರೋದು ಬಿಟ್ಟು ರಸ್ತೆಯಲ್ಲಿ ಓಡಿಸ್ತೀಯಾ'
***
ಬ್ಲಡ್ ಟೆಸ್ಟ್ ಮಾಡೋಕೆ ಬಂದ ತಿಮ್ಮ ಒಂದೇ ಸಮನೆ ಅಳುತ್ತಿದ್ದ..
ಗುಂಡ: ಯಾಕೋ ಅಳ್ತಾ ಇದ್ದೀಯಾ?
ತಿಮ್ಮ: ನಾನು ಬ್ಲಡ್ ಟೆಸ್ಟ್ ಮಾಡೋಕೆ ಬಂದಿದ್ದೆ. ಡಾಕ್ಟರ್ ನನ್ನ ಬೆರಳು ಚುಚ್ಚಿದರು..
ಗುಂಡ: ಬ್ಲಡ್ ಟೆಸ್ಟ್ ಮಾಡುವಾಗ ಬೆರಳು ಚುಚ್ಚದೇ ಇನ್ನೇನು ಮಾಡ್ತಾರೆ?
ತಿಮ್ಮ: ಅಲ್ಲಾ ಕಣೋ ನಾನು ಯುರಿನ್ ಟೆಸ್ಟ್ ಮಾಡೋಕೆ ಬಂದಿದ್ದು.
ಗುಂಡ: ಸರಿ ಕಣೋ..ಯುರಿನ್ ಟೆಸ್ಟ್ ಮಾಡಿಸ್ಕೋ.
ತಿಮ್ಮ: ಬ್ಲಡ್ ಟೆಸ್ಟ್ ಮಾಡುವಾಗ ಬೆರಳು ಚುಚ್ಚಿದರು..ಆದರೆ ಈಗ ಯುರಿನ್ ಟೆಸ್ಟ್ ಮಾಡುವಾಗ?
Comments