ಸರಿ, ಹಾಗಿದ್ದರೆ ಬೇರೆ ಮದುವೆ ಆಗುವೆ..
ಗುಂಡಿ: ನಾನು ಸತ್ತರೆ ನೀವು ಬೇರೆ ಮದುವೆ ಆಗಲೇ ಬೇಕು..
ಗುಂಡ: ಸರಿ, ಹಾಗಿದ್ದರೆ ಬೇರೆ ಮದುವೆ ಆಗುವೆ..
ಗುಂಡಿ: ನನ್ನ ಆಭರಣಗಳನ್ನೆಲ್ಲಾ ಅವಳಿಗೆ ಕೊಡ್ತೀರಾ?
ಗುಂಡ: ಹೌದು ಕೊಡಬೇಕಲ್ಲಾ.
ಗುಂಡಿ: ನಾನು ಬಳಸುತ್ತಿದ್ದ ಜೀನ್ಸ್ ಪ್ಯಾಂಟ್ ಗಳನ್ನು?
ಗುಂಡ: ಅದು ಕೊಡಕ್ಕಾಗಲ್ಲಾ..
ಗುಂಡಿ: ಯಾಕೆ?
ಗುಂಡ: ಅವಳ ಸೊಂಟದ ಅಳತೆ 28 , ನಿನ್ನ ಸೈಜ್ ಅವಳಿಗೆ ಆಗಲ್ಲಾ.
***
ಟೀಚರ್: ಸಮುದ್ರದ ಮಧ್ಯದಲ್ಲಿ ಸಪೋಟ ಗಿಡ ಇದ್ರೆ ಸಪೋಟಾನ ಹೇಗೆ ಕೀಳ್ತೀಯಾ?
ಮರಿಗುಂಡ: ದೊಡ್ಡ ಕೋಲು ತೆಗೊಂಡು ಅದನ್ನು ಕೀಳ್ತೀನಿ..
ಟೀಚರ್: ಅಷ್ಟು ದೊಡ್ಡ ಕೋಲು ನಿಮ್ಮಪ್ಪಾ ಮಾಡ್ತಾನಾ.. ದಡ್ಡಾ..
ಮರಿಗುಂಡ: ಸಮುದ್ರದ ಮಧ್ಯದಲ್ಲಿ ನಿಮ್ಮಪ್ಪಾ ಬಂದು ಗಿಡ ನೆಡ್ತಾನಾ..
***
ನಾನು ಶಕುಂತಲೆಯನ್ನು ಬಹಳ ಪ್ರೀತಿಸುತ್ತಿದ್ದೆ..
ನಾನು ಶಕುಂತಲೆಯನ್ನು ಬಹಳ ಪ್ರೀತಿಸುತ್ತಿದ್ದೆ.. ಆದರೆ ಅವಳು ನನ್ನನ್ನು ಬಿಟ್ಟು ಹೋದಾಗ..
ನಾನಾದೆ..
ಶಾಕ್ 'ಕುಂತಲ್ಲೇ'.











Click it and Unblock the Notifications