ಭೀಮ, ಕೃಷ್ಣ, ದ್ರೌಪತಿ, ಶಕುನಿ ಮೆಚ್ಚಿದ ಗೀತೆಗಳು!
ಇತ್ತೀಚೆಗೆ ಸ್ವರ್ಗಲೋಕದಲ್ಲಿನ ‘ದ್ವಾಪರಯುಗ ಕಂಪಾರ್ಟ್‌ಮೆಂಟ್’ನಲ್ಲಿ ಕನ್ನಡ ಗೀತೆಗಳ ರಸಸಂಜೆ ನಡೆಯಿತು! ಕೇಳುಗರು ಬಹಳ ಸಂತಸದಿಂದ ಆಲಿಸಿ, ಖುಷಿಪಟ್ಟರು. ನಂತರ ಯಾರ್ಯಾರಿಗೆ ಯಾವ ಗೀತೆ ಹಿಡಿಸಿತು ಎಂದು ಕೇಳಿದಾಗ, ಅವರುಗಳಿಂದ ತಿಳಿದಿದ್ದು ಇದು. ಯಾಕೆ ಎಂಬುದು ನಿಮಗೂ ಗೊತ್ತು!
ಭೀಷ್ಮ : ಏನು ಮಾಡಲಿ, ನಾನು, ಏನು ಹೇಳಲಿ. ಕಣ್ಣುಗಳಿದ್ದೂ ಕುರುಡರ ಹಾಗೆ ಹಲವರು ನಡೆಯುವರು, ಎಲ್ಲಾ ಬಲ್ಲೆನು ಎನ್ನುತ ಹೋಗಿ ಹಳ್ಳದಿ ಬೀಳುವರು... (ತ್ರಿಮೂರ್ತಿ)
ದ್ರೋಣ : ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನಿನ್ನನೂ... (ಅಮೆರಿಕ ಅಮೆರಿಕ)
ವಿಧುರ : ಬುದ್ಧಿಮಾತ ಕೇಳಿ ಓ ಮುದ್ದು ಮಕ್ಕಳೇ, ಜಾಣರಾಗಿ ಬಾಳಿ ಎನ್ನ ಹೊನ್ನ ಹೂಗಳೇ, ಮಾತಲ್ಲಿ ಹಿತವಿರಲೇ ಬೇಕು... (ಒಲವು ಮೂಡಿದಾಗ)
ಕುಂತಿ : ತಪ್ಪು ಮಾಡದವರು ಯಾರವ್ರೇ ತಪ್ಪೇ ಮಾಡದವರು ಎಲ್ಲವ್ರೆ... (ಮಠ)
ಧುೃತರಾಷ್ಟ್ರ: ಬಾಳೆಲ್ಲ ನನಗೆ ಇರುಳಾದರೇನು, ಜೊತೆಯಾಗಿ ಎಂದೆಂದು ನೀನಿಲ್ಲವೇನು... (ಹೊಸಬೆಳಕು)
ಶಕುನಿ : ಆಡೂ ಆಟ ಆಡೂ, ನೀ ಆಡು ಆಡು ಆಡಿ ನೋಡು, ಎದುರಲ್ಲಿ ನಿಗಾ ಇಡು... (ಕುಳ್ಳ ಏಜಂಟ್ 000)
ಧರ್ಮರಾಯ : ಬಾಳ ಪಗಡೆ ಆಟದಲ್ಲಿ ಬರಿ ಕಾಯಿ ಎಲ್ಲರೂ... (ಎರಡು ಕನಸು)
ಭೀಮ : ಬಿಸಿ ಬಿಸಿ ಕಜ್ಜಾಯ ರುಚಿ ರುಚಿ ಕಜ್ಜಾಯ ಮಾಡಿ ಕೊಡಲೆ ನಾನು, ಹಿಂದೆ ಎಂದು ತಿಂದು ಇಲ್ಲ ಮುಂದೆ ಎಲ್ಲೂ ಸಿಕ್ಕೋದಿಲ್ಲ, ಜನುಮ ಜನುಮದಲು ನೆನಪಲಿ ಉಳಿಯುವ... (ಹಾವಿನ ಹೆಡೆ)
ಅರ್ಜುನ : ಜಗವೇ ಒಂದು ರಣರಂಗ, ಧೈರ್ಯ ಇರಲಿ ನಿನ್ನ ಸಂಗ, ಬಾರೋ ಬಾರೋ ನನ್ನ ರಾಜಾ... (ರಣರಂಗ)
ನಕುಲ-ಸಹದೇವ : ನಾ ಬೆಂಕಿಯಂತೆ, ನಾ ಗಾಳಿಯಂತೆ, ಈ ಜೋಡಿ ಮುಂದೆ, ವೈರೀ ಉಳಿಯುವನೇ...
ಕೃಷ್ಣ-ಅರ್ಜುನ : ಕಾಲವನ್ನು ತಡೆಯೋರು ಯಾರೂ ಇಲ್ಲ, ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲ, ನನ್ನಿಂದ ನಿನ್ನ, ನಿನ್ನಿಂದ ನನ್ನ, ದೂರ ಮಾಡಲು ಎಂದೂ ಆಗೋಲ್ಲಾ... (ಆಪ್ತಮಿತ್ರ)
ಕೃಷ್ಣ : ಸತ್ಯಭಾಮೆ, ಸತ್ಯಭಾಮೆ, ಕೋಪವೇಕೇ ನನ್ನಲಿ, ಸರಸಕೆ ಕರೆದರೆ ವಿರಸವ ತೋರುವೆ ಏಕೇ ನನ್ನಲಿ... (ರವಿಚಂದ್ರ)
ದುರ್ಯೋಧನ : ತಿಳಿಯದೇ ನನಗೆ ತಿಳಿಯದೇ, ಬದುಕುವಾ ದಾರಿ ತಿಳಿಯದೇ... (ಕೆರಳಿದ ಸಿಂಹ)
ಕರ್ಣ : ನಿನ್ನಾ ಸ್ನೇಹಕೇ ನಾ ಸೋತುಹೋದೆನೂ, ಎಲ್ಲಾ ದೇವರಾ ನಾ ಬೇಡಿಕೊಂಡೆನೂ, ದೇವರ ಒಲವೋ ಪುಣ್ಯದ ಫಲವೋ ಕಾಣೆನು, ನಿನ್ನ ನಾ ಪಡೆದೆನು... (ಭಾಗ್ಯವಂತರು)
ದ್ರೌಪತಿ : ನಾ ಕನ್ನಡದ ಮಣ್ಣ ಹೆಣ್ಣೂ, ಸಿಡಿದೆದ್ರೆ ಮಿಷನ್ ಗನ್ನೂ... (ದುರ್ಗಿ)
ಅಭಿಮನ್ಯು : ಚಕ್ರವ್ಯೂಹ ಇದು ಚಕ್ರವ್ಯೂಹ, ಹಣದಾ ಮೋಹ, ಅಧಿಕಾರದ ದಾಹ... (ಚಕ್ರವ್ಯೂಹ)
ಉತ್ತರಕುಮಾರ : ಯಾರೆ ನೀನು ರೋಜಾ ಹೂವೇ , ಯಾರೆ ನೀನು ಮಲ್ಲಿಗೆ ಹೂವೇ, ಹೇಳೆ ಓ ಚೆಲುವೇ, ಚೆಲುವಿನಾ ಹೂವೇ... (ನಾನು ನನ್ನ ಹೆಂಡ್ತಿ)
(ಜೋಕು ಕಳಿಸಿ, ನಿಮ್ಮನ್ನೆಲ್ಲ ನಗಿಸಿದವರು; ಶ್ರೀನಾಥ್ ಭಲ್ಲೆ, ರಿಚ್ಮಂಡ್)












Click it and Unblock the Notifications