ಮಹಾನ್ ತರ್ಲೆ ಮಹಾಶಯ ನೀಡೋ ಉತ್ತರಗಳು ಇವು!


ಕೆಲವರು ಕೆಲವು ಪ್ರಶ್ನೆಗೆ ಅಧಿಕ ಪ್ರಸಂಗಿಗಳಂತೆ ಉತ್ತರಿಸುತ್ತಾರೆ. ಅಂತಹ ಕೆಲವು ಸ್ಯಾಂಪಲ್ ಗಳನ್ನು ವಿನಾಯಕ ರಾಮ್ ನಮಗೆ ಕಳಿಸಿದ್ದಾರೆ.. ನಿಮಗೆ ಇನ್ನಷ್ಟು ಹೊಳೆದರೆ ಕೂಡಲೇ ಬರೆದು ಕಳುಹಿಸಿ[email protected]



ಪ್ರಶ್ನೆ : ಏನ್ ಸಾರ್, ಊಟ ಆಯ್ತಾ?
ಉತ್ತರ : ಇಲ್ಲ, 10ರೂಪಾಯಿ ಕೊಡಿ, ತಿಂಡಿ ತಿಂದು ಬರ್ತೀನಿ.

ಪ್ರಶ್ನೆ : ಏನು? ಬೆಂಗಳೂರಿಗೆ ಬಂದಿದ್ರಾ?
ಉತ್ತರ : ಇಲ್ಲಪ್ಪಾ.. ಮೈಸೂರಿಗೆ ಬಂದಿದ್ದೆ, ದಾರಿತಪ್ಪಿ ಬೆಂಗಳೂರಿಗೂ ಬಂದುಬಿಟ್ಟೆ.

ಪ್ರಶ್ನೆ : ನಮ್ಮೂರಾ? ಬೆಂಗಳೂರು ಹತ್ರ ದೊಮ್ಮಲೂರು, ನಿಮ್ಮೂರು?
ಉತ್ತರ : ಓ ನಮ್ಮೂರಾ? ಇಲ್ಲೇ ಯಲಹಂಕದ ಪಕ್ಕ ಶ್ರೀಲಂಕಾ!

ಪ್ರಶ್ನೆ : ಈ ವರ್ಷ ಬಿದ್ದಷ್ಟು ಮಳೆ ಯಾವತ್ತೂ ಬಿದ್ದಿಲ್ಲ ಅಲ್ವಾ ಸಾರ್?
ಉತ್ತರ : ಹೇಳಕ್ಕಾಗಲ್ಲ. ಮುಂದಿನ ವರ್ಷ ಬೀಳಬಹುದು, ಕಾದು ನೋಡಿ.

ಪ್ರಶ್ನೆ : ಯಾಕ್ ಸಾರ್ ನಗ್ತೀರಾ? ಏನ್ ಸಮಾಚಾರ?
ಉತ್ತರ : ಸುಮ್ನೆ ಅಳು ತಡೆಯೋಕಾಗ್ದೇ ನಗ್ತಿದೀನಿ ಕಣೋ.

ಪ್ರಶ್ನೆ : ನಿಮ್ಮ ಕಾಲೇಜಲ್ಲಿ ಎಷ್ಟು ಜನ ಇದ್ದೀರಿ?
ಉತ್ತರ : ಹುಡುಗೀರು 58. ಹುಡುಗರು.. ಲೇ ಭಟ್ಟ, ಎಷ್ಟು ಇದೀವೋ ನಾವು?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+