ಇವು ತುಮಕೂರಿನ ಮಣ್ಣೆರಾಜು ಹಂಚಿದ ನಗೆ ಕಜ್ಜಾಯಗಳು!
ಪುಟ್ಟ ಹನಿಗವನ
ಕಾದಂಬರಿಕಾರ ಕಾಂತಪ್ಪ ಹನಿಗವನ ಬರೆದ. ಕವನ 3 ಫುಲ್ ಸ್ಕೇಪ್ ಮೀರಿತ್ತು.
ಸಂಪಾದಕರು ಅದನ್ನು ಎಂಟು ಸಂಚಿಕೆಗಳಲ್ಲಿ ಧಾರಾವಾಹಿ ರೀತಿ ಪ್ರಕಟಿಸಿ ಪ್ರೋತ್ಸಾಹಿಸಿದರು!?
***
ಚುಕ್ಕೆ ಕುಟುಂಬ
ಆರಂಭದಲ್ಲಿ ಆಕಾಶದಲ್ಲಿ ಎರಡು ನಕ್ಷತ್ರ ಇದ್ವಂತೆ. ಆಮೇಲೆ ಅವುಗಳಿಗೆ ಮಕ್ಕಳಾಗಿ, ಇಷ್ಟೊಂದು ನಕ್ಷತ್ರಗಳಾದವಂತೆ!
***
ಇಲಿಯ ಕತೆ
ಒಂದು ಇಲಿ ನಾಲ್ಕು ಮರಿಗಳನ್ನು ಹಾಕಿತ್ತು. ಇಲಿಗೆ ಭಾರೀ ಬಡತನ. ಬೆಕ್ಕು ಆರಂಭಿಸಿದ್ದ ಅನಾಥಾಶ್ರಮಕ್ಕೆ ಇಲಿ ತನ್ನ ಮರಿಗಳನ್ನು ಸೇರಿಸಿತು.
***
ರೈತ ಸುಧಾರಣೆ
ಆ ಊರಿನಲ್ಲಿ ಒಬ್ಬ ಬಡ ರೈತ ಇದ್ದ. ಸೊಸೈಟಿಯಲ್ಲಿ ವಿಪರೀತ ಸಾಲ ಮಾಡಿದ್ದ. ಆತ್ಮಹತ್ಯೆಗೂ ಮುಂದಾಗಿದ್ದ. ಆತಂಕಗೊಂಡ ಮಾನ್ಯ ಮುಖ್ಯಮಂತ್ರಿಗಳು ಆತನ ಮನೆಯಲ್ಲೇ ವಾಸ್ತವ್ಯ ಹೂಡಿದರು. ರೈತ ಈಗ ಆ ಸೊಸೈಟಿ ಆಧ್ಯಕ್ಷ.
***
ಸಾಧನೆ
ಮಗ ಎಸ್ಎಸ್ಎಲ್ ಸಿ ಫೇಲ್ ಆದ. ಅಪ್ಪ ಐಲಾದ. ಸಾಧಿಸ್ತೀನಿ ಸುಮ್ನರಪ್ಪಾ, ನೀನು ಯೋಚನೆ ಮಾಡಬೇಡ ಎಂದ ಮಗ. ಮುಂದೆ ಆತ ಗ್ರಾಮ ಪಂಚಾಯ್ತಿ ಅಧ್ಯಕ್ಷ ಆದ. ಶಾಸಕನಾದ. ಮುಂದೆ ಶಿಕ್ಷಣ ಸಚಿವನೂ ಆಗಿ ಡಿಗ್ರಿ ಪಾಸಾದ!
(ಇವೆಲ್ಲವನ್ನೂ ಬರೆದು,ನಮಗೆ ಖುಷಿ ನೀಡಿದ್ದು; ತುಮಕೂರಿನ ಮಣ್ಣೆರಾಜು. ತಮ್ಮನಗೆಮಿತ್ರಪತ್ರಿಕೆ ಪ್ರಕಟಣೆ ಕೈಬಿಟ್ಟು,ನಕ್ಕ ಸಂಪಾದಕರು!)












Click it and Unblock the Notifications