ಅಪ್ಪಟ ಕನ್ನಡ ಜೋಕುಗಳು


ಅನಂತಮೂರ್ತಿ, ಭೈರಪ್ಪ ಅವರ ಜಗಳ ಪರ್ವಕ್ಕೆ ತೆರೆ ಬಿದ್ದಿದೆ.ಜಗಳದಿಂದ ಆವರಣಪ್ರತಿಗಳು ಪುಸ್ತಕದಂಗಡಿಗಳಲ್ಲಿ ಖಾಲಿಯಾಗುತ್ತಿವೆ.ಈ ಜಗಳದ ವಿಷ್ಯಾ ಇಟ್ಟುಕೊಂಡು ಎಷ್ಟೊಂದು ಜೋಕುಗಳು, ಅಲ್ಲಿಲ್ಲಿ ಸುತ್ತಾಡುತ್ತಿವೆಯೋ ನೀವೇ ಓದಿ.ಇಲ್ಲಿರುವುದು ಕೆಲವು ಸ್ಯಾಂಪಲ್ ಗಳು ಮಾತ್ರ!

  • ಎಚ್. ವಿ. ಸೂರ್ಯನಾರಾಯಣ ಶರ್ಮಾ, ಬೆಂಗಳೂರು
Jokes on U R Ananthamurthy and S L Bhirappa!1.ಅನಂತಮೂರ್ತಿ ಮೊದಲೋ ಭೈರಪ್ಪ ಮೊದಲೋ ? ಟೆಲಿಪೋನ್ ಡೈರೆಕ್ಟರಿಯಲ್ಲಿ ಅನಂತಮೂರ್ತಿ ಮೊದಲು. ಮಿಕ್ಕ ಎಲ್ಲಾ ಕಡೆ ಭೈರಪ್ಪ.ಮೊದಲು.

2.ಪ್ರಾಥಮಿಕ ಶಾಲೆಯಲ್ಲೀಗ ಇಂಗ್ಲಿಷ್ ಬೊಧನೆ ಪ್ರಾರಂಭವಾಗಿದೆಯಲ್ಲವೇ, ಪ್ರಾಥಮಿಕ ಪಾಠ ಹೀಗಿರಬಹುದೇ ! ಎ-ಫಾರ್ ಅನಂತಮೂರ್ತಿ, ಬಿ-ಫಾರ್ ಭೈರಪ್ಪ, ಸಿ_ಫಾರ್ ಕಾಂಟ್ರಾವರ್ಸಿ, ಡಿ_ಫಾರ್ ಡಿಬೇಟ್
-
3.ಜಾಣ-ಜಾಣೆಯರೆಲ್ಲಾ ಆವರಣವನ್ನು ಬಯ್ಯುತ್ತಾರೆ ಏಕೆ ? ಏಕೆಂದರೆ ;
ಕಾದಂಬರಿಕಾರರು ಬಯ್ಯಿರಪ್ಪ!

4.ಭೈರಪ್ಪನವರಿಗೆ ಕಾದಂಬರಿ ಬರೆಯಲು ಬರುವುದಿಲ್ಲ ...ಅಂದವರು ಅನಂತಮೂರ್ತಿ. ಆದರೆ ಕಾದಂಬರಿ ಓದಲು ಅನಂತಮೂರ್ತಿಗೆ ಬರುವುದಿಲ್ಲ ಎಂದು ಭೈರಪ್ಪ ಹೇಳಲಿಲ್ಲ.

5.ಆವರಣದೊಳಗಿನ ಹೂರಣ, ವಿಕಾರವಾದಿಗಿದು ಮಾರಣ

6.ಆವರಣದೊಳಗಿರೋರೆಲ್ಲಾ ಚಡ್ಡಿ ಹಾಕ್ಕೊಂಡಿದಾರಂತೆ, ಹೊರಗಿರೋರ್ಗೆ
ಪುಟಗೋಸೀನೂ ಇಲ್ವಂತೆ. !

7.ಆವರಣ ಕನ್ನಡಿಗರ ಆಭರಣ, ಒಲ್ಲದವರಿಗೆ ಭಣ-ಭಣ

8. ಆವರಣದಲ್ಲೂ ಚಂಪಾ-ರಂಪ, ಸಭಿಕರೆಲ್ಲಾ ಕೆಂಪ-ಕೆಂಪ

9. ಭೈರಪ್ಪನವರ ಬಲಗೈಗೆ ಮೂರ್ತಿಯವರ ಎಡಗೈ ಸಮನಲ್ಲವೆಂಬುದು ಶುದ್ಧ
ಕುಹಕದ ಮಾತು.

10.ಭೈರಪ್ಪನವರು ಕಷ್ಟಜೀವಿಯಾದರೆ ಮೂರ್ತಿಯವರು ಇಷ್ಟಜೀವಿ

11.ಭೈರಪ್ಪನವರ ವಂಶವೃಕ್ಷದಲ್ಲಿ ಮೂರ್ತಿಯವರ ಸಂಸ್ಕಾರವಿಲ್ಲ

12. ಭೈರಪ್ಪ ಚರ್ಚಾಪಟು ಎಂದರು ಮೂರ್ತಿ, ಮೂರ್ತಿ ಚರ್ಚ್ಪಟು ಎಂದರೇ
ಭೈರಪ್ಪ?

13.ಮೂರ್ತಿಪಕ್ಕ ಕೂತ್ಕೋಬೇಕಲ್ಲಾಂತ ಭೈರಪ್ಪ , ಜ್ಞಾನಪೀಠ ಒಲ್ಲೆ ಎನ್ನಲಿಲ್ಲವಂತೆ.

14.ಕನ್ನಡಕ್ಕೊಬ್ಬರೇ ಭೈರಪ್ಪ, ಮೂರ್ತಿಗಳೋ ಹಲವಾರು, ಮೂರ್ತಿಭಂಜಕರು
ನೂರಾರು.
15. ಸ್ಮಾರ್ತ ಮಾಧ್ವರ ಜಗಳವೂ, ಇತರರಿಗೆ ಪುಕ್ಕಟ್ಟೆ ಮನರಂಜನೆಯೂ.

16.ಅನಂತಮೂರ್ತಿ ಅವಸ್ಥೆಯಿಂದ ದೂರಸರಿದರು ಭೈರಪ್ಪ.

17.ಭೈರಪ್ಪನವರ ಸಾಕ್ಷಿ ಸರಿಯಲ್ಲವೆಂದು ಋಜುವಾತು ಮಾಡುವರೇ ಮೂರ್ತಿ?

18.ಅವರಂಗಿ ಜೇಬು ಪ್ರಿಯ ಮೂರ್ತಿಯವರಿಗೆ, ಸರಿಯಾಗಿ ಅನ್ವೇಷಣೆಮಾಡಲು
ಹೇಳುತ್ತಿದ್ದಾರೆಯೇ ಭೈರಪ್ಪ?

ಇನ್ನಷ್ಟು ಚೋಕುಗಳಿಗೆ ಸ್ವಾಗತ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+