ಸಿಂಹದ ಮುಖಕ್ಕೆ ಒದ್ದ.. ಆನೇನ ಎತ್ತಿ ಬಿಸಾಕಿದ
ನಮ್ಮ ಬಸವರಾಜು ಯಾಕೆ ಹಂಗೆ ಮಾಡಿದನೋ ಗೊತ್ತಿಲ್ಲ. ಒಂದು ಕ್ಷಣ ನಮಗಂತೂ ಭಯವಾಗಿತ್ತು! ಅವನು ಸಿಂಹದ ಮುಖಕ್ಕೆ ಒದ್ದ.. ಹುಲಿ ಬಾಲ ಎಳೆದ.. ಆಮೇಲೆ ಚಿರತೆ ಕಾಲು ಮುರಿದೇ ಬಿಟ್ಟ.. ಅಷ್ಟು ಮಾತ್ರವಲ್ಲ ಆನೇನ ಎತ್ತಿ ಬಿಸಾಕಿಬಿಟ್ಟ!
ಆಮೇಲೆ ಏನಾಯ್ತು ಅಂತಾ ಬಾಯ್‌ಬಾಯ್ ಬಿಟ್ಟು ಕೇಳ್ತೀರಾ? ಇನ್ನೇನಾಗುತ್ತೆ, ಆಟಿಕೆ ಅಂಗಡಿಯೋನು ಬಸವರಾಜು ಮತ್ತು ಅವನ ಜೊತೆಗಿದ್ದ ನನ್ನ ಸೇರಿಸಿ ಒದ್ದು ಆಚೇಗಾಕ್ದ!
***
ಪ್ರಹ್ಲಾದ : ಬಿಳಿ ಕೋಳಿಗಿಂತ ಕಪ್ಪು ಕೋಳಿಯೇ ಶ್ರೇಷ್ಠ.
ಸಿದ್ದು : ಅದು ಹೇಗೆ?
ಪ್ರಹ್ಲಾದ : ಕಪ್ಪು ಕೋಳಿ ಬಿಳಿ ಮೊಟ್ಟೆ ಇಡುತ್ತೆ. ಬಿಳೀ ಕೋಳಿಗೆ ಕಪ್ಪು ಮೊಟ್ಟೆ ಇಡಲು ಸಾಧ್ಯವಾ? ಅದಕ್ಕೇ, ಕಪ್ಪು ಕೋಳಿಯೇ ಶ್ರೇಷ್ಠ ಅಂತೀನಿ.












Click it and Unblock the Notifications