‘ಜೋಕಿನ ಮನೆ’ಗೆ ಆನೆ, ಇರುವೆ, ಸರ್ಪ, ನರಿ ಬಂದಿವೆ!
ಅದೊಂದು ಮಹಿಳೆಯರ ಕಾಲೇಜು. ಕಾಲೇಜು ಆವರಣದಲ್ಲಿಯೇ ಒಂದು ಹುತ್ತ. ಹುತ್ತದಿಂದ ಹೊರಬಂದು ಬಿಸಿಲು ಕಾಯಿಸುತ್ತ ಎರಡು ಹಾವುಗಳು ಕೂತಿದ್ದವು. ಒಂದು ಯಾಕೋ ಸಪ್ಪಗಿತ್ತು! ಇನ್ನೊಂದು ಹಾವು, ಕಾಲೇಜು ಆವರಣದಲ್ಲಿದ್ದ ಹುಡುಗಿಯರ ನೋಡುತ್ತ ಕೇಕೆ ಹಾಕುತ್ತಿತ್ತು!
ಸಪ್ಪಗಿದ್ದ ಹಾವು ಮಾತು ಶುರುಮಾಡಿತು - ‘ಅಲ್ಲಾ ಹಾವಿನ ವಿಷ ಕೆಟ್ಟದ್ದು, ಅದು ಕಚ್ಚಿದರೆ ಸಾವು ಖಚಿತ ಅನ್ನುತ್ತಾರೆ. ಅದು ಸತ್ಯನಾ, ನಮ್ಮನ್ನು ನಾವು ಕಚ್ಚಿಕೊಂಡರೂ ಸಾಯ್ತೀವಾ?
ಇನ್ನೊಂದು ಹಾವು ಕೇಳಿತು -‘ ಈ ಮಾತು ಯಾಕೆ ಕೇಳ್ತೀಯಾ?’
ಸಪ್ಪಗಿದ್ದ ಹಾವು -‘ಯಾಕೆ ಅಂದ್ರೆ, ಬೆಳಗ್ಗೆ ನನ್ನ ತುಟಿ ಕಚ್ಚಿಕೊಂಡೆ ಅದಕ್ಕೆ!’
***
ಕಾವೇರಿ ದಡದಲ್ಲಿ ಅದೊಂದು ಕಾಡು. ಆ ಕಾಡಲ್ಲಿರೋ ಆನೆಗೂ ಮತ್ತು ಇರುವೆಗೂ ಸ್ನೇಹ. ಒಂದು ಸಲ ಆನೆ ಮೇಲೆ ಕೂತು ಇರುವೆ ವಾಕಿಂಗ್ ಹೋಯಿತು. ನದಿ ದಡದಲ್ಲಿ ಒಂದು ಕಡೆ ಆನೆ ನಿಂತುಕೊಂಡು ಬಿಡ್ತು. ಇರುವೆ ಏನ್ ಮಾಡಿದ್ರೂ ಅದು ಮುಂದಕ್ಕೆ ಹೋಗಲೇ ಇಲ್ಲ. ಇರುವೆಗೆ ಜಾಸ್ತಿ ಸಿಟ್ಟು ಬಂತು! ಮಿತ್ರದ್ರೋಹಿ ಎಂದು ಬಾಯಿಗೆ ಬಂದಂತೆ ಬೈಗುಳಗಳನ್ನು ಸುರಿಸಿತು!
ಯಾಕೆ ಅಂದ್ರೆ, ನದಿಯಲ್ಲಿ ಇರುವೆ ಪತ್ನಿ ಸ್ನಾನ ಮಾಡ್ತಾ ಇದ್ದಳಂತೆ!
***
ಹೀರೋಹೊಂಡದಲ್ಲಿ ಬನ್ನೇರುಘಟ್ಟದ ನರಿ ಮತ್ತು ಚಾಮರಾಜಪೇಟೆಯ ಇರುವೆ ಹೋಗ್ತಾ ಇದ್ವು. ಎದುರಿಗೆ ಬಂದ ಲಾರಿ ಡಿಕ್ಕಿ ಹೊಡೆದೇ ಬಿಡ್ತು. ನರಿಯ ತಲೆ ಹೊಡೆದು ಸ್ಥಳದಲ್ಲಿಯೇ ಸಾವನ್ನಪ್ಪಿತು. ಆದರೆ ತರಚಿದ ಗಾಯಗಳನ್ನು ಹೊರತುಪಡಿಸಿದಂತೆ, ಇರುವೆಗೆ ಏನೂ ಹೆಚ್ಚಿನ ತೊಂದರೆ ಆಗಲಿಲ್ಲ. ಯಾಕೆಂದರೆ, ಇರುವೆ ಹೆಲ್ಮೆಟ್ ಹಾಕಿಕೊಂಡಿತ್ತು!












Click it and Unblock the Notifications