ನಕ್ಕು ನಲಿಯಿರಿ : ಮುನ್ನಿ ಮತ್ತು ಅವಳ ಅಕ್ಕನ ಗಂಡ!
ರಾಯರು ಮೊದಲ ಸಾರಿ ಹೆಂಡತಿ ಜೊತೆ ಹಳ್ಳಿಯಲ್ಲಿರುವ ಮಾವನ ಮನೆಗೆ ಬಂದಿದ್ದರು. ದನದ ಕೊಟ್ಟಿಗೆಯಲ್ಲಿರುವ ಅಟ್ಟ ನೋಡಿ ಅಲ್ಲೇ ಹೋಗುತ್ತಿದ್ದ ಪುಟ್ಟ ನಾದಿನಿಯನ್ನು ಕರೆದು ಕೇಳಿದ್ರು "ಮುನ್ನಿ ಕತ್ತಲಲ್ಲಿ ಅಟ್ಟ ದಮೇಲೆ ಹೋಗುತ ಇದಿಯಲ್ಲ! ಅಲ್ಲಿ ಹಾವು ಚೇಳು ಇರಲ್ವ?"
ಮುನ್ನಿ : ಅಯ್ಯೋ ಮಾವ ಹಾವು , ಚೇಳು ಎಲ್ಲ ಇರುತ್ತೆ, ನಾನು ಅವಕ್ಕೆ ದಾರಿಬಿಡಿ ನಾನು ಹೋಗ್oಬೇಕು ಅಂತ ಹೇಳ್‌ತೀನಿ, ಅವು ದಾರಿಬಿಟ್ಟು ಪಕ್ಕಕ್ಕೆ ಹೋಗುತ್ತವೆ. ನಮ್ಮೂರೆ ಹಾಗೆ ಮಾವ"
ಮುನ್ನಿ ಮಾತು ಕೇಳಿ ಭಾವನಿಗೆ ತಣ್ಣನೆ ಜ್ವರ ಬಂತು!
***
ಮುನ್ನಿ : ಭಾವ ಹೇಗಿದ್ದೀರಾ?
ಭಾವ : ನಾನು ಚೆನ್ನಾಗಿಲ್ಲ ಅಂದ್ರೆ ನಿಮ್ಮಕ್ಕ ನ್ನ ನಂಗೆ ಕೊಡುತ್ತಿದ್ರಾ ?
***
ಒಂದು ಸಾರಿ ಒಬ್ಬ ಅರಬ್ಬೀ ದೇಶದವನು, ದೇವರನ್ನು ಪ್ರಾರ್ಥಿಸುತ್ತ ಕೇಳಿದ.
"ದೇವರೇ , ಆ ಭಾರತೀಯನಿಗೆ, ಹಸಿರು, ನೀರು, ಮಳೆ, ಬೆಳೆ , ಕಾಡು , ಆಹಾರ ಎಲ್ಲ ಕೊಟ್ಟೆ! ನೀನು ನಂಗೆ ಏನು ಕೊಟ್ಟೆ?"
ದೇವರು : ಅವನನ್ನು ಕರೆದುಕೊಂಡು ಬಂದು ನಿನ್ನ ಕೈಕೆಳಗೆ ಕೆಲಸಕ್ಕೆ ಬಿಟ್ಟೆ.
(ಜೋಕ್ ಕಳುಹಿಸಿದ್ದು : ತೇಜಸ್ವಿನಿ ಕಿರಣ್, ಮಸ್ಕಟ್, ಸುಲ್ತಾನೇಟ್ ಆಫ್ ಒಮಾನ್)












Click it and Unblock the Notifications