ಭೀಕರ ರೈಲು ಅಪಘಾತದಿಂದ ಸರ್ದಾರ್ಜಿ ಪಾರಾದ!
‘ರೈಲು ಹರಿದು 18 ಸರ್ದಾಜಿಗಳ ಸಾವು, ಒಬ್ಬ ಸರ್ದಾರ್ಜಿ ಪಾರು’ ಎಂಬ ಸುದ್ದಿ ಕೇಳಿದ ನಮ್ಮ ಪತ್ರಕರ್ತನಿಗೆ ಅಚ್ಚರಿಯೋ ಅಚ್ಚರಿ. ಅರೆ !! ಇದು ಹೇಗೆ ಸಾಧ್ಯ? ಕೇಳಿ ಬಿಡೋಣ ಎಂದು ಬದುಕಿ ಉಳಿದಿದ್ದ ಒಬ್ಬ ಸರ್ದಾಜಿಯನ್ನು ಹುಡುಕಿಕೊಂಡು ಹೊರಟ.
ಕಡೆಗೂ ಸರ್ದಾಜಿ ಸಿಕ್ಕ. ಅದರೆ ಸರ್ದಾರ್ಜಿ ತುಂಬಾ ದುಃಖದಲ್ಲಿದ್ದಂತೆ ಕಂಡು ಬಂತು.
ಪತ್ರಕರ್ತ : ಯಾಕೆ ಸರ್ದಾಜಿ ನೀವು ಖುಷಿಪಡದೆ , ಇಷ್ಟು ಸಪ್ಪೆ ಮುಖ ಮಾಡಿಕೊಂಡಿದ್ದೀರಾ? ಏನಾಯ್ತು ನಂಗೆ ಪೂರ್ತಿ ಕಥೆ ಹೇಳಿ...
ಸರ್ದಾರ್ಜಿ : ಏನು ಅಂತಾ ಹೇಳೋದು ಎಲ್ಲಾ ನನ್ನ ಕೆಟ್ಟ ಕಾಲ!!
ಪತ್ರಕರ್ತ : ಅಯ್ಯೋ ಯಾಕೆ ಹಾಗೆ ಹೇಳ್ತೀರಾ? ನೀವು ಬದುಕಿ ಉಳಿದಿದ್ದು ನಂಗೆ ನಿಜಕ್ಕೂ ಅಚ್ಚರಿ ಅಗಿದೆ. ಹೇಗಾಯ್ತು ಎಲ್ಲಾ...
ಸರ್ದಾರ್ಜಿ : ಏನೂ ಅಂತಾ ಹೇಳಲಿ. ಸುಮಾರು 25 ಜನ ಇದ್ವಿ , ರೈಲ್ವೇ ಸ್ಟೇಷನ್‌ನಲ್ಲಿ . ಎಲ್ಲ ಸರಿಯಾಗಿತ್ತು. ಅದರೆ ಯಾವಾಗ ಶತಾಬ್ದಿ ಎಕ್ಸ್‌ಪ್ರೆಸ್ 10ನೇ ನಂಬರ್ ಫ್ಲಾಟ್‌ಫಾರಂ ಬಳಿಗೆ ಬರ್ತಾ ಇದೆ ಎನ್ನುವ ಅನೌನ್ಸ್ ಆಯ್ತೋ, ಎಲ್ಲರೂ ಪ್ರಾಣ ಉಳಿಸಿಕೊಳ್ಳೋದಿಕ್ಕೆ ಅಂತಾ ಓಡಿ ಹೋಗಿ ರೈಲ್ವೇ ಟ್ರಾಕ್ ಮೇಲೆ ಹೋಗಿ ನಿಂತರು ಅಷ್ಟೇ. ಒಂದೇ ಕ್ಷಣ ಎಲ್ಲಾ ಮುಗಿದು ಹೋಯ್ತು...
ಪತ್ರಕರ್ತ : ವೆರಿ ಬ್ಯಾಡ್, ನೀವು ಹೇಗೆ ಪಾರಾದಿರಿ ಮತ್ತೆ?
ಸರ್ದಾರ್ಜಿ : ಅಯ್ಯೋ ನಾನು ಅತ್ಮಹತ್ಯೆ ಮಾಡುಕೊಳ್ಳೋದಿಕ್ಕೆ ಹೋಗಿದ್ದೆ. ಹಾಗಾಗಿ ನಾನು ಅಲ್ಲೆ ಫ್ಲಾಟ್‌ಫಾರಂ ಮೇಲೆ ಮಲಗಿ ಬಿಟ್ಟೆ. ರೈಲು ಓಡಿಸೋರು ಮೋಸ ಮಾಡ್ಬಿಟ್ರು, ನಾನು ಬದುಕಿಬಿಟ್ಟೆ!
ವಿಷಯ ತಿಳಿದ ಪತ್ರಕರ್ತನಿಗೆ ತಲೆ ಸುತ್ತು ಬರೋದೊಂದು ಬಾಕಿ!
*
ಇಂಟರ್‌ವ್ಯೂನಲ್ಲಿ ಕಾಕತಾಳೀಯ ಅನ್ನೋದಕ್ಕೆ ಉದಾಹರಣೆ ಕೊಡಿ ಎನ್ನುವ ಪ್ರಶ್ನೆ ಕೇಳಿದ್ರೆ, ‘ನಾನು ಮತ್ತು ನನ್ನ ಹೆಂಡತಿ ಮದುವೆಯಾದದ್ದು ಒಂದೇ ದಿನ’ ಎಂದು ಸರ್ದಾರ್ಜಿ ಉತ್ತರ ಕೊಟ್ಟ!












Click it and Unblock the Notifications