ಹೋಟೆಲ್‌ನವ್ರು ಭೀಮನ ಬಳಿ ಬಿಲ್ಲು ಕೇಳಬಹುದೇ?
ಮಂಗಳಗೌರಿ ವ್ರತಕ್ಕೆ ದ್ರೌಪದಿ ತವರು ಮನೆಗೆ ಹೋಗಿದ್ದರಿಂದ ಮನೆಯಲ್ಲಿ ಅಡುಗೆ ಮಾಡಲು ಆವತ್ತು ಯಾರೂ ಇರಲಿಲ್ಲ. ಅಡುಗೆ ಮನೆಯಲ್ಲಿ ಒಲೆ ಹೊತ್ತಿಸುವವರೇ ಇಲ್ಲ. ಊಟತಿಂಡಿ ವಿಚಾರದಲ್ಲಿ ಧರ್ಮರಾಯನಿಗೆ ಸಮಸ್ಯೆ ಇರುತ್ತಿರಲಿಲ್ಲ. ಯಾಕೆ ಅಂದ್ರೆ ಅವನು ಅವಲಕ್ಕಿ ಪವಲಕ್ಕಿ, ಚಿಪ್ಸು, ಡೋನಟ್ಸ್ ತಿಂದುಕೊಂಡು ಇದ್ದುಬಿಡುವ ಮನುಷ್ಯ.
ಅರ್ಜುನನೋ ಚಿತ್ರಾಂಗದೆಯಲ್ಲಿ ಅನುರಕ್ತನಾಗಿದ್ದ. ಊಟ ತಿಂಡಿ ತೀರ್ಥದ ಕಡೆ ಗಮನವೇ ಇರುತ್ತಿರಲಿಲ್ಲ. ನಕುಲ ಸಹದೇವರು ಪಕ್ಕದ ಮನೆ ಸರೋಜಮ್ಮನ ಮನೆಯಲ್ಲಿ ಊಟ ಮಾಡಿ ಬಿಡುತ್ತಿದ್ದರು. ಸ್ವಲ್ವ ಅಡ್ಜೆಸ್ಟ್ ಮಾಡಿಕೊಳ್ಳುವಂಥ ಪಾಪದ ಹುಡುಗರು.
ಆದರೆ ಭೀಮನ ಹೊಟ್ಟಗೆ ಅರೆಕಾಸಿನ ಮಜ್ಜಿಗೆ ಆಗುವುದಿಲ್ಲವಲ್ಲ! ಬೆಳಗ್ಗೆ ಎದ್ದವನೇ ಫಲ್ಸರ್ ಮೋಟರ್ ಬೈಕ್ ಹತ್ತಿಕೊಂಡು ಸೀದಾ ಲಾಲ್‌ಬಾಗ್ ರಸ್ತೆಯ ಎಂಟಿಆರ್ ಹೋಟೆಲ್‌ಗೆ ಹೋದ. ಹೊಟ್ಟೆಬಿರಿಯ ತಿಂದ, ಕಂಠಪೂರ್ತಿ ಕುಡಿದ.
ಸೇವಕ ಬಂದು ಬಿಲ್ಲು ಕೊಟ್ಟ.
ಭೀಮ ಕೇಳಿದ : ಇದೇನಿದು?
ಸೇವಕ : ಬಿಲ್ಲು ಕೊಡಿ ಸ್ವಾಮಿ ಬಿಲ್ಲು...
ಭೀಮ : ನನ್ನ ಹತ್ರ ಇರೋದು ಗದೆ ಮಾತ್ರ ಕಣಯ್ಯ, ಬಿಲ್ಲು ಬೇಕಿದ್ದರೆ ಹೋಗಿ ಅರ್ಜುನನ್ನ ಕೇಳು, ಅವನು ಕೊಟ್ರೆ ಇಸ್ಕೊ...












Click it and Unblock the Notifications