ಬಳ್ಳಾರಿ ವಿಮ್ಸ್‌ನಲ್ಲಿ 65 ಹುದ್ದೆಗಳಿಗೆ ಸೆ.2ರಂದು ನೇರ ಸಂದರ್ಶನ

ಬೆಂಗಳೂರು, ಆಗಸ್ಟ್ 28 : ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬಳ್ಳಾರಿ ಸೆಪ್ಟೆಂಬರ್ 2ರಂದು ನೇರ ಸಂದರ್ಶನ ಆಯೋಜನೆ ಮಾಡಿದೆ. ಶುಶ್ರೂಷಕರ ಹುದ್ದೆಗಳಿಗೆ ನೇರ ನೇಮಕಾತಿಯನ್ನು ಮಾಡಲಾಗುತ್ತಿದೆ.

ಒಟ್ಟು 65 ಹುದ್ದೆಗಳನ್ನು ಭರ್ತಿ ಮಾಡಲು ನೇರ ಸಂದರ್ಶನ ಆಯೋಜನೆ ಮಾಡಲಾಗಿದೆ. ಈ ಹುದ್ದೆಗಳನ್ನು 4 ತಿಂಗಳ ಅವಧಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಲು ಬಯಸುವ ಅಭ್ಯರ್ಥಿಗಳು ಜಿ. ಎನ್‌. ಎಂ. ಶುಶ್ರೂಷ ತರಬೇತಿ ಹೊಂದಿರತಕ್ಕದ್ದು. ಬಿ. ಎಸ್‌. ಸಿ ನರ್ಸಿಂಗ್ ಹೊಂದಿದಲ್ಲಿ ಆದ್ಯತೆ ಮೇಲೆ ಪರಿಗಣಿಸಲಾಗುತ್ತದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ 20,000 ರೂ. ಮಾಸಿಕ ವೇತನ ನಿಗದಿ ಮಾಡಲಾಗಿದೆ.

Walk In Interview On September 2 At Ballari

ಹೆಚ್ಚಿನ ವಿದ್ಯಾರ್ಹತೆ ಹೊಂದಿದ್ದ ಅಭ್ಯರ್ಥಿಗಳಿಗೆ ಆದ್ಯತೆ ಮೇರೆಗೆ ಪರಿಗಣಿಸಲಾಗುವುದು. ಐಸಿಯು& ಕ್ರಿಟಿಕಲ್ ವಿಭಾಗದಲ್ಲಿ ಹಾಗೂ 500 ಹಾಸಿಗೆಗಳ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ ಆಧಾರದ ಮೇಲೆ ವಯೋಮಿತಿಯಲ್ಲಿ ಸಡಿಲಿಕೆಯನ್ನು ಕರ್ನಾಟಕ ರಾಜ್ಯ ಪತ್ರ ಅಧಿಸೂಚನೆ ಪ್ರಕಾರ ನೀಡಲಾಗುತ್ತದೆ.

ನೇರ ಸಂದರ್ಶನಕ್ಕೆ ಹಾಜರಾಗುವ ಸಂದರ್ಭದಲ್ಲಿ ಅರ್ಜಿಯೊಂದಿಗೆ ರೂ. 500 ಶುಲ್ಕವನ್ನು ನಿರ್ದೇಶಕರು, ವಿಮ್ಸ್, ಬಳ್ಳಾರಿ ಇವರ ಹೆಸರಿನಲ್ಲಿ ಡಿಡಿ ಮೂಲಕ ಪಡೆದು ಸಲ್ಲಿಸತಕ್ಕದ್ದು. ಅರ್ಜಿಯನ್ನು ವಿಮ್ಸ್ ಅಂತರ್ಜಾಲ ತಾಣ www.vimsbellary.org.in ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಶೈಕ್ಷಣಿಕ ದಾಖಲಾತಿಗೊಳೊಂದಿಗೆ ಅಭ್ಯರ್ಥಿಯು ನೇರ ಸಂದರ್ಶನಕ್ಕೆ ಹಾಜರಾಗುವುದು.

ಸ್ಥಳ, ಸಮಯ : ನೇರ ಸಂದರ್ಶನ 2/9/2020ರಂದು ಬೆಳಗ್ಗೆ 11 ಗಂಟೆಗೆ ವಿಮ್ಸ್ ಆಡಳಿತ ಕಚೇರಿ, ಬಳ್ಳಾರಿ ಇಲ್ಲಿ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+