ಮೈಸೂರು; ಮೇ 7, 8ರಂದು ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

ಮೈಸೂರು, ಮೇ 05; ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ವತಿಯಿಂದ ಕೋವಿಡ್ 19 ಚಿಕಿತ್ಸಾ ಆಸ್ಪತ್ರೆಗಳಲ್ಲಿ ತಾತ್ಕಾಲಿಕವಾಗಿ 6 ತಿಂಗಳ ಅವಧಿಗೆ ಅಥವಾ ಕೋವಿಡ್ ಪರಿಸ್ಥಿತಿ ಸುಧಾರಿಸುವವರೆಗೆ ಗುತ್ತಿಗೆಯ ಆಧಾರದ ಮೇಲೆ ಕಾರ್ಯನಿರ್ವಹಿಸಲು ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಮೆರಿಟ್ ಕಂ ರೋಸ್ಟರ್ ಆಧಾರದಲ್ಲಿ ಹುದ್ದೆಗಳ ಭರ್ತಿ ನಡೆಯಲಿದ್ದು, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಕಚೇರಿಯಲ್ಲಿ ಮೇ 7ರಂದು ಬೆಳಗ್ಗೆ 7.30 ರಿಂದ ಬೆಳಗ್ಗೆ 9.30ರವರೆಗೆ ನೇರ ಸಂದರ್ಶನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಮೆಡಿಷನ್ ಸಿನಿಯರ್ ರೆಸಿಡೆಂಟ್ಸ್ (25 ಹುದ್ದೆ), ಪುಲ್ಮೋ ಸಿನಿಯರ್ ರೆಸಿಡೆಂಟ್ಸ್ (25), ಅನಸ್ಥೇಶಿಯಾ ಸಿನಿಯರ್ ರೆಸಿಡೆಂಟ್ಸ್ (22), MBBS ಜ್ಯೂನಿಯರ್ ರೆಸಿಡೆಂಟ್ಸ್ (67) ಹುದ್ದೆಗಳಿಗೆ ನೇರ ಸಂದರ್ಶನ ನಡೆಯಲಿದೆ. ಆಸಕ್ತರು ಪಾಲ್ಗೊಳ್ಳಬಹುದಾಗಿದೆ.

 Walk In Interview In Mysuru On May 7 And 8

ಮೇ 8ರಂದು ನೇರ ಸಂದರ್ಶನ; ಎಮರ್ಜೆನ್ಸಿ ಮೆಡಿಷನ್/ಇನ್‌ಟೆಂಸಿವಿಸ್ಟ್ (11), ಎಕೋ ಟೆಕ್ನಿಷಿಯನ್ಸ್ (4 ) , ಎಕ್ಸ್ ರೆ ಟೆಕ್ನಿಷಿಯನ್ಸ್ (15), ಸೈಸಿಯೋಥರೋಪಿಸ್ಟ್ (8), ರೆಸ್ಪಿರೆಟರಿ ಕೆರ್ ಟೆಕ್ನಿಷಿಯನ್ಸ್ (8), ವೆಂಟಿಲೇಟರ್ ಟೆಕ್ನಿಷಿಯನ್ಸ್ (8 ಹುದ್ದೆ), ಆಕ್ಸಿಜನ್ ಟೆಕ್ನಿಷಿಯನ್ಸ್ (3), ಸ್ವಾಬ್ ಕಲೆಕ್ಟರ್ಸ್ (11), ಸ್ಟಾಫ್ ನರ್ಸ್ (337) ಹಾಗೂ ಡಾಟಾ ಆಪರೇಟರ್ಸ್ (22) ಹುದ್ದೆಗಳ ನೇಮಕಾತಿ ನಡೆಯುತ್ತಿದೆ.

ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಮೂಲ ಅಂಕ ಪಟ್ಟಿಗಳು, ಎಲ್ಲಾ ಪ್ರಮಾಣ ಪತ್ರಗಳು, ವಿಳಾಸ ಪುರಾವೆ ಮತ್ತು ಗುರುತಿನ ಚೀಟಿಗಳ 2 ಜೆರಾಕ್ಸ್ ಪ್ರತಿಗಳೊಂದಿಗೆ ಹಾಜರಾಗಬಹುದು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0821-2520512 ಸಂಪರ್ಕಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+