ಬೆಂಗಳೂರಿನಲ್ಲಿ ಆ. 3 ರಿಂದ 5ರ ತನಕ ನೇರ ಸಂದರ್ಶನ
ಬೆಂಗಳೂರು, ಜುಲೈ 31 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೋವಿಡ್ 19 ನಿಯಂತ್ರಣಕ್ಕಾಗಿ ಹೆಚ್ಚುವರಿ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಸಕ್ತರು ಆಗಸ್ಟ್ 3 ರಿಂದ 5ರ ತನಕ ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.
ಬಿಬಿಎಂಪಿ ನಗರದಲ್ಲಿ ಕೋವಿಡ್ 19 ನಿಯಂತ್ರಣಕ್ಕೆ ಅವಶ್ಯವಿರುವ ಹೆಚ್ಚುವರಿ ಹುದ್ದೆಗಳನ್ನು ತಾತ್ಕಾಲಿಕವಾಗಿ 6 ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುತ್ತಿದೆ.
ನೇರ ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳ ವಯಸ್ಸು 50 ವರ್ಷವನ್ನು ಮೀರಿರಬಾರದು. ಕನ್ನಡ ಭಾಷೆ ಮಾತನಾಡಲು, ಬರೆಯಲು ಮತ್ತು ಓದಲು ಬರಬೇಕು.

ಸ್ತ್ರೀ ರೋಗ ತಜ್ಞರು 3, ಮಕ್ಕಳ ತಜ್ಞರು 6, ಅರವಳಿಕೆ ತಜ್ಞರು 6, ಜನರಲ್ ಪಿಸಿಷಿಯನ್ 6, ಎಂಬಿಬಿಎಸ್ ವೈದ್ಯರು 18, ಸ್ಟಾಫ್ ನರ್ಸ್ 90 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ.
ಆಸಕ್ತ ಅಭ್ಯರ್ಥಿಗಳು ಸಂಬಂಧಿಸಿದ ದಾಖಲೆಗಳ ಜೊತೆಗೆ ನೇರ ಸಂದರ್ಶನಕ್ಕೆ ಹಾಜರಾಗಬಹುದು. ಆಯ್ಕೆಯಾದ ಅಭ್ಯರ್ಥಿಗಳನ್ನು ಬೆಂಗಳೂರು ನಗರದ ಕೋವಿಡ್ ಶಂಕಿತ ಆಸ್ಪತ್ರೆ ಪೂರ್ವ, ದಕ್ಷಿಣ ಮತ್ತು ಪಶ್ಚಿಮ ವಲಯಗಳಲ್ಲಿ ನಿಯೋಜನೆ ಮಾಡಲಾಗುತ್ತದೆ.
ಈ ಹುದ್ದೆಗಳನ್ನು ಕಡಿತಗೊಳಿಸುವ/ಹೆಚ್ಚಿಸುವ ಅಧಿಕಾರವನ್ನು ಬಿಬಿಎಂಪಿಯು ಹೊಂದಿದೆ. ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ 080-22975563.
ನೇರ ಸಂದರ್ಶನದ ವಿವರ: ಈ ಹುದ್ದೆಗಳಿಗೆ ನೇರ ಸಂದರ್ಶನ 3/8/2020 ರಿಂದ 5/8/2020ರದ ತನಕ ನಡೆಯಲಿದೆ.
ಸ್ಥಳ: ಸರ್ ಪುಟ್ಟಣ್ಣಚೆಟ್ಟಿ ಟೌನ್ ಹಾಲ್, ಬೆಂಗಳೂರು.
ಸಮಯ: ಬೆಳಗ್ಗೆ 10.30 ರಿಂದ 5.30 ವರೆಗೆ.












Click it and Unblock the Notifications