ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಕೆಲಸ ಖಾಲಿ ಇದೆ
ಬೆಂಗಳೂರು, ಜುಲೈ 28: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ಜುಲೈ 30ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಕೌಂಟ್ ಸೂಪರಿಡೆಂಟ್ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನವನ್ನು ಆಯೋಜಿಸಲಾಗಿದೆ. ಜುಲೈ 30ರಂದು ಬೆಳಗ್ಗೆ 11.30ಕ್ಕೆ ನೇರ ಸಂದರ್ಶನ ನಡೆಯಲಿದೆ.
ಅಕೌಂಟ್ ಸೂಪರಿಡೆಂಟ್ ಹುದ್ದೆಗೆ 20 ಸಾವಿರ ರೂ. ವೇತನ ನಿಗದಿ ಮಾಡಲಾಗಿದೆ. ಅಭ್ಯರ್ಥಿಗಳು ಬಿ. ಕಾಂ ಅಥವ ಎ. ಕಾಂ ಪದವಿ ಪಡೆದಿರಬೇಕು. ಮೂರು ವರ್ಷದ ಅನುಭವವಿರಬೇಕು. ಬಿ. ಕಾಂ ಪದವಿ ಪಡೆದಿದ್ದು ಅಕೌಂಟಿಂಗ್‌ನಲ್ಲಿ 5 ವರ್ಷದ ಅನುಭವವಿದ್ದರೂ ಪರಿಗಣಿಸಲಾಗುತ್ತದೆ.

ಸಾರ್ವಜನಿಕ ಸಂಪರ್ಕಾಧಿಕಾರಿ ಹುದ್ದೆಗೆ 20 ಸಾವಿರ ರೂ. ವೇತನ ನಿಗದಿ ಮಾಡಲಾಗಿದೆ. ಅಭ್ಯರ್ಥಿಗಳು ಪದವಿ ಪಡೆದಿರಬೇಕು. ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇರಬೇಕು. ಪಿ ಆರ್ ಸ್ಕಿಲ್ ಇರಬೇಕು, ಉತ್ತಮವಾಗಿ ಮಾತನಾಡುವ ಮತ್ತು ಬರೆಯುವ ಕೌಶಲ್ಯ ಇರಬೇಕು.
ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವನ್ನು ನಿಗದಿ ಮಾಡಿಲ್ಲ. ನೇಮಕಾತಿ ನಿಯಮಗಳ ಪ್ರಕಾರ ವಯೋಮಿತಿಯನ್ನು ನಿಗದಿ ಮಾಡಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಕೆಲಸ ಮಾಡಬೇಕಿದೆ.
ನೇರ ಸಂದರ್ಶನ ನಡೆಯುವ ಸ್ಥಳ: Office of the Executive Director, Bannerghatta Biological Park, Bengaluru, Karnataka.
ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್











Click it and Unblock the Notifications