ಬೆಂಗಳೂರು ಮೆಟ್ರೋನಲ್ಲಿ ತಹಸೀಲ್ದಾರ್ ಹುದ್ದೆಗಳಿಗೆ ವಾಕ್ ಇನ್ ಸಂದರ್ಶನ

Written By: Ramesh
Subscribe to Oneindia Kannada

ಬೆಂಗಳೂರು, ನವೆಂಬರ್. 01 : ಬೆಂಗಳೂರು ನಮ್ಮ ಮೆಟ್ರೋನಲ್ಲಿ ಖಾಲಿ ಇರುವ ತಹಸೀಲ್ದಾರ್ ಹಾಗೂ ಡೆಪ್ಯೂಟಿ ತಹಸೀಲ್ದಾರ್ ಹುದ್ದೆಗಳಿಗೆ ಗುತ್ತಿಗೆಗೆ ಆಧಾರದ ಮೇಲೆ ಬೆಂಗಳೂರು ಮೆಟ್ರೋ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್‌ (BMRCL) ವಾಕ್ ಇನ್ ಸಂದರ್ಶನ ಏರ್ಪಡಿಸಿದೆ. ನವೆಂಬರ್ 12-2016 ರಂದು ಹುದ್ದೆಗಳಿಗೆ ಸಂದರ್ಶನ ನಡೆಯಲಿದೆ.

ತಹಸೀಲ್ದಾರ್ 03, ಉಪ ತಹಸೀಲ್ದಾರ್ 02, ಒಟ್ಟು 05 ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಒಂದು ವರ್ಷದ ಮಟ್ಟಿಗೆ ಮಾತ್ರ ತೆಗೆದುಕೊಳ್ಳಲಾಗುವುದು.

Walk in interviw for Tahsildars at bmrcl

ಅಭ್ಯರ್ಥಿಗಳು ಅರ್ಜಿಯನ್ನು ಡೌನ್ ಲೋಡ್ ಮಾಡಿಕೊಂಡು ನೀಡಿರುವ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಆಗಮಿಸಬೇಕೆಂದು ಬೆಂಗಳೂರು ಮೆಟ್ರೋ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್‌ (BMRCL ಪ್ರಕಟಣೆಯಲ್ಲಿ ತಿಳಿಸಿದೆ.[ಇಂಗ್ಲಿಷ್ನಲ್ಲಿ ಓದಲು ಇಲ್ಲಿ ಕ್ಲಿಕ್ಕಿಸಿ]

ವಿದ್ಯಾರ್ಹತೆ: ಬ್ಯಾಚೂಲರ್ ಆಫ್ ಡಿಗ್ರಿ
ವೇತನ: ತಹಸೀಲ್ದಾರ್ ಹುದ್ದೆಗೆ ತಿಂಗಳಿಗೆ- 30,000, ಉಪತಹಸೀಲ್ದಾರ್ ಗೆ 23,000.


ಅನುಭವ: ತಹಸೀಲ್ದಾರ್ ಹುದ್ದೆಗೆ- ರಾಜ್ಯ ಸರ್ಕಾರದಲ್ಲಿ ಗ್ರೇಡ್-1 ತಹಸೀಲ್ದಾರ್ ಆಗಿ ಕನಿಷ್ಠ 2 ವರ್ಷಗಳು ಅನುಭವ ಹೊಂದಿರಬೇಕು.
ಉಪತಹಸೀಲ್ದಾರ್ ಹುದ್ದೆಗೆ: ಕನಿಷ್ಠ 3 ವರ್ಷಗಳು ಕಂದಾಯ ಇಲಾಖೆಯಲ್ಲಿ ಉಪತಹಸೀಲ್ದಾರ್ ಆಗಿ ಅನುಭವ ಹೊಂದಿರಬೇಕು.


ಸಂದರ್ಶನದ ವಿಳಾಸ: ಬಿಎಮ್ ಆರ್ ಸಿಎಲ್ ಮುಖ್ಯ ಕಚೇರಿ 3ನೇ ಮಹಡಿ, ಬಿಎಂಟಿಸಿ ಕಾಂಪ್ಲೆಕ್ಸ್, ಹೆಚ್.ಕೆ ರೋಡ್ ಶಾಂತಿನಗರ ಬೆಂಗಳೂರು- 560027.
ಹೆಚ್ಚಿನ ಮಾಹಿತಿಗಾಗಿ: http://www.bmrc.co.in/careers.htm ವೆಬ್ ಸೈಟ್ ಸಂಪರ್ಕಿಸಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BMRCL invites applications from retired Tahsildars / Dy. Tahsildars, not beyond the age of 63 years, for appointment to work in the Land Acquisition Division of the Project Wing. All appointments proposed will be on “contract basis” only.
Please Wait while comments are loading...