1000 ಸ್ಟಾಫ್‌ನರ್ಸ್ ಹುದ್ದೆಗಳಿಗೆ ನೇರ ಸಂದರ್ಶನ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 17 : ಜಿವಿಕೆ ಇಎಂಆರ್‌ಐ ಸಂಸ್ಥೆಯ 1000 ಸ್ಟಾಫ್‌ನರ್ಸ್ ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳುತ್ತಿದೆ. ಆಸಕ್ತ ಅಭ್ಯರ್ಥಿಗಳು ಫೆ. 18 ಮತ್ತು 19 ರಂದು ನೇರ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.

ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ತುರ್ತು ಪ್ರತಿ ಸ್ಪಂದನಾ ಸೇವೆ ಸಲ್ಲಿಸುತ್ತಿರುವ ಜಿವಿಕೆ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್ ಅಂಡ್ ರೀಸರ್ಚ್ ಇನ್ಸಿಟಿಟ್ಯೂಟ್ (ಜಿವಿಕೆ ಇಎಂಆರ್‌ಐ) ಕರ್ನಾಟಕದಾದ್ಯಂತ ನೇರ ಸಂದರ್ಶನ ನಡೆಸುತ್ತಿದ್ದು, ಸ್ಟಾಫ್‌ನರ್ಸ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ.[ಆರ್ ಟಿಒ ನೇಮಕಾತಿ : ಅರ್ಜಿ ಹಾಕಲು ಮಾರ್ಚ್ 4 ಕೊನೆ ದಿನ]

staff nurse

ಫೆ.18 ಮತ್ತು 19 ರಂದು ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯ ತನಕ ಸಂದರ್ಶನ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಕರ್ನಾಟಕದ ಯಾವುದೇ ಭಾಗದಲ್ಲಾದರೂ ನೇಮಕ ಮಾಡಬಹುದಾಗಿದೆ. [ಪೌರಾಡಳಿತ ಇಲಾಖೆಯಲ್ಲಿ ಕೆಲಸ ಖಾಲಿ ಇದೆ]

ಸ್ಟಾಫ್‌ನರ್ಸ್ ಹುದ್ದೆಗಳ ವಿವರ : ಒಟ್ಟು ಹುದ್ದೆಗಳು 1000, ವಿದ್ಯಾರ್ಹತೆ: ಕೆಎನ್‌ಸಿ ದೃಢೀಕರಣದೊಂದಿಗೆ ಎಎನ್‌ಎಂ/ಜಿಎನ್‌ಎಂ, ಆಯುರ್ವೇದಿಕ್, ಫೀಜಿಯೋತೆರೆಪಿ, ಬಿಎಸ್‌ಸಿ ಲೈಫ್‌ಸೈನ್ಸ್ (ಹೊಸಬರು ಸಹ ಸಂದರ್ಶನಕ್ಕೆ ಬರಬಹುದು). ವಯಸ್ಸು : 18 ರಿಂದ 30, ಮಾಸಿಕ ವೇತನ : 9,840 ರೂ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka : Walk in interview for 1000 staff nurse posts on February 18th and 19th 2016 at all district health officer office between 10 am to 5 pm. GVK EMRI (Emergency Management and Research Institute) organized interview.
Please Wait while comments are loading...