ಜಯದೇವ ಆಸ್ಪತ್ರೆಯಲ್ಲಿ ವಿವಿಧ ಹುದ್ದೆಗೆ ನೇರ ಸಂದರ್ಶನ
ಬೆಂಗಳೂರು, ಆಗಸ್ಟ್ 18: ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಸಕ್ತ ಮತ್ತು ಅರ್ಹರು 7/9/2023ರಂದು ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗಬಹುದು.
ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರು ವಾಕ್-ಇನ್-ಇಂಟರ್ ವ್ಯೂಗೆ ಹಾಜರಾಗಲು ಅರ್ಹ ಅಭ್ಯರ್ಥಿಗಳನ್ನು ಆಹ್ವಾನಿಸಿದೆ. ಇಲ್ಲಿ ತಿಳಿಸಿರುವ ಹುದ್ದೆಗಳು ಬೆಂಗಳೂರು, ಮೈಸೂರು, ಕಲಬುರಗಿ ಶಾಖೆಗಳಿಗೆ ಸೇರಿವೆ.

ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಬನ್ನೇರುಘಟ್ಟ ರಸ್ತೆ, ಬೆಂಗಳೂರು 560069 ಇಲ್ಲಿನ ಮೊದಲನೇ ಮಹಡಿಯಲ್ಲಿರುವ ಬೋರ್ಡ್ ರೂಂನಲ್ಲಿ ನೇರ ಸಂದರ್ಶನವನ್ನು ನಡೆಸಲಾಗುತ್ತದೆ.
ನೇರ ಸಂದರ್ಶನಕ್ಕೆ ಅಭ್ಯರ್ಥಿಗಳು ದಿನಾಂಕ 7/9/2023ರಂದು ಹಾಜರಾಗತಕ್ಕದ್ದು, ಅಭ್ಯರ್ಥಿಗಳು ದಾಖಲಾತಿಗಳ ಪರಿಶೀಲನೆಗಾಗಿ ಬೆಳಗ್ಗೆ 8.30 ಗಂಟೆಗೆ ವರದಿ ಮಾಡಿಕೊಳ್ಳತಕ್ಕದ್ದು ಮತ್ತು ನೇರ ಸಂದರ್ಶನವನ್ನು ಬೆಳಗ್ಗೆ 11.30 ಗಂಟೆಗೆ ನಡೆಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಯಾವ-ಯಾವ ಹುದ್ದೆಗಳು; ಸಹಾಯಕ ಪ್ರಾಧ್ಯಾಪಕರು ಹೃದ್ರೋಗ ಶಾಸ್ತ್ರ/ ಸಹಾಯಕ ಪ್ರಾಧ್ಯಾಪಕರು ಪಿಡಿಯಾಟ್ರಿಕ್ ಕಾರ್ಡಿಯಾಲಜಿಸ್ಟ್. ಒಟ್ಟು ಹುದ್ದೆಗಳು 16. ವೇತನ 79,800 ರಿಂದ 2,11,500 ರೂ. ಗಳು.
ಈ ಹುದ್ದೆಗಳಿಗೆ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1ರ ಅಭ್ಯರ್ಥಿಗಳಿಗೆ 45 ವರ್ಷ. ಸಾಮಾನ್ಯ ವರ್ಗಕ್ಕೆ 40 ವರ್ಷ, ಪ್ರವರ್ಗ 2ಎ/2ಬಿ ಅಭ್ಯರ್ಥಿಗಳಿಗೆ 43 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ.
ಸಹಾಯಕ ಪ್ರಾಧ್ಯಾಪಕರು ಸಿ. ಟಿ. ಸರ್ಜರಿ. ಒಟ್ಟು ಹುದ್ದೆಗಳು 5. ಆಯ್ಕೆಯಾದ ಅಭ್ಯರ್ಥಿಗಳಿಗೆ 79,800 ರಿಂದ 2,11,500 ರೂ. ವೇತನ ನಿಗದಿ ಮಾಡಲಾಗಿದೆ. ಅಭ್ಯರ್ಥಿಗಳಿಗೆ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1ರ 45 ವರ್ಷ. ಸಾಮಾನ್ಯ ವರ್ಗಕ್ಕೆ 40 ವರ್ಷದ ವಯೋಮಿತಿ ಇದೆ.
ಸಹಾಯಕ ಪ್ರಾಧ್ಯಾಪಕರು ಅರವಳಿಕೆ ಶಾಸ್ತ್ರ. ಒಟ್ಟು ಹುದ್ದೆಗಳು 4. ವೇತನ ಶ್ರೇಣಿ 79,800 ರಿಂದ 2,11,500 ರೂ.ಗಳು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 45 ವರ್ಷ. ಸಾಮಾನ್ಯ ವರ್ಗಕ್ಕೆ 40 ವರ್ಷದ ವಯೋಮಿತಿ ಇದೆ.
ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಅರ್ಹತೆಯ ವಿವರ, ವಿದ್ಯಾರ್ಹತೆ, ಅನುಭವ ಮತ್ತು ಮೀಸಲಾತಿ ಮತ್ತು ಸೂಚನೆಗಳನ್ನು ಸಂಸ್ಥೆಯ ವೆಬ್‌ಸೈಟ್ www.jayadevacardiology.comನಲ್ಲಿ ಪಡೆಯಬಹುದಾಗಿದೆ.












Click it and Unblock the Notifications