ವಿಜಯಪುರ ವಿಮಾನ ನಿಲ್ದಾಣ ನೇಮಕಾತಿ; ಹುದ್ದೆ, ವೇತನ
ವಿಜಯಪುರ, ಡಿಸೆಂಬರ್ 11; ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (ಕೆಎಸ್‌ಐಐಡಿಸಿ) ವಿಜಯಪುರ ವಿಮಾನ ನಿಲ್ದಾಣದಲ್ಲಿ ವಿವಿಧ ಹುದ್ದೆ ಭರ್ತಿ ಮಾಡುತ್ತಿದೆ. ಆಸಕ್ತರು ಡಿಸೆಂಬರ್ 19ರಂದು ಬೆಂಗಳೂರಿನಲ್ಲಿ ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.
ಕೆಎಸ್‌ಐಐಡಿಸಿ ವಿಜಯಪುರ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ನೋಡಿಕೊಳ್ಳುತ್ತದೆ. ಕಂಪನಿ ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಗಳನ್ನು ನೇಮಕ ಮಾಡಲು ನೇರ ಸಂದರ್ಶನವನ್ನು ಆಯೋಜನೆ ಮಾಡಿದೆ.

ಈ ಗುತ್ತಿಗೆಯ ಅವಧಿ ಸೇವೆಯು ತೃಪ್ತಿಕರವಾಗಿರುವುದಕ್ಕೆ ಒಳಪಟ್ಟು, ಅಭ್ಯರ್ಥಿಗಳ ಕಾರ್ಯಕ್ಷಮತೆ ಆಧಾರದ ಮೇಲೆ ಗುತ್ತಿಗೆಯನ್ನು ಪರಸ್ಪರ ಒಪ್ಪಿತವಾದ ನಿಯಮಗಳು ಮತ್ತು ನಿಬಂಧನೆಗಳ ಮೇಲೆ ಮತ್ತೊಂದು ವರ್ಷದ ಅವಧಿಗೆ ವಿಸ್ತರಣೆ ಮಾಡಲು ಸಹ ಅವಕಾಶವಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಹುದ್ದೆ ಮತ್ತು ವೇತನ ವಿವರ; ವಿಜಯಪುರ ವಿಮಾನ ನಿಲ್ದಾಣದಲ್ಲಿ 1 ಸಿವಿಲ್ ಹೆಡ್ ಹುದ್ದೆ ಭರ್ತಿ ಮಾಡಲಾಗುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ 80 ಸಾವಿರ ರೂ.ಗಳು. ಅಭ್ಯರ್ಥಿಗಳಿಗೆ ಕನಿಷ್ಠ ವಯೋಮಿತಿ 35 ವರ್ಷ. ಗರಿಷ್ಠ ವಯೋಮಿತಿ 55 ವರ್ಷಗಳು.
ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿಇ (ಸಿವಿಲ್)/ ಎಂ.ಇ/ ಎಂ. ಟೆಕ್ ಪದವಿ ಪಡೆದಿರಬೇಕು. ರನ್‌ವೇಗಳು, ರಸ್ತೆಗಳು, ವಿಮಾನ ನಿಲ್ದಾಣಗಳ ಬೃಹತ್ ಸಿವಿಲ್ ನಿರ್ಮಾಣ ಕೆಲಸಗಳು ಮತ್ತು ನಿರ್ವಹಣೆ ಕ್ಷೇತ್ರದಲ್ಲಿ 15 ವರ್ಷಗಳ ಅನುಭವ ಹೊಂದಿರಬೇಕು.
ಏರ್‌ಪೋರ್ಟ್ ರೆಸ್ಕ್ಯೂ & ಫೈರ್ ಫೈಟಿಂಗ್ ಹೆಡ್. ಒಂದು ಹುದ್ದೆಯನ್ನು ಭರ್ತಿ ಮಾಡಲಾಗುತ್ತಿದೆ. ವೇತನ 70 ಸಾವಿರ ರೂ.ಗಳು. ಕನಿಷ್ಠ ವಯೋಮಿತಿ 35 ವರ್ಷಗಳು. ಗರಿಷ್ಠ ವಯೋಮಿತಿ 55 ವರ್ಷಗಳು.
ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಏವಿಯೇಷನ್ ಕ್ಷೇತ್ರದಲ್ಲಿ ಅಗ್ನಿ ಮತ್ತು ಸುರಕ್ಷತೆ ಕಾರ್ಯದಲ್ಲಿ 10 ವರ್ಷಗಳ ಅನುಭವ ಹೊಂದಿರಬೇಕು. ಅಭ್ಯರ್ಥಿಯು ಎಎಐ, ದೆಹಲಿ/ ಕೋಲ್ಕತ್ತಾದಿಂದ ಸೀನಿಯರ್ ಮ್ಯಾನೇಜರ್/ ಅಸಿಸ್ಟೆಂಟ್ ಫೈರ್ ಆಫೀಸರ್ ಕೋರ್ಸ್ ಸರ್ಟಿಫಿಕೇಟ್ ಅಥವ ಖಾಸಗಿ ಏರ್‌ಪೋರ್ಟ್ ಆಪರೇಟರ್‌ರಿಂದ ಯಾವುದೇ ತತ್ಸಮಾನ ಕೋರ್ಸ್‌ನ ಸರ್ಟಿಫಿಕೇಟ್ ಪಡೆದಿರಬೇಕು.
ಅಭ್ಯರ್ಥಿಯು ಭಾರೀ ಮೋಟಾರು ವಾಹನ (ಹೆಚ್‌ಎಂವಿ) ಚಾಲನಾ ಪರವಾನಗಿ ಹೊಂದಿರಬೇಕು. ಅಭ್ಯರ್ಥಿ ಕ್ರ್ಯಾಶ್ ಫೈರ್ ವಾಹನ ಹೊಂದಿರಬೇಕು ಮತ್ತು ಚಾಲನಾ ಪರಿಜ್ಞಾನ ಹೊಂದಿದ್ದರೆ ಅಪೇಕ್ಷಣೀಯ. ಕಂಪ್ಯೂಟರ್ ಸಾಕ್ಷರತೆ ಹೊಂದಿರಬೇಕು.
ವಿಜಯಪುರ ವಿಮಾನ ನಿಲ್ದಾಣ ನೇಮಕಾತಿಯ ಕುರಿತು ಆಸಕ್ತಿಯುಳ್ಳ ಅಭ್ಯರ್ಥಿಗಳು ಮೂಲ ಪತ್ರಗಳ ಜೊತೆಗೆ ಅಂಕಪಟ್ಟಿಗಳು ಮತ್ತು ಅನುಭವದ ವಿವರಗಳನ್ನು ಒಳಗೊಂಡ ಅರ್ಜಿಯೊಡನೆ ಕೆಎಸ್‌ಐಐಡಿಸಿ, ಬೆಂಗಳೂರು ಇಲ್ಲಿ ದಿನಾಂಕ 19ರಂದು ಬೆಳಗ್ಗೆ 11 ಗಂಟೆಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.
ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನದ ಜೊತೆಗೆ ಕೆಎಸ್‌ಐಐಡಿಸಿ ನಿಯಮಗಳ ಅನ್ವಯ ಇತರೆ ಭತ್ಯೆಗಳು, ಟಿಎ, ಡಿಎ ಅನ್ವಯವಾಗುತ್ತದೆ. ಆಯ್ಕೆಯಾದ ಸಿಬ್ಬಂದಿಯನ್ನು ವಿಜಯಪುರ ವಿಮಾನ ನಿಲ್ದಾಣಕ್ಕೆ ನಿಯೋಜಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಲು ಮೊಬೈಲ್ ಸಂಖ್ಯೆ 9845833566.












Click it and Unblock the Notifications