UIDAI Recruitment: ಬೆಂಗಳೂರಿನ ಆಧಾರ್ ಸೇವಾ ಕೇಂದ್ರದಲ್ಲಿ ಉದ್ಯೋಗವಕಾಶ, ಫೆ. 2ರೊಳಗೆ ಅರ್ಜಿ ಸಲ್ಲಿಸಿ
ಬೆಂಗಳೂರು: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ತನ್ನ ಬೆಂಗಳೂರು ತಂತ್ರಜ್ಞಾನ ಕೇಂದ್ರದಲ್ಲಿ ಸಹಾಯಕ ನಿರ್ದೇಶಕ (ತಂತ್ರಜ್ಞಾನ) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಖಾಲಿ ಹುದ್ದೆಗಳು 'ವಿದೇಶಿ ಸೇವಾ ಅವಧಿಯ ನಿಯಮಗಳ' ಅಡಿಯಲ್ಲಿ ಭರ್ತಿ ಮಾಡಿಕೊಳ್ಳುತ್ತಿದೆ. ಬೆಂಗಳೂರಿನಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಇದೊಂದು ಅತ್ಯುತ್ತಮ ಅವಕಾಶವಾಗಿದೆ. 2026 ಫೆಬ್ರವರಿವರೆಗೆ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ ಮಾಡಲಾಗಿದೆ.
ಈ ಹುದ್ದೆಗೆ ಆಯ್ಕೆ ಆಗುವವರು ಆಧಾರ್ (ಹಣಕಾಸು ಮತ್ತು ಇತರೆ ಸಬ್ಸಿಡಿಗಳು, ಪ್ರಯೋಜನಗಳು ಮತ್ತು ಸೇವೆಗಳ ಉದ್ದೇಶಿತ ವಿತರಣೆ) ಕಾಯಿದೆ, 2016ರ ಅಡಿಯಲ್ಲಿ ಸ್ಥಾಪಿತವಾದ ಯುಐಡಿಎಐ, ಆಧಾರ್ ಸಂಖ್ಯೆಗಳನ್ನು ನೀಡುವುದು ಮತ್ತು ದೃಢೀಕರಿಸುವ ನೀತಿ, ಕಾರ್ಯವಿಧಾನ ಮತ್ತು ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿ ಹೊಂದಿರುತ್ತಾರೆ.

ಯುಐಡಿಎಐ ಸಹಾಯಕ ನಿರ್ದೇಶಕ (ತಂತ್ರಜ್ಞಾನ) ವಿಭಾಗದಲ್ಲಿ ಎರಡು ಹುದ್ದೆಗಳನ್ನು ಭರ್ತಿ ಪ್ರಕ್ರಿಯೆ ಆರಂಭಿಸಿದೆ. ಈ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಆಯ್ಕೆ ಆಗುವವರಿಗೆ ಬೆಂಗಳೂರಿನ ಯುಐಡಿಎಐ ತಂತ್ರಜ್ಞಾನ ಕೇಂದ್ರದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಕೇಂದ್ರ ಸರ್ಕಾರದ ಅಧಿಕಾರಿಗಳು, ರಾಜ್ಯ/ಕೇಂದ್ರಾಡಳಿತ ಪ್ರದೇಶ ಸರ್ಕಾರಗಳು, ಸಾರ್ವಜನಿಕ ವಲಯದ ಉದ್ದಿಮೆಗಳು (PSU) ಮತ್ತು ಸ್ವಾಯತ್ತ ಸಂಸ್ಥೆಗಳ ಸಿಬ್ಬಂದಿ ಅರ್ಜಿ ಸಲ್ಲಿಸಬಹುದು.
ಅರ್ಹತೆ ವಿವರ
ಕೇಂದ್ರ ಸರ್ಕಾರದ ಅಧಿಕಾರಿಗಳು, ಪೋಷಕ ಕೇಡರ್/ಇಲಾಖೆಯಲ್ಲಿ ಸದೃಶ ಹುದ್ದೆಗಳನ್ನು ನಿಯಮಿತ ಆಧಾರದ ಮೇಲೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಪರ್ಯಾಯವಾಗಿ, 7ನೇ ಕೇಂದ್ರ ವೇತನ ಆಯೋಗದ ವೇತನ ಶ್ರೇಣಿ 10 (₹56,100 - ₹1,77,500) ಅಥವಾ ವೇತನ ಶ್ರೇಣಿ 9 (₹53,100 - ₹1,67,800) ರಲ್ಲಿ ಮೂರು ವರ್ಷಗಳ ನಿಯಮಿತ ಸೇವೆಯನ್ನು ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಲು ಅರ್ಹರು ಎಂದು ತಿಳಿಸಿದೆ.
ಇದಲ್ಲದೆ, 7ನೇ ಕೇಂದ್ರ ವೇತನ ಆಯೋಗದ ವೇತನ ಶ್ರೇಣಿ 8 (₹47,600 - ₹1,51,100) ರಲ್ಲಿ ನಾಲ್ಕು ವರ್ಷಗಳ ನಿಯಮಿತ ಸೇವೆ ಮಾಡಿದವರು, ಅಥವಾ ವೇತನ ಶ್ರೇಣಿ 7 (₹44,900 - ₹1,42,400) ರಲ್ಲಿ ಆರು ವರ್ಷಗಳ ನಿಯಮಿತ ಸೇವೆ ಮಾಡಿದ ಅಧಿಕಾರಿಗಳು ಸಹ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅವರು ಕನಿಷ್ಠ ಐದು ವರ್ಷ ಸೇವಾ ಅನುಭವ ಹೊಂದಿರಬೇಕು.
ಅಭ್ಯರ್ಥಿಗಳ ವಯೋಮಿತಿ
ರಾಜ್ಯ/ಕೇಂದ್ರಾಡಳಿತ ಪ್ರದೇಶದ ಸರ್ಕಾರಗಳು, ಸಾರ್ವಜನಿಕ ವಲಯದ ಉದ್ದಿಮೆಗಳು ಅಥವಾ ಸ್ವಾಯತ್ತ ಸಂಸ್ಥೆಗಳ ಅಧಿಕಾರಿಗಳು ಅರ್ಜಿ ಸಲ್ಲಿಸುವವರಾದರೆ ಅರ್ಹ ಅನುಭವ ಹೊಂದಿರಬೇಕು. ಎಲ್ಲಾ ಅಭ್ಯರ್ಥಿಗಳ ವಯಸ್ಸು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ಹೊತ್ತಿಗೆ ಗರಿಷ್ಠ 56 ವರ್ಷದೊಳಗೆ ಇರಬೇಕು.
ಶೈಕ್ಷಣಿಕ ಅರ್ಹತೆ
ಸರ್ಕಾರದಿಂದ ಮಾನ್ಯತೆ ಪಡೆದ ಶೈಕ್ಷಣಿಕ ಮಂಡಳಿ, ಇಲ್ಲವೇ ವಿಶ್ವವಿದ್ಯಾಲಯಗಳಿಂದ ಇಂಜಿನಿಯರಿಂಗ್ ಅಥವಾ ತಂತ್ರಜ್ಞಾನದಲ್ಲಿ ನಾಲ್ಕು ವರ್ಷಗಳ ಪದವಿ, ಅಥವಾ ಕಂಪ್ಯೂಟರ್ ಅಪ್ಲಿಕೇಶನ್‌ಗಳಲ್ಲಿ ಸ್ನಾತಕೋತ್ತರ ಪದವಿ ಪಡೆದ ಅಧಿಕಾರಿಗಳು ಅರ್ಜಿ ಸಲ್ಲಿಸಬಹುದು. ಖಾಸಗಿ ಕ್ಷೇತ್ರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಲ್ಲ ಎಂಬುದನ್ನು ಗಮನಿಸಬೇಕು.
ಅನುಭವಿಗಳಿಗೆ ಆದ್ಯತೆ
ಯೋಜನಾ ನಿರ್ವಹಣೆ, ಸಂಗ್ರಹಣೆ, ಆರ್‌ಎಫ್‌ಪಿ ತಯಾರಿಕೆ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT) ಯೋಜನೆಗಳು, ಇ-ಆಡಳಿತ, ನೆಟ್‌ವರ್ಕಿಂಗ್, ಟೆಲಿಕಾಂ ಅಥವಾ ಮಾಹಿತಿ ಭದ್ರತೆಯಲ್ಲಿ ಅನುಭವ ಹೊಂದಿದವರಿಗೆ ಆದ್ಯತೆ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಿದ ನಂತರ ಯಾವುದೇ ಅಭ್ಯರ್ಥಿಯು ತಮ್ಮ ಉಮೇದುವಾರಿಕೆಯನ್ನು ಹಿಂಪಡೆಯಲು ಅವಕಾಶವಿಲ್ಲ. ಯುಐಡಿಎಐಗೆ ಯಾವುದೇ ಸಮಯದಲ್ಲಿ ತನ್ನ ವಿವೇಚನೆಯ ಮೇರೆಗೆ ಹುದ್ದೆಗಳ ಸಂಖ್ಯೆಯನ್ನು ಬದಲಾಯಿಸುವ ಹಕ್ಕು ಹೊಂದಿದೆ ಎಂಬುದನ್ನು ಅಭ್ಯರ್ಥಿಗಳು ಗಮನಿಸಬೇಕು.
ಆಯ್ಕೆ ಆದವರಿಗೆ ಭತ್ಯೆ, ವಿಮೆ ಇತರ ಸೌಲಭ್ಯಗಳು
ಐದು ವರ್ಷದ ಅವಧಿಗೆ ಈ ಹುದ್ದೆಗೆ ನೇಮಕಾತಿ ನಡೆಯಲಿದೆ. ನಿಯಮಗಳ ಪ್ರಕಾರ ಹುದ್ದೆಯ ಅಧಿಕಾರಿಯನ್ನು ಕನಿಷ್ಠ ಮೂರು ವರ್ಷಕ್ಕೆ ಸಿಮೀತ ಸಹ ಮಾಡಲು ಅವಕಾಶ ಇದೆ. ಉದ್ಯೋಗ ಪಡೆದವರಿಗೆ ನೇಮಕಾತಿ, ಸಂಬಳ, ಭತ್ಯೆಗಳು, ವೈದ್ಯಕೀಯ ಪ್ರಯೋಜನ ಮತ್ತು ಪ್ರಯಾಣ ಭತ್ಯೆಗಳು ಯುಐಡಿಎಐ (ಅಧಿಕಾರಿಗಳು ಮತ್ತು ನೌಕರರ ನೇಮಕಾತಿ) ನಿಯಮಗಳು, 2020 ಮತ್ತು ಯುಐಡಿಎಐ (ವೇತನ, ಭತ್ಯೆಗಳು ಮತ್ತು ಸೇವಾ ನಿಯಮಗಳು) ನಿಯಮಗಳು, 2020 ರ ನಿಬಂಧನೆಗಳಿಗೆ ಒಳಪಟ್ಟಿರುತ್ತವೆ. ನಿಯಮ, ನೇಮಕಾತಿ ಸುತ್ತೋಲೆಗಾಗಿ ಅಧಿಕೃತ ವೆಬ್‌ಸೈಟ್ www.uidai.gov.in ಗೆ ಭೇಟಿ ನೀಡಬಹುದು.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆ (ಅನೆಕ್ಸ್ I) ಮೂಲಕ ಅಗತ್ಯ ದಾಖಲೆಗಳ ಸಹಿತ ಅರ್ಜಿ ಸಲ್ಲಿಸಬೇಕು. ನೇಮಕಾತಿಯಲ್ಲಿ ಆಯ್ಕೆಯಾದರೆ ಕೇಡರ್ ನಿಯಂತ್ರಣ ಪ್ರಾಧಿಕಾರವು ಅವರನ್ನು ಸೇವೆಯಿಂದ ಬಿಡುಗಡೆ ಮಾಡಲು ಸಿದ್ಧವಿರಬೇಕು. ಸೇವೆಗಳನ್ನು ಬಿಡುಗಡೆ ಮಾಡಲು ಸಾಧ್ಯವಾಗದ ಅಭ್ಯರ್ಥಿಗಳ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಯುಐಡಿಎಐ ತಿಳಿಸಿದೆ.
ಅರ್ಜಿ ಸಲ್ಲಿಕೆ ಕೊನೆ ದಿನಾಂಕ ವಿಸ್ತರಣೆ, ವಿಳಾಸ
ಅರ್ಜಿಯಲ್ಲಿ ಪೋಷಕ ಸಂಸ್ಥೆಯ ಸಮಾನ ಶ್ರೇಣಿಯ ಬಗ್ಗೆ ದೃಢೀಕರಿಸಿರಬೇಕು. ಈ ಎಲ್ಲಾ ದಾಖಲೆಗಳು ಸಂಪೂರ್ಣ ಮತ್ತು ನಿಖರವಾಗಿ, ಸತ್ಯವಾಗಿರಬೇಕು. ಅಪೂರ್ಣ ಮಾಹಿತಿಯ ದಾಖಲೆಗಳು ಇದ್ದಲ್ಲಿ ಅಂತವರ ಅರ್ಜಿ ಸ್ವೀಕರಿಸುವುದಿಲ್ಲ.
ಸೂಕ್ತ ಅರ್ಜಿಗಳನ್ನು ಇಲ್ಲಿನ 'ನಿರ್ದೇಶಕ (HR), ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI), ಆಧಾರ್ ಕಾಂಪ್ಲೆಕ್ಸ್, ಎನ್‌ಟಿಐ ಲೇಔಟ್, ಟಾಟಾ ನಗರ, ಕೊಡಿಗೆಹಳ್ಳಿ, ತಂತ್ರಜ್ಞಾನ ಕೇಂದ್ರ, ಬೆಂಗಳೂರು - 560 092' ವಿಳಾಸಕ್ಕೆ ಕಳುಹಿಸಬೇಕು. ಅರ್ಜಿ ಸ್ವೀಕಾರಕ್ಕೆ ಈ ಹಿಂದೆ 2025ರ ಡಿಸೆಂಬರ್ 09 ಕೊನೆಯ ದಿನವಾಗಿತ್ತು. ಅದನ್ನೀಗ 2026 ಫೆಬ್ರವರಿ 2ರವರೆಗೆ ವಿಸ್ತರಣೆ ಮಾಡಲಾಗಿದೆ.
ಹೆಚ್ಚಿನ ಮಾಹಿತಿಗೆ ನಿರ್ದೇಶಕರ (ಲೆಫ್ಟಿನೆಂಟ್ ಕರ್ನಲ್ ನೀರಜ್ ಚೌಧರಿ) ದೂರವಾಣಿ ಸಂಖ್ಯೆ 011-23478554 ಅಥವಾ [email protected] ಇಮೇಲ್ ಮೂಲಕ ಸಂಪರ್ಕಿಸಬಹುದೆಂದು ತಿಳಿಸಲಾಗಿದೆ.
ಗಮನಿಸಿ..
ಕೇಡರ್ ನಿಯಂತ್ರಣ ಪ್ರಾಧಿಕಾರ ಎಂದರೇನು: ಹಾಗೆಂದರೆ ಭಾರತೀಯ ಆಡಳಿತ ಸೇವೆ (IAS), ಭಾರತೀಯ ಪೊಲೀಸ್ ಸೇವೆ (IPS) ಮತ್ತು ಭಾರತೀಯ ಅರಣ್ಯ ಸೇವೆ (IFS) ಸದಸ್ಯರ ವಿಷಯದಲ್ಲಿ ಅನುಕ್ರಮವಾಗಿ ಕೇಂದ್ರ ಸರ್ಕಾರದಲ್ಲಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆ, ಗೃಹ ವ್ಯವಹಾರಗಳ ಸಚಿವಾಲಯ ಮತ್ತು ಪರಿಸರ ಮತ್ತು ಅರಣ್ಯ ಸಚಿವಾಲಯ. ಪೋಷಕ ಸಂಸ್ಥೆಗೆ ಕೇಡರ್ ನಿಯಂತ್ರಣ ಪ್ರಾಧಿಕಾರವನ್ನು ನಿರ್ದಿಷ್ಟಪಡಿಸದಿದ್ದಾಗ, ನಿಯೋಜನೆ ಮೇಲೆ ಅಧಿಕಾರಿಯನ್ನು ಬಿಡುಗಡೆ ಮಾಡಲು ಸಮರ್ಥವಾಗಿರುವ ಯಾವುದೇ ಪ್ರಾಧಿಕಾರವನ್ನು ಕೇಡರ್ ನಿಯಂತ್ರಣ ಪ್ರಾಧಿಕಾರ ಎಂದು ಪರಿಗಣಿಸಲಾಗುತ್ತದೆ.
-
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್












Click it and Unblock the Notifications