TMB Recruitment 2023: ಬ್ಯಾಂಕಿಂಗ್ ನೇಮಕಾತಿ, ಪೋಸ್ಟಿಂಗ್, ವೇತನ, ಮಹತ್ವದ ದಿನಾಂಕ ತಿಳಿಯಿರಿ
ಬೆಂಗಳೂರು, ಡಿಸೆಂಬರ್ 21: ಖಾಸಗಿ ವಲಯದ ಬ್ಯಾಂಕುಗಳಲ್ಲಿ ಒಂದಾದ ತಮಿಳುನಾಡ್ ಮರ್ಕೆಂಟೈಲ್ ಬ್ಯಾಂಕ್ (TMB) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾಣಿಸಿದೆ.
ಆಸಕ್ತ ಅಭ್ಯರ್ಥಿಗಳು ತಮಿಳುನಾಡ್ ಮರ್ಕೆಂಟೈಲ್ ಬ್ಯಾಂಕ್ (TMB) ನಲ್ಲಿ ಖಾಲಿ ಇರುವ ರಿಲೇಶನ್ಶಿಪ್ ಮ್ಯಾನೇಜರ್ ಹುದ್ದೆಗಳಿಗೆ ಈಕೂಡಲೇ ಅರ್ಜಿ ಸಲ್ಲಿಸಬೇಕು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ ಇದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಬಯಸುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಭಾರತದಾದ್ಯಂತ ಎಲ್ಲಿಬೇಕಾದರೂ ಪೋಸ್ಟಿಂಗ್ ಸಿಗಲಿದೆ.
ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗು ಮೊದಲು ಹುದ್ದೆಗೆ ಬೇಕಾದ ವಿದ್ಯಾರ್ಹತೆ, ಮಾಸಿಕ ವೇತನ, ಶುಲ್ಕ ಸೇರಿದಂತೆ ನೇಮಕಾತಿಯ ಪೂರ್ಣ ಮಾಹಿತಿ ಇಲ್ಲಿ ತಿಳಿಯಬೇಕಿದೆ.

ನೇಮಕಾತಿ ಮಾಹಿತಿ
ಸಂಸ್ಥೆಯ ಹೆಸರು: ತಮಿಳುನಾಡ್ ಮರ್ಕೆಂಟೈಲ್ ಬ್ಯಾಂಕ್ (TMB)
ಹುದ್ದೆ ಹೆಸರು: ರಿಲೇಶನ್ಶಿಪ್ ಮ್ಯಾನೇಜರ್
ಉದ್ಯೋಗದ ಸ್ಥಳ: ಭಾರತ
ಮಾಸಿಕ ವೇತನ: ನಿಗದಿ ಆಗಿಲ್ಲ
ಅರ್ಜಿ ಸಲ್ಲಿಕೆ ಕೊನೆ ದಿನ: ಡಿಸೆಂಬರ್ 22
ವಿದ್ಯಾರ್ಹತೆ ಏನಿರಬೇಕು?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ, ಸ್ನಾತಕೋತ್ತರ ಪದವಿ ಮಾಡಿರಬೇಕು ಎಂದು ತಮಿಳುನಾಡ್ ಮರ್ಕೆಂಟೈಲ್ ಬ್ಯಾಂಕ್ ನೇಮಕಾತಿ ಅಧಿಸೂಚನೆ ಮಾಹಿತಿ ನೀಡಿದೆ.

ವಯಸ್ಸಿನ ಮಿತಿ
ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳ ವಯಸ್ಸು ಇದೇ ವರ್ಷ 2023ರ ಜುಲೈ 31ಕ್ಕೆ ಗರಿಷ್ಠ 30 ವರ್ಷ ಮೀರಿರಬಾರದು. ಇನ್ನೂ ಅಭ್ಯರ್ಥಿಗಳಿಗೆ ಅವರವರ ಮೀಸಲಾತಿಗೆ ಅನುಗುಣವಾಗಿ ವಯೋಮಿತಿ ಅಲ್ಪ ಸಡಿಲಿಕೆ ಇರಲಿದೆ. ಯಾವುದೇ ಜಾತಿ ಸಮುದಾಯದವರಿಗೂ ಅರ್ಜಿ ಶುಲ್ಕ ನಿಗದಿ ಮಾಡಿಲ್ಲ.
ಆಯ್ಕೆ ಹೇಗಿರುತ್ತದೆ
ಅಭ್ಯರ್ಥಿಗಳನ್ನು ನೇರ ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುವುದು. ಆಯ್ಕೆ ಆಗುವವರಿಗೆ ನಿಯಮಾನುಸಾರ ವೇತನ ನೀಡಲಾಗುವುದು. ಭಾರತದಲ್ಲಿ ಎಲ್ಲಿ ಬೇಕಾದರೂ ಪೋಸ್ಟಿಂಗ್ ನೀಡಲಾಗುವುದು ಎಂದು ಬ್ಯಾಂಕ್ ತಿಳಿಸಿದೆ.
ಅಭ್ಯರ್ಥಿಗಳು ಸೂಕ್ತ ದಾಖಲೆಗಳ ಸಹಿತ ಅರ್ಜಿಯನ್ನು ಇಲ್ಲಿನ ಲಿಂಕ್ (https://www.tmbnet.in/tmb_careers/newregisterbase.do?id=RMM&post=RMM20232402) ಮೂಲಕ ಆನ್‌ಲೈನ್ ಮೂಲಕವೇ ಹಾಕಬೇಕು ಎಂದು ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಇಲ್ಲಿನ ಅಧಿಕೃತ ವೆಬ್‌ಸೈಟ್‌ಗೆ (https://tmb.in/) ಭೇಟಿ ನೀಡಬಹುದಾಗಿದೆ.












Click it and Unblock the Notifications