10899 ಪೌರಕಾರ್ಮಿಕರ ನೇಮಕಾತಿಗೆ ರಾಜ್ಯ ಸರ್ಕಾರ ತೀರ್ಮಾನ

Posted By:
Subscribe to Oneindia Kannada

ಬೆಂಗಳೂರು, 13 : ಬೆಂಗಳೂರು ಬಿಬಿಎಂಪಿ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಅವಶ್ಯವಿರುವ ಸುಮಾರು 10899 ಪೌರಕಾರ್ಮಿಕರ ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

3 ತಿಂಗಳಲ್ಲಿ 10,000 ಗುತ್ತಿಗೆ ಪೌರ ಕಾರ್ಮಿಕರ ಖಾಯಂ: ಸಿದ್ದರಾಮಯ್ಯ

ಈ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಅವರು, 'ಕಾಯಂ ನೌಕರರಿಗೆ 25,000 ರು. ವೇತನ ಸಿಗಲಿದೆ. ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ನೀಡುವ 17,000 ರು. ಸಂಭಾವನೆಯನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು' ಎಂದು ಹೇಳಿದರು.

The Karnataka government decided to fill 10899 paurakarmika posts

ನೇಮಕಗೊಳ್ಳುವ ಎಲ್ಲಾ ಪೌರಕಾರ್ಮಿಕರಿಗೂ ಮಾಸಿಕ 25000 ಸಾವಿರ ವೇತನ ನೀಡುಲು ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ನೇಮಕಾತಿ ಮಾಡಿಕೊಳ್ಳುವಾಗ ಹಾಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಆದ್ಯತೆ ನೀಡಲಾಗುತ್ತಿದೆ. ಇದರ ಜೊತೆಗೆ ಪೌರಕಾರ್ಮಿಕರ ವಿವಿಧ ಬೇಡಿಕೆಗಳಿಗೂ ಹಸಿರು ನಿಶಾನೆ ನೀಡಲಾಗಿದೆ.

ಹುದ್ದೆಗಳ ವಿವರ ಬಿಬಿಎಂಪಿಯಲ್ಲಿ ಒಟ್ಟು 5486 ಹುದ್ದೆಗಳು ಖಾಲಿ ಇದ್ದು, ರಾಜ್ಯದ ಇತರ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ, ಪಂಚಾಯಿತಿಗಳಲ್ಲಿ 5413 ಹುದ್ದೆಗಳು ಖಾಲಿ ಇದೆ. ಒಟ್ಟಾರೆ 10899 ಹುದ್ದೆಗಳು ಶೀಘ್ರದಲ್ಲೆ ಭರ್ತಿಯಾಗಲಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The karnataka government has decided to fill 10,899 civic labor (paurakarmika) posts in various urban local bodies, including the huge Bangaluru Metropolitan Corporation.
Please Wait while comments are loading...