ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ ಫ್ರೆಶರ್ಸ್ ಗಮನಕ್ಕೆ: ಈ ವರ್ಷ 1 ಲಕ್ಷಕ್ಕೂ ಅಧಿಕ ಉದ್ಯೋಗವಕಾಶ

|
Google Oneindia Kannada News

ಬೆಂಗಳೂರು, ಏಪ್ರಿಲ್ 16: ಕೊರೊನಾ ಸಂಕಷ್ಟ ಕಾಲದಲ್ಲೂ ಉದ್ಯೋಗಿಗಳ ಹಿತ ಕಾಯ್ದಿರುವ ಭಾರತದ ಪ್ರಮುಖ ಐಟಿ ಕಂಪನಿಗಳು ಪ್ರಸಕ್ತ ವರ್ಷದಲ್ಲಿ ಐಟಿ ಫ್ರೆಶರ್ಸ್‌ಗಳಿಗೆ ಶುಭ ಸುದ್ದಿ ಕೊಟ್ಟಿವೆ. ಈ ವರ್ಷ ಸರಿ ಸುಮಾರು 1 ಲಕ್ಷಕ್ಕೂ ಅಧಿಕ ಹೊಸ ನೇಮಕಾತಿ ನಡೆಯಲಿದೆ.

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಇನ್ಫೋಸಿಸ್, ವಿಪ್ರೋ ಸಂಸ್ಥೆಗಳು ಕಳೆದ ಆರ್ಥಿಕ ವರ್ಷದಲ್ಲಿ ಬೇರೆ ಐಟಿ ಕಂಪನಿಗಳಿಗೆ ಹೋಲಿಸಿದರೆ ಶೇ 45ರಷ್ಟು ಅಧಿಕ ನೇಮಕಾತಿ ಮಾಡಿಕೊಂಡಿವೆ. ಕೊರೊನಾ ಕಾಲದಲ್ಲಿಸರ್ಕಾರಿ ಸಂಸ್ಥೆಗಳು ಸೇರಿದಂತೆ ಅನೇಕ ಸಂಸ್ಥೆಗಳು ಡಿಜಿಟಲ್ ಸೇವೆಗೆ ಹೆಚ್ಚಿನ ಬೇಡಿಕೆ ಒಡ್ಡಿದ್ದರಿಂದ ಟಾಪ್ 3 ಸಂಸ್ಥೆಗಳಲ್ಲಿ ಹೆಚ್ಚಿನ ನೇಮಕಾತಿ ನಡೆದಿದೆ.

ಪ್ರಸಕ್ತ ವರ್ಷದಲ್ಲಿ ಈ ಟಾಪ್ 3 ಕಂಪನಿಗಳಲ್ಲದೆ ಎಚ್‌ಸಿಎಲ್ ಟೆಕ್ ಸೇರಿದಂತೆ ಸುಮಾರು 1 ಲಕ್ಷ ಫ್ರೆಶರ್ಸ್ ನೇಮಕ ಮಾಡಿಕೊಳ್ಳುವುದಾಗಿ ಘೋಷಿಸಿವೆ.

TCS, Infosys, Wipro, and HCL Tech to hire nearly 1 lakh freshers

2021-22ರ ಆರ್ಥಿಕ ವರ್ಷದಲ್ಲಿ 40 ಸಾವಿರ ಹೊಸ ನೇಮಕಾತಿಯನ್ನು ಟಿಸಿಎಸ್ ಘೋಷಿಸಿದೆ ಅಲ್ಲದೆ, ಕೆಲ ತಿಂಗಳುಗಳಲ್ಲೇ ಒಟ್ಟಾರೆ ಉದ್ಯೋಗಿಗಳ ಸಂಖ್ಯೆಯನ್ನು ದಾಖಲೆಯ 5 ಲಕ್ಷ ಸಂಖ್ಯೆಗೇರಿಸಿಕೊಳ್ಳಲಿದೆ. ಇನ್ನು ಇನ್ಫೋಸಿಸ್ ಹಾಗೂ ಎಚ್‌ಸಿಎಲ್ ಟೆಕ್ ಕ್ರಮವಾಗಿ 26,000 ಹಾಗೂ 12,000 ಹೊಸ ನೇಮಕಾತಿ ಘೋಷಿಸಿವೆ.

ವಿಪ್ರೋ ಸಂಸ್ಥೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ನೇಮಕಾತಿ ಮಾಡುವ ಸಂಖ್ಯೆಯನ್ನು ನಿಖರವಾಗಿ ಇನ್ನೂ ಪ್ರಕಟಿಸಿಲ್ಲ. ಆದರೆ, ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಸೌರಭ್ ಗೋವಿಲ್ ಅವರು FY22ರಲ್ಲಿ ಹಿಂದಿನ ವರ್ಷಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಫ್ರೆಶರ್ಸ್ ನೇಮಕ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ಕಳೆದ ವರ್ಷ ಸುಮಾರು 9,000ಕ್ಕೂ ಅಧಿಕ ಫ್ರೆಶರ್ಸ್ ನೇಮಕಾತಿ ದಾಖಲಿಸಿದ್ದ ವಿಪ್ರೋ ಈ ಬಾರಿ ಈ ಸಂಖ್ಯೆಯನ್ನು ಹೆಚ್ಚಿಸುವ ಭರವಸೆ ನೀಡಿದೆ.

English summary
India's top IT majors TCS, Infosys, Wipro, and HCL Tech could together hire nearly 1 lakh freshers this year
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X