TCS Company: 40,000 ಉದ್ಯೋಗಿಗಳ ನೇಮಕದ ಚಿಂತನೆಯಲ್ಲಿದೆ ಐಟಿ ದಿಗ್ಗಜ

ಬೆಂಗಳೂರು, ಅಕ್ಟೋಬರ್ 16: ಐಟಿ ಕ್ಷೇತ್ರದ ದಿಗ್ಗಜ ಕಂಪನಿಯಾಗಿರುವ ಟಾಟಾ ಒಡೆತನ 'ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ಭರ್ಜರಿ ನೇಮಕಾತಿಯ ಚಿಂತನೆಯಲ್ಲಿದೆ. ಈ ಮೂಲಕ ಸಾಫ್ಟವೇರ್ ರಂಗಕ್ಕೆ ಕಾಲಿಡಲು ಬಯಸುವ ಫ್ರೆಶರ್ಸ್‌ಗಳಿಗೆ ಇದೊಂದು ಉತ್ತಮ ಅವಕಾಶವಾಗಿದೆ.

'ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ಪ್ರಸಕ್ತ ಹಣಕಾಸು ವರ್ಷದಲ್ಲಿ ಸುಮಾರು 40,000 ಕ್ಯಾಂಪಸ್ ನೇಮಕಾತಿಗಳನ್ನು ಮಾಡಿಕೊಳ್ಳುವ ಚಿಂತನೆಯಲ್ಲಿದೆ. ಈ ಮೂಲಕ ಸಂಸ್ಥೆಗೆ ಹೊಸ ನೇಮಕಾತಿಗಳನ್ನು ಘೋಷಿಸಲಾಗಿದೆ ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಎನ್.ಗಣಪತಿ ಸುಬ್ರಮಣ್ಯಂ ಹೇಳಿದ್ದಾರೆ.

recruitment-in-2023-2024-financial-year

ಪ್ರತಿ ವರ್ಷ ಕಂಪನಿಯು ಸಾಮಾನ್ಯವಾಗಿ 35,000 ರಿಂದ 40,000 ಪ್ರೇಶರ್ಸ್‌ಗಳನ್ನು ನೇಮಕ ಮಾಡಿಕೊಳ್ಳುತ್ತದೆ. ಈ ಯೋಜನೆಯ ಭಾಗವಾಗಿಯೇ ಈ ವರ್ಷವು ನೇಮಕಾತಿ ಆಹ್ವಾನ ಮುಂದುವರಿಯಲಿದೆ. ಅತ್ಯುತ್ತಮ ಬ್ಯಾಚ್ ಹೊಂದಿರುವ ಕಂಪನಿಯು ಕಳೆದ ವರ್ಷ 50,000 ಫ್ರೆಶರ್‌ಗಳಿಗೆ ಕೆಲಸ ನೀಡಿದೆ. ನಂತರ ವರ್ಷದಲ್ಲಿ ಬೇಡಿಕೆ ಹೆಚ್ಚಾಗುವವರೆಗೆ ಕ್ಯಾಂಪಸ್‌ಗಳಿಗೆ ತೆರಳುವುದಿಲ್ಲ ಎಂದು ಅವರು ತಿಳಿಸಿದರು.

ವಜಾ ಮಧ್ಯೆ ನೇಮಕಾತಿ

TCS ನೇಮಕಾತಿ ಯೋಜನೆಗಳನ್ನು ಬೇಡಿಕೆಯ ದೃಷ್ಟಿಕೋನವನ್ನು ಆಧರಿಸಿ ಮಾಪನಾಂಕ ಮಾಡುತ್ತದೆ. ಇದರಲ್ಲಿ ವ್ಯತ್ಯಾಸಗಳು ಕಂಡು ಬಂದಲ್ಲಿ ಮಾತ್ರವೇ ಕಡಿಮೆ ಸಂಖ್ಯೆಯ ನೇಮಕಾತಿಗಳು ಆಗುತ್ತವೆ. ಕಳೆದ ಸುಮಾರು 14 ತಿಂಗಳುಗಳಲ್ಲಿ ದೇಶದ ಸಾಕಷ್ಟು ಕಂಪನಿಗಳ ಉದ್ಯೋಗಿಗಳ ವಜಾ (Layoff) ನೋಡಿದ್ದೇವೆ.

recruitment-in-2023-2024-financial-year

ಇತ್ತ ಟಿಸಿಎಲ್ ಕಂಪನಿ ಬಹುದೊಡ್ಡ ನೇಮಕಾತಿ ಮಾಡಿಕೊಂಡಿದೆ. ಉತ್ತಮ ಉದ್ಯೋಗಿ ಸಮೂಹ ನಿರ್ಮಾಣಕ್ಕಾಗಿ ಬೇಕಾದಷ್ಟು ನೇಮಕಾತಿ ಮಾಡಿಕೊಂಡಿದ್ದೇವೆ. ಹೀಗಾಗಿಯೇ ಕಂಪನಿಯ ಕಾರ್ಯನಿರ್ವಹಣೆಯು ಶೇಕಡಾ 85ರಿಂದ ಶೇಕಡಾ 87-90ರಷ್ಟು ಏರಿಕೆ ಆಗಿದೆ.

ಕಂಪನಿಗೆ ಬೇಕಾದ ಉದ್ಯೋಗಿ ಬೇಡಿಕೆಯನ್ನು ಪೂರೈಸಲು ನಾವು ಬೆಂಚ್ ಹೊಂದಿದ್ದು, ಒಟ್ಟು ಸುಮಾರು 6 ಲಕ್ಷ ಉದ್ಯೋಗಿಗಳಲ್ಲಿ ಶೇಕಡಾ 10ರಷ್ಟು ಮಂದಿ ಈ ಬೆಂಚ್‌ನಲ್ಲಿದ್ದಾರೆ. ಅವರನ್ನು ಸೂಕ್ತ ತರಬೇತಿ ನೀಡಿ ಸಂಸ್ಥೆ ಉನ್ನತೀಕರಣಕ್ಕೆ ಶ್ರಮಿಸುತ್ತಾರೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+