ಎಸ್ ಬಿಐನಲ್ಲಿ 2200 ಹುದ್ದೆಗಳಿವೆ ಈಗಲೇ ಅರ್ಜಿ ಹಾಕಿ

Posted By:
Subscribe to Oneindia Kannada

ಬೆಂಗಳೂರು, ಮೇ 06: ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ದೇಶದೆಲ್ಲೆಡೆ ಪ್ರೊಬೇಷನರಿ ಆಫೀಸರ್ (ಪಿಒ) ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಸುಮಾರು 2,200 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಮೇ 04 ರಿಂದ 24ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಜ್ಯೂನಿಯರ್ ಅಸೋಸಿಯೇಟ್, ಜ್ಯೂನಿಯರ್ ಅಗ್ರಿಕಲ್ಚರ್ ಅಸೋಸಿಯೇಟ್ ಸೇರಿದಂತೆ ಕ್ಲಕ್ ಶ್ರೇಣಿಯ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ನಂತರ ಈಗ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿಗೆ ಎಸ್ ಬಿಐ ಮುಂದಾಗಿದೆ. [ಈ ಸುದ್ದಿಯನ್ನು ಇಂಗ್ಲೀಷ್ ನಲ್ಲಿ ಓದಲು ಕ್ಲಿಕ್ ಮಾಡಿ]

ಒಟ್ಟು ಹುದ್ದೆಗಳು: 2,200ಹುದ್ದೆಗಳು
ಪರಿಶಿಷ್ಟ ಜಾತಿ (ಎಸ್ ಸಿ) : 351 ಹುದ್ದೆಗಳು
ಪರಿಶಿಷ್ಟ ಪಂಗಡ (ಎಸ್ ಟಿ) : 231
ಹಿಂದುಳಿದ ವರ್ಗ (ಒಬಿಸಿ): 590
ಸಾಮಾನ್ಯ ವರ್ಗ: 1028

ಅರ್ಹತೆಯುಳ್ಳ ಅಭ್ಯರ್ಥಿಗಳು www.sbi.co.in ಅಥವಾ www.statebankofindia ವೆಬ್ ತಾಣಕ್ಕೆ ಭೇಟಿ ನೀಡಿ ಮೇ 24ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳ ವಯೋಮಿತಿ, ವಿದ್ಯಾರ್ಹತೆ, ಅರ್ಜಿ ಸಲ್ಲಿಸಬೇಕಾದ ವಿಳಾಸ ಮುಂತಾದ ವಿವರ ಮುಂದೆ ಓದಿ...

ಅಭ್ಯರ್ಥಿಗಳಿಗೆ ವಯೋಮಿತಿ

ಅಭ್ಯರ್ಥಿಗಳಿಗೆ ವಯೋಮಿತಿ

ವಯೋಮಿತಿ: 01/04/2016ರಂತೆ ಅಭ್ಯರ್ಥಿಯ ವಯಸ್ಸು 21 ರಿಂದ 30 ವರ್ಷ ವಯಸ್ಸಾಗಿರಬೇಕು. (02-04-1986 ರಿಂದ 01-04-1995 ರ ಜನನವಾಗಿರುವವರು). ಎಸ್/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿಗೆ 3 ವರ್ಷ ವಿನಾಯಿತಿ ಇರುತ್ತದೆ.

ಅಭ್ಯರ್ಥಿಗಳಿಗೆ ವಿದ್ಯಾರ್ಹತೆ, ಆಯ್ಕೆ ಪ್ರಕ್ರಿಯೆ

ಅಭ್ಯರ್ಥಿಗಳಿಗೆ ವಿದ್ಯಾರ್ಹತೆ, ಆಯ್ಕೆ ಪ್ರಕ್ರಿಯೆ

* ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಪದವಿ ಪಡೆದಿರಬೇಕು.
* ಅರ್ಹತೆ, ಅನುಭವ ಆಧಾರ ಮೇಲೆ ಸಂದರ್ಶನ ಮಾಡಿ ಆಯ್ಕೆ ಮಾಡಲಾಗುತ್ತದೆ.
* ಆನ್ ಲೈನ್ ಪರೀಕ್ಷೆ (ಪ್ರಿಮಿಲಿನರಿ ಹಾಗೂ ಮುಖ್ಯ ಪರೀಕ್ಷೆ), ಗ್ರೂಪ್ ನಲಿ ಮಾತುಕತೆ, ಸಂದರ್ಶನ ಇರುತ್ತದೆ

ಅರ್ಜಿ ಶುಲ್ಕ ವಿವರ

ಅರ್ಜಿ ಶುಲ್ಕ ವಿವರ

ಸಾಮಾನ್ಯವರ್ಗದ ಅಭ್ಯರ್ಥಿಗಳು Rs. 600/- ಪಾವತಿಸಬೇಕು. (Rs. 100/- for SC/ ST/ PwD ಅಭ್ಯರ್ಥಿಗಳಿಗೆ) ಆನ್ ಲೈನ್ ಗೇಟ್ ವೇ ಮೂಲಕ ಡೆಬಿಟ್/ ಕ್ರೆಡಿಟ್/ ಇಂಟರ್ನೆಟ್ ಬ್ಯಾಂಕಿಂಗ್ ಬಳಸಿ ಪಾವತಿಸಬಹುದು.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸುವುದು ಹೇಗೆ?

ಆನ್ ಲೈನ್ ನಲ್ಲಿ www.statebankofindia.com or www.sbi.co.in ಗೆ ಲಾಗ್ ಇನ್ ಆಗಿ 04/05/2016 ರಿಂದ 24/05/2016 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
*ಪ್ರಿಲಿಮಿನರಿ ಪರೀಕ್ಷೆ ಕಾಲ್ ಲೆಟರ್ ಡೌನ್ ಲೋಡ್ ಮಾಡಲು ದಿನಾಂಕ 14/06/2016 ನಂತರ
* ಪ್ರಿಲಿಮಿನರಿ ಪರೀಕ್ಷಾ ದಿನಾಂಕ ಜೂನ್ 02,03,09 ಹಾಗೂ 10ರಂದು ನಡೆಯುವ ಸಾಧ್ಯತೆಯಿದೆ. ಫಲಿತಾಂಸ 18/047/2016ರಂದು ನಿರೀಕ್ಷಿಸಬಹುದು.
* ಮುಖ್ಯ ಪರೀಕ್ಷೆ 31/07/2016, ಫಲಿತಾಂಶ 16/08/2016

ಖುದ್ದು ಅಥವಾ ಅಂಚೆ ಮೂಲಕ ಕಳಿಸುವವರು

ಖುದ್ದು ಅಥವಾ ಅಂಚೆ ಮೂಲಕ ಕಳಿಸುವವರು

ಖುದ್ದು ಅಥವಾ ಅಂಚೆ ಮೂಲಕ ಕಳಿಸುವವರು State Bank of India, Central Recruitment & Promotion Department, Corporate Centre, 3rd Floor, Atlanta Building, Nariman Point, Mumbai-400 021 ವಿಳಾಸಕ್ಕೆ 24/05/2016 ರೊಳಗೆ ಕಳಿಸಬೇಕು. ಎಸ್ ಬಿಐ ವೆಬ್ ತಾಣದಲ್ಲಿ ಪರೀಕ್ಷೆ ಸಿಲಬಸ್ ಕೂಡಾ ಲಭ್ಯವಿರುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
State Bank of India (SBI) has released the official notification for Probationary Officer (PO) Recruitment 2016. Interested candidates may apply online from 04-05-2016 to 24-05-2016.
Please Wait while comments are loading...