ದಾವಣಗೆರೆಯಲ್ಲಿ ಕೆಲಸ ಖಾಲಿ ಇದೆ; ಅರ್ಜಿ ಹಾಕಿ
ಬೆಂಗಳೂರು, ಜೂನ್ 03 : ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಖಾಲಿ ಇರುವ ವೈದ್ಯಾಧಿಕಾರಿ ಹುದ್ದೆಯನ್ನು ಭರ್ತಿ ಮಾಡಲಾಗುತ್ತಿದೆ. ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಯಲಿದ್ದು, ಆಸಕ್ತರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
Recommended Video
ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಬೆಂಗಳೂರು, ಎ.ಆರ್.ಟಿ ಕೇಂದ್ರ, ಸಾರ್ವಜನಿಕ ಆಸ್ಪತ್ರೆ, ಚನ್ನಗಿರಿ ಇಲ್ಲಿ ಖಾಲಿ ಇರುವ 1 ವೈದ್ಯಾಧಿಕಾರಿ ಹುದ್ದೆಯನ್ನು ಭರ್ತಿ ಮಾಡಲಾಗುತ್ತಿದೆ. ಏಳು ದಿನದಲ್ಲಿ ಆಸಕ್ತರು ಅರ್ಜಿ ಹಾಕಬಹುದು.
ಮುಖ್ಯ ವೈದ್ಯಾಧಿಕಾರಿಗಳ ಕೊಠಡಿಯಲ್ಲಿ ನೇರ ಸಂದರ್ಶನದ ಮೂಲಕ ನೇಮಕಾತಿ ನಡೆಯಲಿದೆ. ಪತ್ರಿಕೆಯಲ್ಲಿ ಪ್ರಕಟಣೆಗೊಂಡ ದಿನಾಂಕದಿಂದ 7 ದಿನಗಳೊಳಗೆ ಅರ್ಜಿಗಳನ್ನು ಎ.ಆರ್.ಟಿ ಕೇಂದ್ರದ ರೂಂ. ನಂ 24 ರಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು.

ಅರ್ಜಿಗಳನ್ನು ಬೆಳಗ್ಗೆ 9 ರಿಂದ ಸಂಜೆ 4 ಗಂಟೆ ತನಕ ಮಾತ್ರ ಸ್ವೀಕಾರ ಮಾಡಲಾಗುತ್ತದೆ. ಅರ್ಜಿ ಸಲ್ಲಿಸುವವರು ಎಲ್ಲಾ ಶೈಕ್ಷಣಿಕ ದಾಖಲಾತಿಗಳ ಮೂಲ ಪ್ರತಿಗಳು ಹಾಗೂ 2 ಪ್ರತಿ ಜೆರಾಕ್ಸ್ ಪ್ರತಿಗಳನ್ನು, ಇತ್ತೀಚಿನ ಪಾಸ್‍ಪೋರ್ಟ್ ಸೈಜಿನ 2 ಭಾವಚಿತ್ರಗಳನ್ನು ತರಬೇಕು.
ಅರ್ಜಿ ಅಲ್ಲಿಸುವವರು 65 ವರ್ಷ ವಯೋಮಿತಿ ಮೀರಿರಬಾರದು. ನೇಮಕಾತಿ ಸಮಿತಿಯ ನಿರ್ಧಾರವೇ ಅಂತಿಮ ನಿರ್ಧಾರವಾಗಿರುತ್ತದೆ ಎಂದು ಚನ್ನಗಿರಿ ಸಾರ್ವಜನಿಕ ಆಸ್ಪತ್ರೆಯ ಎ.ಆರ್.ಟಿ ಕೇಂದ್ರದ ನೋಡಲ್ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications