Teachers recruitment 2025: ಪ್ರಾಥಮಿ ಶಾಲೆಗಳಲ್ಲಿ 1,180 ಸಹಾಯಕ ಶಿಕ್ಷಕರ ನೇಮಕಾತಿ
Teachers recruitment 2025: ಶಿಕ್ಷಕ ಹುದ್ದೆ ನಿರೀಕ್ಷೆಯಲ್ಲಿರುವವರಿಗೆ ಶುಭಸುದ್ದಿಯೊಂದು ಇಲ್ಲಿದೆ. ಪ್ರಾಥಮಿ ಶಾಲೆಗಳಲ್ಲಿ 1,180 ಸಹಾಯಕ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನ ಬಿಡುಗಡೆ ಮಾಡಲಾಗಿದೆ. ಹಾಗಾದ್ರೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ ಯಾವಾಗ? ಯಾರೆಲ್ಲಾ ಅರ್ಹರು ಹಾಗೂ ಎಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಶಿಕ್ಷಣ ಇಲಾಖೆಯು ನೇಮಕಾತಿ ಪ್ರಕ್ರಿಯೆ ಆರಂಭಿಸುವುದೇ ಬಲೂ ಅಪರೂಪ. ಇಂತಹದದ್ದರಲ್ಲೂ ಇದೀಗ ದೆಹಲಿ ಅಧೀನ ಸೇವೆಗಳ ಆಯ್ಕೆ ಮಂಡಳಿ ಪ್ರಾಥಮಿಕ ಶಾಲೆಗಳಲ್ಲಿ 1,180 ಸಹಾಯಕ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನ ಹೊರಡಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸೆಪ್ಟೆಂಬರ್ 17 ರಿಂದ ಪ್ರಾರಂಭ ಆಗಲಿದ್ದು, ಕೊನೇ ದಿನಾಂಕ ಅಕ್ಟೋಬರ್ 16 ಆಗಿದೆ. ಆಸಕ್ತ ಅಭ್ಯರ್ಥಿಗಳು ಮಂಡಳಿಯ ಅಧಿಕೃತ ವೆಬ್‌ಸೈಟ್ dsssb.delhi.gov.in ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು ಎಂದು ತಿಳಿಸಲಾಗಿದೆ.

ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?: ಸಹಾಯಕ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ ಶೇಕಡ 50 ಅಂಕಗಳೊಂದಿಗೆ 12ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಜಿತೆಗೆ ಅವರು ಡಿ.ಎಲ್.ಎಡ್ ಪದವಿ ಹಾಗೂ ಮಾನ್ಯ ಸಿಟಿಇಟಿ ಪ್ರಮಾಣ ಪತ್ರವನ್ನು ಹೊಂದಿರಬೇಕಾಗುತ್ತದೆ.
ವಯೋಮಿತಿ ವಿವರ: ಅರ್ಜಿ ಸಲ್ಲಿಕೆ ಮಾಡುವವರ ವಯಸ್ಸು 30 ವರ್ಷಗಳು ಮೀರಿರಬಾರದು. ಮೀಸಲು ವರ್ಗದ ಅಭ್ಯರ್ಥಿಗಳಿಗೆ ಸರ್ಕಾರಿ ನಿಯಮಗಳ ಪ್ರಕಾರ, ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಕೆ ಶುಲ್ಕ 100 ರೂಪಾಯಿ, ಮಹಿಳೆಯರು, ಎಸ್‌ಸಿ, ಎಸ್‌ಟಿ ಮತ್ತು ವಿಕಲಚೇತನ ವರ್ಗದ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ ಎಂದು ತಿಳಿಸಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನಗಳು
* ಅಧಿಕೃತ ವೆಬ್‌ಸೈಟ್ dsssb.delhi.gov.inಗೆ ಭೇಟಿ ನೀಡಿ.
* ಮುಖಪುಟದಲ್ಲಿ ಕಾಣುವ ಆನ್‌ಲೈನ್‌ನಲ್ಲಿ ಅನ್ವಯಿಸು ಎಂಬುದರ ಮೇಲೆ ಕ್ಲಿಕ್ ಮಾಡಿ
* ಈಗಲೇ ನೋಂದಾಯಿಸಿ ಎಂಬುದರ ಮೇಲೆ ಕ್ಲಿಕ್ ಮಾಡುವ ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡಿ
* ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
* ಶುಲ್ಕವನ್ನು ಪಾವತಿಸಿ, ಅಲ್ಲಿ ಸಲ್ಲಿಕೆ ಮಾಡಿ
ಆಯ್ಕೆ ಪ್ರಕ್ರಿಯೆ: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮೂಲಕ ಸಿದ್ಧಪಡಿಸಿದ ಅರ್ಹತೆಯ ಆಧಾರತ ಮೇಲೆ ಆಯ್ಕೆ ಪ್ರಕ್ರೊಯೆ ನಡೆಯಲಿದೆ. ಪರೀಕ್ಷೆಯನ್ನು ಸಿಬಿಟಿ ಮೂಲಕ ನಡೆಸಲಾಗುತ್ತದೆ. ಈ ನೇಮಕಾತಿ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಬಿಡುಗಡೆ ಆಗಿರುವ ಖಾಲಿ ಹುದ್ದೆಯ ಅಧಿಸೂಚನೆಯನ್ನು ಪರಿಶೀಲಿಸಬಹುದಾಗಿದೆ. ಅಧಿಕೃತ ವೆಬ್‌ಸೈಟ್‌ಗೂ ಭೇಟಿ ನೀಡಿ ಮಾಹಿತಿ ಪಡೆಯಬಹುದು. ಹೀಗೆ ಶಿಕ್ಷಣ ಇಲಾಖೆ ನೇಮಕಾತಿ ಪ್ರಕ್ರಿಯೆ ಆರಂಭಿಸುವುದು ಬಲು ಅಪರೂಪ ಆಗಿದ್ದು, ಇದಕ್ಕಾಗಿಯೇ ಅಭ್ಯರ್ಥಿಗಳು ಕಾದು ಕುಳಿತಿರುತ್ತಾರೆ. ಇದೀಗ ನೇಮಕಾತಿ ಮಾಡಿಕೊಳ್ಳಲು ಮುಂದಾಗಿರುವುದರಿಂದ ಅಭ್ಯರ್ಥಿಗಳು ಸರದಿಯಲ್ಲಿ ಅರ್ಜಿ ಸಲ್ಲಿಕೆಗೆ ಮುಂದಾಗಿದ್ದಾರೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಇದೇ ಸೆಪ್ಟೆಂಬರ್ 17ರಿಂದ ಪ್ರಾರಂಭ ಆಗಲಿದೆ.












Click it and Unblock the Notifications