ಎಸ್ ಬಿಐನಲ್ಲಿ ಮುಖ್ಯ ಮ್ಯಾನೇಜರ್ ಹುದ್ದೆಗಳಿವೆ, ಅರ್ಜಿ ಹಾಕಿ

Posted By:
Subscribe to Oneindia Kannada

ಬೆಂಗಳೂರು, ಜನವರಿ 04: ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ಚೀಫ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಡೆಪ್ಯುಟಿ ಮ್ಯಾನೇಜರ್, ಸೇರಿದಂತೆ 11ಕ್ಕೂ ಅಧಿಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅರ್ಹ ಅಭ್ಯರ್ಥಿಗಳು ಜನವರಿ 13ರೊಳಗೆ ಅರ್ಜಿ ಸಲ್ಲಿಸಬಹುದು.

ಹುದ್ದೆಯ ಹೆಸರು: ಚೀಫ್ ಮ್ಯಾನೇಜರ್
ಅರ್ಹತೆ: CA, MBA, MSC, MBA, PGDBM
ಕಾರ್ಯಕ್ಷೇತ್ರ: ಭಾರತದೆಲ್ಲೆಡೆ
ಕೊನೆ ದಿನಾಂಕ: 13 ಜನವರಿ 2017

ಒಟ್ಟು ಹುದ್ದೆಗಳು: 11
ವಯೋಮಿತಿ: 28ರಿಂದ 40 ವರ್ಷ ವಯಸ್ಸು (ಡಿಸೆಂಬರ್ 1, 2016ರಂತೆ ಅನ್ವಯ)
ಸಂಬಳ ವಿವರ: 50,030 ರಿಂದ 59,170 ಪ್ರತಿ ತಿಂಗಳಿಗೆ

SBI Recruitment 2017 Notification Chief Manager Posts

ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿರಬೇಕು. ಸಿಎ/ಎಂಬಿಎ/ ಪಿಜಿಡಿಬಿಎಂ

ಆಯ್ಕೆ ಪ್ರಕ್ರಿಯೆ: ವೈಯಕ್ತಿಕ ಸಂದರ್ಶನದ ಆಧಾರದ ಮೇಲೆ ಆಯ್ಕೆ ನಡೆಯಲಿದೆ.

ಅರ್ಜಿ ಸಲ್ಲಿಸುವುದು ಹೇಗೆ? : ಸೂಕ್ತ ಅರ್ಹತೆಯುಳ್ಳ ಅಭ್ಯರ್ಥಿಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್ ಸೈಟ್ ಮೂಲಕ ಡಿಸೆಂಬರ್ 29, 2016 ರಿಂದ ಜನವರಿ 13, 2017ರೊಳಗೆ ಅರ್ಜಿ ಸಲ್ಲಿಸಬಹುದು.

ನೇರ ಅರ್ಜಿ ಸಲ್ಲಿಸಲು ವಿಳಾಸ:
Central recruitment and promotion department,
Corporate Centre,
3rd floor,
Atlanta building,
Nariman point,
Mumbai:- 400021

ಅಂಚೆ ಮೂಲಕ ನೇರ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಜನವರಿ 20, 2017.

ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ

(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
SBI Recruitment 2017 Notification Chef manager 11 vacancies :- State bank of India (SBI) invite application for the position of 11 Chef manager, Deputy Manager and Manager vacancies in state bank of India. Apply online before 13th January 2017.
Please Wait while comments are loading...