RRB Recruitment: ರೈಲ್ವೇ ನೇಮಕಾತಿ ಮಂಡಳಿಯಿಂದ 753 ಭರ್ಜರಿ ನೇಮಕಾತಿ
ಬೆಂಗಳೂರು, ಡಿಸೆಂಬರ್ 19: ರೈಲ್ವೇ ನೇಮಕಾತಿ ಮಂಡಳಿ (RRB) ತನ್ನಲ್ಲಿ ಖಾಲಿ ಇರುವ ಬೋಧಕ ನೂರಾರು ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಇದು 2025ರ ಸಾಲಿನಲ್ಲಿ ನಡೆಯಲಿದೆ. ಭಾರತೀಯ ರೈಲ್ವೆಯ ವ್ಯಾಪ್ತಿಯಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು
ಬೋಧಕ ವೃತ್ತಿಯಲ್ಲಿ ಆಸಕ್ತಿವುಳ್ಳವರು ಹಾಗೂ ಕೇಂದ್ರ ಸರ್ಕಾರಿ ವ್ಯಾಪ್ತಿಯಲ್ಲಿ ಉದ್ಯೋಗ ಹೊಂದುವ ಆಸೆ ಇರುವವರು ಕೂಡಲೇ ಅರ್ಜಿ ಸಲ್ಲಿಸಬಹುದು. ವಿವಿಧೆಡೆ ಖಾಲಿ ಇರುವ 753 ಬೋಧನಾ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು.

ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿ ಬೋಧನಾ ವೃತ್ತಿ ಆರಂಭಿಸಲು ಇಚ್ಛಿಸುವವರು ಅರ್ಜಿ ಸಲ್ಲಿಸಬೇಕು. ಅದಕ್ಕು ಮೊದಲು ಇಲ್ಲಿ ನೀಡಲಾಗಿರುವ ಶೈಕ್ಷಣಿಕ ಅರ್ಹತೆ, ವಯೋಮಿತಿ, ಇನ್ನಿತರ ಮಾಹಿತಿ ತಿಳಿಯಬೇಕು.
ನೇಮಕಾತಿ ಪೂರ್ಣ ಮಾಹಿತಿ
ನೇಮಕಾತಿ ಸಂಸ್ಥೆ: ರೈಲ್ವೇ ನೇಮಕಾತಿ ಮಂಡಳಿ (RRB)
ಹುದ್ದೆಗಳ ಹೆಸರು: ಶಿಕ್ಷಕ ವೃತ್ತಿ
ಒಟ್ಟು ಹುದ್ದೆಗಳು: 753
ಅರ್ಜಿ ಸಲ್ಲಿಕೆ ಕೊನೆ ದಿನ: ಫೆಬ್ರವರಿ 06
ಪೋಸ್ಟಿಂಗ್: ಭಾರತಾದ್ಯಂತ
ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್
ಖಾಲಿ ಹುದ್ದೆಗಳ ಇತರ ಮಾಹಿತಿ
ರೈಲ್ವೇ ನೇಮಕಾತಿ ಮಂಡಳಿ (RRB) ಹುದ್ದೆಗಳ ಇತರ ಮಾಹಿತಿ ನೋಡುವುದಾದರೆ, ಶಿಕ್ಷಕರ ಹುದ್ದೆಗಳಲ್ಲಿ ಸ್ನಾತಕೋತ್ತರ ಶಿಕ್ಷಕರ 187 ಹುದ್ದೆಗಳು, ತರಬೇತಿ ಪಡೆದ ಪದವೀಧರ ಶಿಕ್ಷಕರ 338 ಹುದ್ದೆ, ಪ್ರಾಥಮಿಕ ಶಿಕ್ಷಕರು 188, ಸಹಾಯಕ ಶಿಕ್ಷಕ (ಮಹಿಳೆ) (ಕಿರಿಯ ಶಾಲೆ) 2 ಹಾಗೂ ಗ್ರಂಥಪಾಲಕ 10 ಹುದ್ದೆಗಳು. ದೈಹಿಕ ತರಬೇತಿ ಬೋಧಕ 18, ಪ್ರಯೋಗಾಲಯ ಸಹಾಯಕ (ಶಾಲೆ) 7, ಸಂಗೀತ ಶಿಕ್ಷಕ 3 ಹುದ್ದೆಗಳು ಸೇರಿ ಒಟ್ಟು 753 ಶಿಕ್ಷಕ ಹುದ್ದೆಗಳು ಖಾಲಿ ಇವೆ ಎಂದು ಆರ್‌ಆರ್‌ಬಿ ಅಧಿಸೂಚನೆ ಮಾಹಿತಿ ನೀಡಿದೆ.

RRB ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಕೆ ಹೇಗೆ
ಅರ್ಹರಿಂದ ಒಟ್ಟು 753 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯು ಮುಂದಿನ ವರ್ಷ 2025ರ ಜನವರಿ 7ರಿಂದ ಆರಂಭವಾಗಲಿದೆ. ಫೆಬ್ರವರಿ 6 ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕವಾಗಿದ್ದು, 2025ರ ಮಾರ್ಚ್ ಹೊತ್ತಿಗೆ ಪರೀಕ್ಷೆ ನಿರೀಕ್ಷಿಸಲಾಗಿದೆ.
ಅಭ್ಯರ್ಥಿಗಳು ದಾಖಲೆಗಳ ಸಮೇತ ಭರ್ತಿ ಮಾಡಿದ ಅರ್ಜಿಯನ್ನು ಇಲ್ಲಿನ ಅಧಿಕೃತ ವೆಬ್‌ಸೈಟ್ www.rrbapply.gov.in ಗೆ ನಿಗದಿತ ದಿನಾಂಕದೊಳಗೆ ಸಲ್ಲಿಸಬೇಕು. ಅಧಿಸೂಚನೆ ಓದಿಕೊಂಡು ನಿಮ್ಮ ನಿಮ್ಮ ವಿದ್ಯಾರ್ಹತೆಗೆ ಸರಿ ಹೊಂದುವ ಹುದ್ದೆಗಳಿಗೆ ತಾವುಗಳು ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಕೆ ವಿಧಾನಗಳು
ಅಭ್ಯರ್ಥಿಗಳು ಮೊದಲು RRB ಅಧಿಕೃತ ವೆಬ್‌ಸೈಟ್‌ಗೆ www.rrbapply.gov.in ಭೇಟಿ ನೀಡಬೇಕು. ಒಮ್ಮೆ ನೋಂದಾಯಿಸಿದರೆ, ಅದರ ವಿವರಗಳೇ ಮುಂದಿನ ಪ್ರಕ್ರಿಯೆಗೂ ಬಳಕೆ ಆಗುತ್ತವೆ. ಮೊದಲು ನಿಮ್ಮ ವೈಯಕ್ತಿಕ ವಿವರ ನಮೂದಿಸಬೇಕು. ಹೆಸರು ಮತ್ತು ಪಾಸ್‌ವರ್ಡ್ ಹಾಕಿ ಹೊಸದಾಗಿ ಖಾತೆ ರಚಿಸಿ ಲಾಗಿನ್ ಆಗಬೇಕು.
ವೈಯಕ್ತಿಕ ವಿವರ, ಶಿಕ್ಷಣ, ಇತಿಹಾಸ ವೃತ್ತಿಪರ ಅನುಭವ ಮಾಹಿತಿ ನೀಡಬೇಕು. ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋ, ಸಹಿ ಮತ್ತು ನಿಮ್ಮ ಶೈಕ್ಷಣಿಕ ಪ್ರಮಾಣ ಪತ್ರ ದಾಖಲು ಮಾಡಬೇಕು.
ಅರ್ಜಿ ಶುಲ್ಕದ ವಿವರ
ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಬಳಿಕ ಅಭ್ಯರ್ಥಿಗಳು ಡೆಬಿಟ್/ಕ್ರೆಡಿಟ್ ಕಾರ್ಡ್ ಹಾಗೂ ಇಂಟರ್‌ನೆಟ್ ಬ್ಯಾಂಕಿಂಗ್ ಮೂಲಕ ಆನ್‌ಲೈನ್‌ನಲ್ಲಿಯೇ ಅರ್ಜಿ ಶುಲ್ಕ ಪಾವತಿಸಬೇಕು. ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.











Click it and Unblock the Notifications