RITES ನೇಮಕಾತಿ 2020: 100 ಅಪ್ರೆಂಟಿಸ್ ಹುದ್ದೆಗಳಿವೆ
ನವದೆಹಲಿ, ಜನವರಿ 22: ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವಾ ಸಂಸ್ಥೆ(RITES) 2020ನೇ ಸಾಲಿನ ನೇಮಕಾತಿ ಆರಂಭಿಸಿದೆ. ಈ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ಅಪ್ರೆಂಟಿಸ್ ಹುದ್ದೆಗಳಿಗೆ ಆಯ್ಕೆಯಾಗ ಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಜನವರಿ 31 ಕೊನೆಯ ದಿನವಾಗಿದೆ.
ಸಂಸ್ಥೆ ಹೆಸರು: Rail India Technical and Economic Service Limited
ಹುದ್ದೆ ಹೆಸರು: Apprentice
ಒಟ್ಟು ಹುದ್ದೆ: 100
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಜನವರಿ 31, 2020

ವಿದ್ಯಾರ್ಹತೆ:
ಪದವಿ ಅಪ್ರೆಂಟಿಸ್ : ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಇ/ ಬಿ. ಟೆಕ್ ಮೆಕ್ಯಾನಿಕಲ್/ ಅಟೋಮೊಬೈಲ್/ ಎಲೆಕ್ಟ್ರಿಕಲ್
ಡಿಪ್ಲೋಮಾ ಅಪ್ರೆಂಟಿಸ್: ಡಿಪ್ಲೋಮಾ ಇನ್ ಎಲೆಕ್ಟ್ರಿಕಲ್ / ಮೆಕ್ಯಾನಿಕಲ್/ ಅಟೋಮೊಬೈಲ್.
ಟ್ರೇಡ್ ಅಪ್ರೆಂಟಿಸ್(ಐಟಿಐ ಪಾಸ್): ಮೆಕ್ಯಾನಿಕಲ್/ ಅಟೋಮೊಬೈಲ್/ ಎಲೆಕ್ಟ್ರಿಕಲ್ ಸಂಬಂಧಿಸಿದ ಐಟಿಐ.
ವಯೋಮಿತಿ: 21 ರಿಂದ 30 ವರ್ಷ, ರೈಟ್ಸ್ ಅಧಿಸೂಚನೆ ನೋಡತಕ್ಕದ್ದು.
ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕವಿಲ್ಲ.
ಪ್ರಮುಖ ದಿನಾಂಕ:
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 15.01.2020
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 31.01.2020
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ












Click it and Unblock the Notifications