ಕೊಡಗಿನಲ್ಲಿ ಉದ್ಯೋಗ ಮೇಳ, ಹೆಸರು ನೋಂದಾಯಿಸಿ
ಕೊಡಗು, ಮೇ 29 : ಕೊಡಗು ಜಿಲ್ಲಾಡಳಿತ ಮತ್ತು ಕೊಡಗು ಜಿಲ್ಲಾ ಪಂಚಾಯಿತಿ ಜಂಟಿಯಾಗಿ ಜೂನ್ 14ರಂದು ಉದ್ಯೋಗ ಮೇಳವನ್ನು ಆಯೋಜಿಸಿವೆ. ಮೇಳದಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳು ಮೊದಲೇ ತಮ್ಮ ಹೆಸರನ್ನು ನೋಂದಾಯಿಸಬೇಕಾಗಿದೆ.
50ಕ್ಕೂ ಹೆಚ್ಚು ಕಂಪನಿಗಳು ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿದ್ದು, ಹೆಸರು ನೋಂದಾವಣೆ ಮಾಡಿದವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗುತ್ತದೆ. ಆನ್‌ಲೈನ್ ಮೂಲಕ ಅಥವ ಜಿಲ್ಲಾ ಪಂಚಾಯಿತಿ ಕಚೇರಿಗೆ ಭೇಟಿ ನೀಡುವ ಮೂಲಕ ಅಭ್ಯರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಬಹುದಾಗಿದೆ. [ಉದ್ಯೋಗ ಮೇಳದ ವೆಬ್ ಸೈಟ್]

ಜೂನ್ 14ರ ಭಾನುವಾರ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯ ತನಕ ಉದ್ಯೋಗ ಮೇಳ ನಡೆಯಲಿದೆ. ಹೆಸರು ನೋಂದಾಯಿಸಿದ ಅಭ್ಯರ್ಥಿಗಳು ಉದ್ಯೋಗ ಮೇಳಕ್ಕೆ ಬರುವಾಗ ಹೆಸರು ನೋಂದಣಿ ಮಾಡಿದ್ದಕ್ಕೆ ದೃಡೀಕರಣ ಪತ್ರವನ್ನು ತರಬೇಕಾಗುತ್ತದೆ.
ಉದ್ಯೋಗ ಮೇಳಕ್ಕೆ ಬರುವ ಅಭ್ಯರ್ಥಿಗಳು ಸ್ವಂತ ವಿವರವುಳ್ಳ ಬಯೋಡೆಟಾ, ಪ್ರಮಾಣ ಪತ್ರಗಳ ನಕಲು ಪತ್ರಿಯನ್ನು ತರುವಂತೆ ಮನವಿ ಮಾಡಲಾಗಿದೆ. ಉದ್ಯೋಗ ಮೇಳ, ನೋಂದಣಿ ಮುಂತಾದವುಗಳಿಗೆ ಅಭ್ಯರ್ಥಿಗಳು ಯಾವುದೇ ಶುಲ್ಕವನ್ನು ಪಾವತಿ ಮಾಡಬೇಕಾಗಿಲ್ಲ.
ಹೆಚ್ಚಿನ ಮಾಹಿತಿಗಾಗಿ : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ 08272-225851ಯನ್ನು ಸಂಪರ್ಕಿಸಬಹುದಾಗಿದೆ.












Click it and Unblock the Notifications