Karnataka Govt Jobs: ಸರ್ಕಾರಿ ಇಲಾಖೆಯಲ್ಲಿ 47 ಹುದ್ದೆಗಳು ಖಾಲಿ ಇವೆ
ಬೆಂಗಳೂರು, ಸೆಪ್ಟಂಬರ್ 16: ಕರ್ನಾಟಕ ರಾಜ್ಯ ಸರ್ಕಾರವು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ (RDWSD) ಖಾಲಿ ಇರುವ ಅನೇಕ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಿದೆ. ಈ ನಿಮಿತ್ತ ಅರ್ಹ ಅಭ್ಯರ್ಥಿಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಗೆ ಸೆಪ್ಟಂಬರ್ 23 ಕೊನೆಯ ದಿನವಾಗಿದೆ. ಸರ್ಕಾರಿ ಉದ್ಯೋಗ ಪಡೆಯಲು ಇಚ್ಚಿಸುವವರಿಗೆ ಇದೊಂದು ಉತ್ತಮ ಸುವರ್ಣ ಅವಕಾಶವಾಗಿದೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ (RDWSD) ವ್ಯಾಪ್ತಿಯಲ್ಲಿ ಒಟ್ಟು 47 ಕನ್ಸಲ್ಟೆಂಟ್, ಕೋ-ಆರ್ಡಿನೇಟರ್ ಹುದ್ದೆಗಳು ಖಾಲಿ ಇವೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ ವರೆಗೆ ಕಾಯದೇ ಈ ಕೂಡಲೇ ಅರ್ಜಿ ಸಲ್ಲಿಸುವಂತೆ ಇಲಾಖೆ ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಆಸಕ್ತರು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಇದಕ್ಕು ಮೊದಲು ನೇಮಕಾತಿ ಹೇಗೆ ನಡೆಯುತ್ತದೆ, ಮಾಸಿಕ ವೇತನ, ಗರಿಷ್ಠ ವಯೋಮಿತಿ, ವಿದ್ಯಾರ್ಹತೆ ವಿವರದ ಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.
ನೇಮಕಾತಿ ಪೂರ್ಣ ಮಾಹಿತಿ
ನೇಮಕಾತಿ ಸಂಸ್ಥೆ ಹೆಸರು: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ
ಹುದ್ದೆ ಹೆಸರು: ಕನ್ಸಲ್ಟೆಂಟ್, ಕೋ-ಆರ್ಡಿನೇಟರ್ ಹುದ್ದೆ
ಒಟ್ಟು ಹುದ್ದೆಗಳು: 47
ಅರ್ಜಿ ಸಲ್ಲಿಕೆ ಕೊನೆ ದಿನ: ಸೆಪ್ಟಂಬರ್ 23
ಪೋಸ್ಟಿಂಗ್ ಎಲ್ಲಿ: ಕರ್ನಾಟಕ
ಮಾಸಿಕ ವೇತನ: ನಿಯಮಾನುಸಾರ
ಇನ್ನೂ ಹುದ್ದೆಗಳ ಇತರ ವಿವರ ನೋಡುವುದಾದರೆ, ಸಂಗ್ರಹಣೆ ಸಲಹೆಗಾರ 9 ಹುದ್ದೆಗಳು, ಹಣಕಾಸು ಸಲಹೆಗಾರ 11,ಮಾನಿಟರಿಂಗ್ ಮತ್ತು ಮೌಲ್ಯಮಾಪನ ಸಲಹೆಗಾರ 10, ಪರಿಸರ ಸಲಹೆಗಾರ 10, ಸಾಮಾಜಿಕ ಅಭಿವೃದ್ಧಿ ಸಲಹೆಗಾರ 7 ಹುದ್ದೆಗಳು ಖಾಲಿ ಇವೆ.

ಶೈಕ್ಷಣಿಕ ಅರ್ಹತೆ
ಈ ಮೇಲಿನ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದರೆ ನೀವು ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಬಿಇ/ಬಿ.ಟೆಕ್, ಬಿಸಿಎ, ಸಿಎಸ್/ಎಂ.ಟೆಕ್, ಎಂಎಸ್‌ಡಬ್ಲು, ಎಂಎ, ಎಂಬಿಎ, ಎಂ.ಕಾಂ ಮತ್ತು ಸ್ನಾತಕೋತ್ತರ ಪದವಿ ಪಡೆದಿರಬೇಕು. ಆಯಾ ಹುದ್ದೆಗೆ ಅನುಗುಣವಾಗಿ ವಿದ್ಯಾರ್ಹತೆ ಪರಿಶೀಲಿಸಿ ಅರ್ಜಿ ಸಲ್ಲಿಸಬೇಕು.
ವಯಸ್ಸಿನ ಮಿತಿ
ಇನ್ನೂ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 45 ಮತ್ತು 50 ವರ್ಷ ನಿಗದಿ ಮಾಡಲಾಗಿದೆ. ಜಾತಿ ಮೀಸಲಾತಿಗೆ ಅನುಗುಣವಾಗಿ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ದೊರೆಯಲಿದೆ ಎಂದು ನೇಮಕಾತಿ ಅಧಿಸೂಚನೆ ತಿಳಿಸಿದೆ.
ಮಾಸಿಕ ವೇತನ
ಒಟ್ಟು ಹುದ್ದೆಗಳ ಪೈಕಿ ಬಹುತೇಕ ಎಲ್ಲ ಹುದ್ದೆಗಳಿಗೆ ಆಯ್ಕೆ ಆದರೆ ಮಾಸಿಕ 50,000 ನಿಂದ 75,000 ರೂಪಾಯಿ,ಐಎಸ್‌ಎ ಕೋ-ಆರ್ಡಿನೇಟರ್ ಹುದ್ದೆಗೆ ಮಾಸಿಕ 1,00,000 ರಿಂದ 1,25,000 ರೂಪಾಯಿ ಹಾಗೂ ನೀರಿನ ಗುಣಮಟ್ಟ ಕೋ-ಆರ್ಡಿನೇಟರ್ ಹುದ್ದೆಗೆ ಮಾಸಿಕ ರೂಪಾಯಿ 75,000 ರಿಂದ 1,00,000 ರೂಪಾಯಿ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ ವಿವರ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ. ಆನ್‌ಲೈನ್ ಮೂಲಕ ಉಚಿತವಾಗಿ ಅರ್ಜಿ ಸಲ್ಲಿಸಬೇಕಿದೆ. ಅಭ್ಯರ್ಥಿಗಳನ್ನು ದಾಖಲಾತಿ ಪರಿಶೀಲನೆ ಹಾಗೂ ನೇರ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆ ಆದವರಿಗೆ ಕರ್ನಾಟಕದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.
ಈ ಕೂಡಲೇ ನೀವು ಅರ್ಜಿಯನ್ನು ಸೂಕ್ತ ದಾಖಲೆಗಳ ಸಹಿತ ಈ ಅಧಿಕೃತ ವೆಬ್‌ಸೈಟ್‌ಗೆ https://www.ksrwspdtsuonline.in/jobapplicationform ಭೇಟಿ ನೀಡಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 080-22533700 ಇಲ್ಲಿಗೆ ಸಂಪರ್ಕಿಸಿ ಅಥವಾ ಇ-ಮೇಲ್ [email protected] ಗೆ ಸಂದೇಶ ಕಳುಹಿಸಬಹುದು.












Click it and Unblock the Notifications