ಆರ್ ಬಿಐ ಬೆಂಗಳೂರು ಸೇರಿ 17ನಗರಗಳಲ್ಲಿ 527 ಹುದ್ದೆಗಳು
ಬೆಂಗಳೂರು, ಜೂ.26: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದೇಶದ ವಿವಿಧೆಡೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಬೆಂಗಳೂರಿನಲ್ಲಿ 40 ಹುದ್ದೆಗಳು ಸೇರಿದಂತೆ 527 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಸಹಾಯಕ ಅಧಿಕಾರಿ (504) ಹಾಗೂ ಜ್ಯೂನಿಯರ್ ಇಂಜಿನಿಯರ್ ಹುದ್ದೆ (23)ಗಳಿಗೆ ಅರ್ಜಿ ಸಲ್ಲಿಸಲು ಜುಲೈ 3 ಕೊನೆ ದಿನಾಂಕವಾಗಿದೆ.
ವಯೋಮಿತಿ ವಿವರ: 01/06/2015 ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಯ ವಯಸ್ಸು 18 ರಿಂದ 28 ಆಗಿರಬೇಕು (02/06/1987 ರಿಂದ 01/06/1997 ಒಳಗೆ ಹುಟ್ಟಿದವರು), ಎಸ್ ಟಿ ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿಗೆ 3 ವರ್ಷ ಹಾಗೂ ಮಾಜಿ ಯೋಧರಿಗೆ 10 ವರ್ಷ ರಿಯಾಯಿತಿ ಇದೆ.
ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಒಂದು ವಿಷಯದಲ್ಲಿ ಪದವಿ ಪಡೆದಿರಬೇಕು. ಕನಿಷ್ಠ 50% ಅಂಕಗಳನ್ನು ಪಡೆದಿರಬೇಕು. ವರ್ಡ್ ಪ್ರೊಸೆಸಿಂಗ್ ಗೊತ್ತಿರಬೇಕು.

ಆಯ್ಕೆ ಪ್ರಕ್ರಿಯೆ: ಆನ್ ಲೈನ್ ಪರೀಕ್ಷೆ ಹಾಗೂ ಸಂದರ್ಶನ ವಿರುತ್ತದೆ.
ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿಗಳಿಗೆ 450 ರು, ಎಸ್ ಸಿ ಎಸ್ಟಿ ಮಾಜಿ ಯೋಧರಿಗೆ 50 ರು ರಿಯಾಯಿತಿ ಇದೆ. ಡೆಬಿಟ್, ಕ್ರೆಡಿಟ್, ರುಪೇ, ವೀಸ್ಸ್, ಮಾಸ್ಟರ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್ ಮೊಬೈಲ್ ವ್ಯಾಲೆಟ್ ಹೀಗೆ ವಿವಿಧ ರೀತಿಯಲ್ಲಿ ಶುಲ್ಕ ಪಾವತಿಸಬಹುದು.
ಯಾವ ಯಾವ ಊರಲ್ಲಿ ಎಷ್ಟೆಷ್ಟು ಹುದ್ದೆಗಳು ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವುದು ಹೇಗೆ?:
* ಆರ್ ಬಿಐ ವೆಬ್ ಸೈಟ್ ಗೆ ಭೇಟಿ ಕೊಡಿ
* Opportunities@RBI ಕ್ಲಿಕ್ ಮಾಡಿ ನಂತರ Current Vacancies>>Vacancies ಗೆ ಹೋಗಿ
* ನಿಮ್ಮ ಆಯ್ಕೆಯ ಹುದ್ದೆಯನ್ನು ಕ್ಲಿಕ್ ಮಾಡಿ
* ಅರ್ಜಿಯನ್ನು ಭರ್ತಿ ಮಾಡಿ, ಪ್ರಿಂಟ್ ಔಟ್ ತೆಗೆದುಕೊಳ್ಳಿ
* ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 3/07/2015
* ಸಂಭಾವ್ಯ ಪರೀಕ್ಷಾ ದಿನಾಂಕಗಳು: 01,08,09,16/08/2015
* ಸಹಾಯಕ ಅಧಿಕಾರಿ ಹಾಗೂ ಜ್ಯೂ. ಇಂಜಿಯರ್ ಹುದ್ದೆಗಳೆರಡಕ್ಕೂ ಇದೇ ಕ್ರಮವನ್ನು ಅನುಸರಿಸಿ ಅರ್ಜಿ ಸಲ್ಲಿಸಬಹುದಾಗಿದೆ.












Click it and Unblock the Notifications