ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ; ಸಂದರ್ಶನ ರದ್ದು
ಬೆಂಗಳೂರು, ಮೇ 19 : ಕರ್ನಾಟಕ ಸರ್ಕಾರ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿಯಲ್ಲಿ ಬದಲಾವಣೆ ಮಾಡಿದೆ. ಈ ಬಾರಿ ನಡೆಯುವ ನೇಮಕಾತಿ ಪ್ರಕ್ರಿಯೆಯಲ್ಲಿ 10 ಅಂಕಗಳಿಗೆ ನಡೆಸುವ ಸಂದರ್ಶನವನ್ನು ರದ್ದುಗೊಳಿಸಲಾಗಿದೆ.
Recommended Video
ಪ್ರಸ್ತುತ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್ ಪಿಎಸ್‌ಐ) 556 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಜೂನ್ 1ರಿಂದ 31ರ ತನಕ ಅರ್ಜಿಗಳನ್ನು ಸಲ್ಲಿಸಲು ಆಸಕ್ತರಿಗೆ ಅವಕಾಶ ನೀಡಲಾಗಿದೆ.
ಈ ಬಾರಿಯ ನೇಮಕಾತಿ ಪ್ರಕ್ರಿಯೆಯಲ್ಲಿ ಲಿಖಿತ, ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆ ಮಾತ್ರ ಇರಲಿದೆ. ಈ ಹಿಂದೆ ನಡೆಸಲಾಗುತ್ತಿದ್ದ 10 ಅಂಕಗಳ ಸಂದರ್ಶವನ್ನು ಕೈ ಬಿಡಲಾಗಿದೆ.

ಪದವಿ ಮತ್ತು ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಕನಿಷ್ಠ 21 ವರ್ಷ ಪೂರೈಸಿರುವ ಅಭ್ಯರ್ಥಿಗಳು ಅರ್ಜಿಗಳನ್ನು ಹಾಕಬಹುದು. ಸಾಮಾನ್ಯ ಅಭ್ಯರ್ಥಿಗೆ 28, ಎಸ್‌ಸಿ/ಎಸ್‌ಟಿ/ಹಿಂದುಳಿದ ವರ್ಗದ ಅಭ್ಯರ್ಥಿಗೆ ಗರಿಷ್ಠ 30 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ.
ಹೊಸ ಅಭ್ಯರ್ಥಿಗಳ ಜೊತೆ ಸೇವಾ ನಿರತರು ಅರ್ಜಿಗಳನ್ನು ಹಾಕಬಹುದು. ಸೇವಾ ನಿರತ ಸಾಮಾನ್ಯ ಅಭ್ಯರ್ಥಿಗಳಿಗೆ 35, ಎಸ್‌ಸಿ/ಎಸ್‌ಟಿ/ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ.
ಹುದ್ದೆಗಳ ವರ್ಗೀಕರಣ ಹೀಗಿದೆ
* ಕರ್ನಾಟಕ - 431 ಹುದ್ದೆ. ಪಿಎಸ್‌ಐ (ಪುರುಷ) 278, ಪಿಎಸ್‌ಐ (ಮಹಿಳೆ) 91, ಸೇವಾ ನಿರತರು (ಪುರುಷ) 46, 16 ಮಹಿಳೆ
* ಕಲ್ಯಾಣ ಕರ್ನಾಟಕ - 125 ಹುದ್ದೆ. ಪಿಎಸ್‌ಐ (ಪುರುಷ) 68, ಪಿಎಸ್‌ಐ (ಮಹಿಳೆ) 26 ಹುದ್ದೆಗಳು. ಸೇವಾ ನಿರತ ಪುರುಷ (12), ಮಹಿಳೆ (3).
ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ www.ksp.gov.in ಸಂಪರ್ಕಿಸಬಹುದು.












Click it and Unblock the Notifications