ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆಯಿಂದ ಆಂಗ್ಲಭಾಷೆ ಕಲಿತು ಉದ್ಯೋಗ ಪಡೆಯುವ ಅವಕಾಶ

|
Google Oneindia Kannada News

ಬೆಂಗಳೂರು, ಡಿಸೆಂಬರ್ 9: ದಿ/ ನಡ್ಜ್ ಫೌಂಡೇಶನ್ ಸಂಸ್ಥೆ ಯುವಕ- ಯುವತಿಯರಿಗೆ ಗುರುಕುಲ ಎಂಬ ಜಾಬ್ ಸ್ಕಿಲ್ ಕೋರ್ಸ್ ಮೂಲಕ 6000 ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಕಾಯಕದಲ್ಲಿ ತೊಡಗಿದೆ. ಕಳೆದೆರಡು ವರ್ಷಗಳಲ್ಲಿ ಕೋವಿಡ್ ಸಂಕಷ್ಟಕ್ಕೆ ಸಿಲುಕಿ ಉದ್ಯೋಗ ಕಳೆದುಕೊಂಡವರಿಗೆ ಈ ಫೌಂಡೇಷನ್ ಆಶಾದೀಪವಾಗಿದೆ.

ಬೆಂಗಳೂರಿನಲ್ಲಿ ಸತತ ಐದು ವರ್ಷಗಳಿಂದ ದಿ/ನಡ್ಜ್ ಸಂಸ್ಥೆ ಯುವಕರಿಗೆ ಶೇ.100ರಷ್ಟು ಉದ್ಯೋಗಾವಕಾಶ ಕಲ್ಪಿಸಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಈಗ ಮನೆಯಲ್ಲಿಯೇ ಕುಳಿತ ಯುವಜನತೆಗೆ ಆಂಗ್ಲ ಭಾಷಾ ಜ್ಞಾನ ಒದಗಿಸುವ ಹಾಗೂ ಅವರಿಗೆ ಅದಕ್ಕೆ ತಕ್ಕ ಪ್ರಮಾಣ ಪತ್ರ ನೀಡಿ, ಉದ್ಯೋಗ ಒದಗಿಸಲು ನೆರವಾಗುವ ವಿನೂತನ ಯೋಜನೆಯೊಂದನ್ನು ಕೂಡ ಈ ಫೌಂಡೇಷನ್ ಆರಂಭಿಸಿದೆ.

ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ಮನೆಯಿಂದ ಹೊರಬಂದು ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದವರಿಗೆ ನಡ್ಜ್ ಫೌಂಡೇಷನ್, "ಫ್ಯೂಚರ್ ಪರ್ಫೆಕ್ಟ್ (Future Perfect)" ಎಂಬ ಯೋಜನೆಯನ್ನು ಆರಂಭಿಸಿದೆ. ಇದರಲ್ಲಿ ಜನರು ಮನೆಯಲ್ಲೇ ಕೂತು 2 ತಿಂಗಳ ಅವಧಿಯಲ್ಲಿ ಪ್ರತಿನಿತ್ಯ ಎರಡು ಗಂಟೆಗಳ ಆಂಗ್ಲ ಭಾಷೆ (ಸ್ಪೋಕನ್ ಇಂಗ್ಲಿಷ್) ಕೋರ್ಸ್ ಪಡೆದುಕೊಳ್ಳಬಹುದಾಗಿದೆ.

Opportunity To Learn English From Home And Get a Job

ಇದರ ಜೊತೆಗೆ ಉದ್ಯೋಗ ಪಡೆಯಲು ಅಗತ್ಯವಿರುವ ಕೌಶಲ್ಯಗಳು ಕಲಿಸಲಾಗುತ್ತದೆ. 2 ತಿಂಗಳ ತರಬೇತಿ ನಂತರ ಸರ್ಟಿಫಿಕೇಟ್ ನೀಡಲಾಗುವುದು ಮತ್ತು ಜೊತೆಗೆ ಉತ್ತಮ ಉದ್ಯೋಗದಲ್ಲಿ ನಿಯೋಜನೆಗೊಳ್ಳಲು ನೆರವು ಒದಗಿಸಲಾಗುವುದು.

ಫ್ಯೂಚರ್ ಪರ್ಫೆಕ್ಟ್ (Future perfect) 10 ರಾಜ್ಯಗಳಾದ್ಯಂತ 18,200 ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸಿದೆ. ವಿದ್ಯಾರ್ಥಿಗಳು, ಕುಟುಂಬ ಸಾಲಗಳಿಗೆ 18% ಹೆಚ್ಚಿನ ಕೊಡುಗೆಗಳನ್ನು ನೀಡಿದ್ದಾರೆ ಮತ್ತು 77% ಹೆಚ್ಚು ಡಿಜಿಟಲ್‌ಗೆ ಸಜ್ಜುಗೊಂಡಿದ್ದಾರೆ. ಈ ಕೋರ್ಸ್‌ನ ವಿದ್ಯಾರ್ಥಿಗಳು ಸ್ಟಾರ್‌ಬಕ್ಸ್‌, ಟಾಟಾ ಸಿಎಚ್‌ಎ, ಆ್ಯಕ್ಸಿಸ್ ಸೆಕ್ಯೂರಿಟಿಗಳು ಮತ್ತು ಗ್ರಾಸ್‌ರೂಟ್‌ ಮುಂತಾದ ಪ್ರಸಿದ್ಧ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಫೌಂಡೇಷನ್ ಕಾರ್ಯವೈಖರಿಯ ಮಾಹಿತಿ ನೀಡಿದ ದಿ/ನಡ್ಜ್ ಫೌಂಡೇಷನ್‌ನ ಸಂಸ್ಥಾಪಕ ಮತ್ತು ಸಿಇಒ ಅತುಲ್ ಸತೀಜ, "ಪ್ರತಿ ತಿಂಗಳು 1 ಮಿಲಿಯನ್ ಯುವಕರು ಈ ಕಾರ್ಯಪಡೆಗೆ ಪ್ರವೇಶ ಪಡೆಯುತ್ತಾರೆ. ಆದರೆ, ಅವರಲ್ಲಿ ಶೇ.50ರಷ್ಟು ಜನರು ವೃತ್ತಿಪರ ಮತ್ತು ಕೌಶಲ್ಯಗಳ ಕೊರತೆಯಿಂದ ನಿರುದ್ಯೋಗಿಗಳಾಗಿಯೇ ಉಳಿದಿದ್ದಾರೆ''.

"ಶೇ.33ರಷ್ಟು ಜನರಿಗೆ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ಇಲ್ಲ. ಈ ಫೌಂಡೇಷನ್ ಯುವಕರಲ್ಲಿ ಆತ್ಮವಿಶ್ವಾಸ ಮೂಡಿಸಲು ಹಾಗೂ ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಕೆಲಸ ಮಾಡುತ್ತದೆ,'' ಎಂದರು.

ಹೆಚ್ಚಿನ ಮಾಹಿತಿಗಾಗಿ Website: https://fp.thenudge.org/

Recommended Video

ಬಿಪಿನ್ ರಾವತ್ ನಿಧನದಿಂದ ತೆರವಾದ CDS ಹುದ್ದೆ ಅಲಂಕರಿಸೋದು ಯಾರು? | Oneindia Kannada

English summary
The/ Nudge Foundation is involved in providing employment to 6000 students through a Job Skill Course called Gurukula for youth and young women.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X