ಆಯಿಲ್ ಇಂಡಿಯಾದಲ್ಲಿ ಜ್ಯೂ.ತಾಂತ್ರಿಕ ಸಹಾಯಕ ಹುದ್ದೆಗಳಿವೆ

ನವದೆಹಲಿ, ಸೆಪ್ಟೆಂಬರ್ 22: ಆಯಿಲ್ ಇಂಡಿಯಾ ಸಂಸ್ಥೆ 2021ನೇ ಸಾಲಿನ ನೇಮಕಾತಿ ಮುಂದುವರೆಸಿದೆ. ಈ ಕುರಿತಂತೆ ತನ್ನ ಅಧಿಕೃತ ವೆಬ್ ತಾಣದಲ್ಲಿ ಅಧಿಸೂಚನೆ ಪ್ರಕಟಣೆ ಹೊರಡಿಸಿದೆ. 513 ಜ್ಯೂನಿಯರ್ ತಾಂತ್ರಿಕ ಸಹಾಯಕ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಹಾಕಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 12, 2021ರೊಳಗೆ ಸೂಕ್ತ ಅರ್ಜಿ ನಮೂನೆಯೊಂದಿಗೆ ಸಲ್ಲಿಸಬಹುದು.

ಸಂಸ್ಥೆ ಹೆಸರು: ಆಯಿಲ್ ಇಂಡಿಯಾ ಲಿಮಿಟೆಡ್
ಒಟ್ಟು ಹುದ್ದೆ: 513
ಹುದ್ದೆ ಹೆಸರು: Junior Engineering Asst(JEA), Jr Technical Asst, Junior Quality Control Analyst-IV ಹಾಗೂ Junior Nursing Assistant
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಅಕ್ಟೋಬರ್ 12, 2021
ಸಂಬಳ ನಿರೀಕ್ಷೆ: 25,000-1,05,000/ ರು

ಹುದ್ದೆಗಳು: ಜ್ಯೂನಿಯರ್ ಇಂಜಿನಿಯರಿಂಗ್ ಸಹಾಯಕ, ಜ್ಯೂನಿಯರ್ ತಾಂತ್ರಿಕ ಸಹಾಯಕ, ಜ್ಯೂನಿಯರ್ ಕ್ವಾಲಿಟಿ ಕಂಟ್ರೋಲ್ ಅನಾಲಿಸ್ಟ್, ಜ್ಯೂನಿಯರ್ ನರ್ಸಿಂಗ್ ಸಹಾಯಕ..ಇತ್ಯಾದಿ.

Oil India Recruitment 2021 apply for 513 JEA, Jr Technical Asst Post

ಹುದ್ದೆ ಹೆಸರು-ಒಟ್ಟು ಹುದ್ದೆ- ವಿದ್ಯಾರ್ಹತೆ:
ಜ್ಯೂನಿಯರ್ ಇಂಜಿನಿಯರಿಂಗ್ ಸಹಾಯಕ- IV: 296 ಹುದ್ದೆಗಳು- ಡಿಪ್ಲೋಮಾ (ಕೆಮಿಕಲ್/ರಿಫೈನರಿ ಹಾಗೂ ಪೆಟ್ರೋಕೆಮಿಕಲ್ ಇಂಜಿನಿಯರ್)/ ಬಿಎಸ್ಸಿ (ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ ಅಥವಾ ಕೈಗರಿಕಾ ಕೆಮಿಸ್ಟ್ರಿ) ಜೊತೆಗೆ ತಕ್ಕ ಅನುಭವ.

ಜ್ಯೂನಿಯರ್ ಇಂಜಿನಿಯರಿಂಗ್ ಸಹಾಯಕ IV (P&U): 35- ಮೆಟ್ರಿಕ್ಯುಲೇಷನ್ ಐಟಿಐ (ಫಿಟ್ಟರ್ ಟ್ರೇಡ್), ಡಿಪ್ಲೋಮಾ ಮೆಕ್ ಅಂಡ್ ಎಲೆಕ್ಟ್ರಿಕ್ ಇಂಜಿನಿಯರ್) ಜೊತೆಗೆ ತಕ್ಕ ಅನುಭವ.

ಜ್ಯೂನಿಯರ್ ಇಂಜಿನಿಯರಿಂಗ್ ಸಹಾಯಕ IV (ಎಲೆಕ್ಟ್ರಿಕಲ್)/ ಜ್ಯೂ. ತಾಂತ್ರಿಕ ಸಹಾಯಕ IV: 65- ಡಿಪ್ಲೋಮಾ (ಎಲೆಕ್ಟ್ರಿಕಲ್ ಇಂಜಿನಿಯರ್) ಜೊತೆಗೆ ತಕ್ಕ ಅನುಭವ.

ಜ್ಯೂನಿಯರ್ ಇಂಜಿನಿಯರಿಂಗ್ ಸಹಾಯಕ IV (ಮೆಕ್ಯಾನಿಕಲ್)/ ಜ್ಯೂ. ತಾಂತ್ರಿಕ ಸಹಾಯಕ IV: 32- ಡಿಪ್ಲೋಮಾ (ಎಲೆಕ್ಟ್ರಿಕಲ್ ಇಂಜಿನಿಯರ್) ಜೊತೆಗೆ ತಕ್ಕ ಅನುಭವ.

ಜ್ಯೂನಿಯರ್ ಇಂಜಿನಿಯರಿಂಗ್ ಸಹಾಯಕ IV (Instrumentation)/ ಜ್ಯೂ. ತಾಂತ್ರಿಕ ಸಹಾಯಕ IV: 37- ಡಿಪ್ಲೋಮಾ (Instrumentation) ಜೊತೆಗೆ ತಕ್ಕ ಅನುಭವ.

ಜ್ಯೂನಿಯರ್ ಕ್ವಾಲಿಟಿ ಕಂಟ್ರೋಲ್ ಅನಾಲಿಸ್ಟ್- IV: 29- ಬಿಎಸ್ಸಿ(ಭೌತಶಾಸ್ತ್ರ, ರಸಾಯನ ಶಾಸ್ತ್ರ/ಕೈಗಾರಿಕಾ ಕೆಮಿಸ್ಟ್ರಿ ಅಂಡ್ ಗಣಿತ)

ಜ್ಯೂನಿಯರ್ ಇಂಜಿನಿಯರಿಂಗ್ ಸಹಾಯಕ IV (Fire & Safety): 14- ಮೆಟ್ರಿಕ್ಯುಲೇಷನ್
ಜ್ಯೂನಿಯರ್ ಮೆಟಿರಿಯಲ್ ಸಹಾಯಕ IV/ ಜ್ಯೂ ತಾಂತ್ರಿಕ ಸಹಾಯಕ IV: 04: ಡಿಪ್ಲೋಮಾ (ಮೆಕ್ಯಾನಿಕಲ್/ಎಲೆಕ್ಟ್ರಿಕಲ್/ ಇನ್ಸ್ಟ್ರುಮೇಷನ್ ಇಂಜಿನಿಯರ್
ಜ್ಯೂನಿಯರ್ ನರ್ಸಿಂಗ್ ಸಹಾಯಕ IV: 01- ಡಿಪ್ಲೋಮಾ ನರ್ಸಿಂಗ್, ಬಿಎಸ್ಸಿ ನರ್ಸಿಂಗ್

ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 10 ಹಾಗೂ 12ನೇ ತರಗತಿ ಪಾಸ್. ಸಂಬಂಧಪಟ್ಟ ಟ್ರೇಡ್ ಅನುಭವ.

ವಯೋಮಿತಿ:
ವಿವಿಧ ಹುದ್ದೆಗಳಿಗೆ ಆಯಿಲ್ ಇಂಡಿಯಾ ನೇಮಕಾತಿ ನೋಟಿಫಿಕೇಷನ್‌ನಲ್ಲಿ ನೀಡಿರುವಂತೆ ಕನಿಷ್ಠ 18 ರಿಂದ ಗರಿಷ್ಠ 26 ವರ್ಷ. ಅರ್ಹ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿಯಲ್ಲಿ ವಿನಾಯಿತಿ ಸಿಗಲಿದೆ. ಎಸ್ ಸಿ / ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷಗಳ ವಿನಾಯಿತಿ ಸಿಗಲಿದೆ.

ಅರ್ಜಿ ಶುಲ್ಕ:
ಸಾಮಾನ್ಯ/ ಒಬಿಸಿ ಅಭ್ಯರ್ಥಿ: 150 ರು
ಎಸ್ ಸಿ / ಎಸ್ಟಿ/ ದಿವ್ಯಾಂಗ/ಮಾಜಿ ಯೋಧ: ಯಾವುದೇ ಶುಲ್ಕವಿಲ್ಲ.
ಶುಲ್ಕಪಾವತಿ ವಿಧಾನ: ಆನ್ ಲೈನ್ ಮೂಲಕ ಎಸ್ ಬಿ ಐ ಇ-ಕಲೆಕ್ಟ್

ನೇಮಕಾತಿ ಪ್ರಕ್ರಿಯೆ:
ಕಂಪ್ಯೂಟರ್ ಆಧಾರಿತ ಪರೀಕ್ಷೆ(ಸಿಬಿಟಿ), ಕೌಶಲ್ಯ ಪರೀಕ್ಷೆ, ಲಿಖಿತ ಪರೀಕ್ಷೆಯಲ್ಲಿ ಶೇ 40ರಷ್ಟು ಅಂಕ ಗಳಿಸಿ ಮುಂದಿನ ಹಂತಕ್ಕೆ ಅರ್ಹರಾಗಬಹುದು. ವೈಯಕ್ತಿಕ ಸಂದರ್ಶನ (ಪಿಐ).

ಪ್ರಮುಖ ದಿನಾಂಕ:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 21/09/2021

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 12/10/2021
ಪರೀಕ್ಷಾ ಸಂಭಾವ್ಯ ದಿನಾಂಕ: 24/10/2021
ಪರೀಕ್ಷಾ ಫಲಿತಾಂಶ ಸಂಭಾವ್ಯ ದಿನಾಂಕ: 11/11/2021

Recommended Video

      ಲೈವ್ ಶೋನಲ್ಲಿ ಪಾಕ್ ಆ್ಯಂಕರ್ ಮಾಡಿದ ಕೆಲಸ ನೋಡಿ ತಾಲಿಬಾನಿಗಳ ದಿಲ್ ಖುಷ್ | Oneindia Kannada

      ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಆಯಿಲ್ ಇಂಡಿಯಾ ಅಧಿಕೃತ ವೆಬ್ ತಾಣದ ಕ್ಲಿಕ್ ಮಾಡಿ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+