NVS Recruitment: ನವೋದಯ ವಿದ್ಯಾಲಯ ಸಮಿತಿಯಿಂದ ಬರೋಬ್ಬರಿ 5700 ಹುದ್ದೆಗಳ ನೇಮಕಾತಿ

NVS Recruitment 2025: ನವೋದಯ ವಿದ್ಯಾಲಯ ಸಮಿತಿ (NVS) ತನ್ನಲ್ಲಿ ಖಾಲಿ ಇರುವ 5700 ಕ್ಕೂ ಹೆಚ್ಚು ಬೋಧಕ / ಬೋಧಕೇತರ ಹುದ್ದೆಗಳಿಗೆ ನೇಮಕಾತಿ ಆರಂಭಿಸಿದೆ. ಆಕಕ್ತ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬೇಕು. ವಿವಿಧ ಭಾಷೆಗಳಲ್ಲಿ ಅನೇಕ ಖಾಲಿ ಹುದ್ದೆಗಳು ಲಭ್ಯ ಇವೆ. ಅಧಿಸೂಚನೆ ನೋಡಿಕೊಂಡು ಆನ್‌ಲೈನ್ ಮೂಲಕ ಅರ್ಜಿ ಹಾಕಬೇಕು ಎಂದು ತಿಳಿಸಲಾಗಿದೆ.

ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE) ನವೋದಯ ವಿದ್ಯಾಲಯ ಸಮಿತಿ (NVS) ಯಲ್ಲಿ 5,700 ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ನೇಮಕಾತಿಗಾಗಿ ಅರ್ಜಿ ಸ್ವೀಕಾರ ಆರಂಭವಾಗಿದ್ದು, ನೀವುಗಳು ಡಿಸೆಂಬರ್ 4ರ ಒಳಗೆ ಸೂಕ್ತ ದಾಖಲೆಗಳ ಸಮೇತ ಅರ್ಜಿ ಸಲ್ಲಿಸಬೇಕು.

NVS Recruitment 2025 Over 5700 Teaching and Non-Teaching Vacancies Apply by Dec 4

1513 ಪಿಜಿಟಿ (PGT) ಹುದ್ದೆಗಳ ನೇಮಕಾತಿ

ನವೋದಯ ವಿದ್ಯಾಲಯಗಳು 1513 PGT (ಸ್ನಾತಕೋತ್ತರ ಶಿಕ್ಷಕರ) ನೇಮಕಾತಿ ನಡೆಸುತ್ತಿದೆ. ಪ್ರತಿಯೊಂದು ವಿಷಯಕ್ಕೂ ನೇಮಕಾತಿ ಮಾಡಿಕೊಳ್ಳುತ್ತಿದೆ. ಭಾಷಾವಾರು ನೇಮಕಾತಿ ವಿವರ ಮುಂದಿದೆ.

* ಹಿಂದಿ - 127

* ಇಂಗ್ಲಿಷ್ - 146

* ಭೌತಶಾಸ್ತ್ರ - 186

* ರಸಾಯನಶಾಸ್ತ್ರ - 121

* ಗಣಿತ - 167

* ಜೀವಶಾಸ್ತ್ರ - 161

* ಇತಿಹಾಸ - 110

* ಭೂಗೋಳ - 106

* ಅರ್ಥಶಾಸ್ತ್ರ - 148

* ವಾಣಿಜ್ಯ - 43

* ಕಂಪ್ಯೂಟರ್ ವಿಜ್ಞಾನ - 135

* ದೈಹಿಕ ಶಿಕ್ಷಣ - 63

2978 ಟಿಜಿಟಿ (TGT) ಹುದ್ದೆಗಳ ನೇಮಕಾತಿ

ನವೋದರ ವಿದ್ಯಾಲಯಗಳು ಒಟ್ಟು ತರಬೇತಿ ಪಡೆದ ಶಿಕ್ಷಕರ (TGT) ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದೆ. ಈ ಸಂಬಂಧ ವಿಷಯವಾರು ಹಾಗೂ ಮೀಸಲಾತಿ ಪ್ರಕಾರ ಸೀಟುಗಳನ್ನು ಹಂಚಿಕೆ ಮಾಡಲಾಗಿದೆ. ತರಬೇತಿ ಪಡೆದ ಪದವೀಧರ ಶಿಕ್ಷಕರ ನೇಮಕಾತಿಗೆ ಬೇಕಾದ ಅರ್ಹತೆ, ಇತರ ಮಾಹಿತಿ ತಿಳಿದು ಅರ್ಜಿ ಸಲ್ಲಿಸಬೇಕಿದೆ.

ಪ್ರಾಂಶುಪಾಲರು ಹಾಗೂ ಬೋಧಕೇತರ ಹುದ್ದೆಗಳು 880

ನವೋದರ ವಿದ್ಯಾಲಯ ಸಮಿತಿ ಒಳಗೆ 93 ಪ್ರಾಂಶುಪಾಲರು ಮತ್ತು 787 ಬೋಧಕೇತರ ಹುದ್ದೆಗಳಿಗೆ ಸಿಬಿಎಸ್‌ಇ ಅರ್ಜಿ ಆಹ್ವಾನಿಸಲಾಗಿದೆ. ಇದರಲ್ಲಿ ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ (HQ/RO) 46, ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ (JNV) 552, ಲ್ಯಾಬ್ ಅಟೆಂಡೆಂಟ್ 165, ಮಲ್ಟಿ-ಟಾಸ್ಕಿಂಗ್ ಸ್ಟಾಫ್ 24 ಮತ್ತು ಸಹಾಯಕ ಆಯುಕ್ತ (ಅಕಾಡೆಮಿಕ್) - 9 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+