NMPT Recruitment 2023: ಮಂಗಳೂರಲ್ಲಿ ಕೇಂದ್ರ ಸರ್ಕಾರಿ ಕೆಲಸ ಖಾಲಿ ಇದೆ, ಮಾಸಿಕ 60,000 ಸಾವಿರ ವೇತನ
ಬೆಂಗಳೂರು, ಆಗಸ್ಟ್ 25: ನವ ಮಂಗಳೂರು ಬಂದರು ಟ್ರಸ್ಟ್ (NMPT) ತನ್ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕ ಪ್ರಕ್ರಿಯೆ ರಂಭಿಸಿದೆ. ಈ ಸಂಬಂಧ ಅರ್ಹರಿಂದ ಅರ್ಜಿ ಆಹ್ವಾನಿಸಿದ್ದು, ಕೇಂದ್ರ ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ.
ನವ ಮಂಗಳೂರು ಬಂದರು ಟ್ರಸ್ಟ್ (NMPT) ನಲ್ಲಿ ಒಂದು ಗ್ರೇಡ್ 2 ಹುದ್ದೆ ಖಾಲಿ ಇದೆ. ಇದಕ್ಕೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಮುಂದಿನ ನವೆಂಬರ್ 21ರಂದು ನಡೆಯಲಿರುವ ನೇರ ಸಂದರ್ಶದಲ್ಲಿ ಪಾಲ್ಗೊಳ್ಳಬಹುದು. ಈ ಮೂಲಕ ಮಂಗಳೂರಿನಲ್ಲಿ ಪೋಸ್ಟಿಂಗ್ ಪಡೆಯಬಹುದಾಗಿದೆ.

ಅರ್ಜಿ ಸಲ್ಲಿಕೆಗೂ ಮೊದಲು ಅಭ್ಯರ್ಥಿಗಳು ಹುದ್ದೆಗೆ ಬೇಕಾದ ಅರ್ಹತೆ, ವಯೋಮಿತಿ, ಮಾಸಿಕ ವೇತನ ಸೇರಿದಂತೆ ನೇಮಕಾತಿ ಪೂರ್ಣ ಮಾಹಿತಿ ಇಲ್ಲಿ ತಿಳಿದು ಅರ್ಜಿ ಸಲ್ಲಿಸಬಹುದು.
ನೇಮಕಾತಿ ವಿವರ
ಸಂಸ್ಥೆ - ಹೊಸ ಮಂಗಳೂರು ಬಂದರು ಟ್ರಸ್ಟ್
ಹುದ್ದೆ ಹೆಸರು - ಗ್ರೇಡ್-2 ವರ್ಗದ ಹುದ್ದೆ
ಖಾಲಿ ಹುದ್ದೆ - 1
ಮಾಸಿಕ ವೇತನ - 60,000 ರೂಪಾಯಿ
ಉದ್ಯೋಗದ ಸ್ಥಳ- ಮಂಗಳೂರು
ವಿದ್ಯಾರ್ಹತೆ ಕುರಿತು ಹೊಸ ಮಂಗಳೂರು ಬಂದರು ಟ್ರಸ್ಟ್ ನೇಮಕಾತಿ ಅಧಿಸೂಚನೆಯಲ್ಲಿ ನೀಡಲಾಗಿಲ್ಲ. ಬದಲಾಗಿ ನೇರವಾಗಿ ಸಂದರ್ಶನದಲ್ಲಿ ಪಾಲ್ಗೊಂಡು ಆಯ್ಕೆ ಆಗುವವರಿಗೆ ಮಾಸಿಕ 60,000 ರೂಪಾಯಿ ಸಂಬಳ ನೀಡಲಾಗುವುದು. ಮಂಗೂರಿನಲ್ಲಿ ಅಭ್ಯರ್ಥಿಗೆ ಪೊಸ್ಟಿಂಗ್ ನೀಡಲಾಗುವುದು.

ಸಂದರ್ಶನ ಸ್ಥಳದ ಮಾಹಿತಿ
ಇನ್ನೂ ಆಯ್ಕೆ ಪ್ರಕ್ರಿಯೆಯಲ್ಲಿ ಮೊದಲು ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಯಲಿದ್ದು, ನಂತರ ನೇರವಾಗಿ ಸಂದರ್ಶನ ನಡೆಯಲಿದೆ. ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ 21ರಂದು ''ಚೇಂಬರ್ ಆಫ್ ದಿ ಡೆಪ್ಯುಟಿ ಚೆರ್ಮನ್, ನವ ಮಂಗಳೂರು ಬಂದರು ಪ್ರಾಧಿಕಾರ, ಪಣಂಬೂರು, ಮಂಗಳೂರು, ಕರ್ನಾಟಕ-575010 ಇಲ್ಲಿಗೆ ಬೇಟಿ ನೀಡಬೇಕು.
ಆಸಕ್ತರು ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಶೈಕ್ಷಣಿಕ ಅರ್ಹತೆ, ವಯಸ್ಸಿನ ಮೀತಿ, ಅಧಿಸೂಚನೆ ಸೇರಿದಂತೆ ಇನ್ನಿತರ ಎಲ್ಲ ಅಗತ್ಯ ಮಾಹಿತಿಗಳನ್ನು ಈ ಅಧಿಕೃತ ವೆಬ್‌ಸೈಟ್ https://newmangaloreport.gov.in/ ಗೆ ಬೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ 0824-2887265 ಗೆ ಸಂಪರ್ಕಿಸುವಂತೆ ತಿಳಿಸಿದೆ.












Click it and Unblock the Notifications