NHPC recruitment: 248 ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ನೇಮಕಾತಿ ಪೂರ್ಣ ವಿವರ
ಬೆಂಗಳೂರು, ಆಗಸ್ಟ್ 30: ರಾಷ್ಟ್ರೀಯ ಜಲವಿದ್ಯುತ್ ಶಕ್ತಿ ನಿಗಮ (NHPC) ವತಿಯಿಂದ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕಿರಿಯ ಅಭಿಯಂತರರ (JE) ಹುದ್ದೆಗಳು ಖಾಲಿ ಇವೆ. ಅವುಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಿರುವ ನಿಗಮವು ಇತ್ತೀಚೆಗೆ ಅಧಿಸೂಚನೆ ಹೊರಡಿಸಿದೆ. ಯಾರೆಲ್ಲ ಆಸಕ್ತರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯದ್ದೀರಿ ಅವರೆಲ್ಲ ಇಲ್ಲಿ ನೀಡಲಾಗಿರುವ ಅರ್ಹತೆ, ವಯೋಮಿತಿ ಹೊಂದಿರಬೇಕು. ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಕೆಗೆ ಅವಕಾಶ ಇದೆ.
ರಾಷ್ಟ್ರೀಯ ಜಲವಿದ್ಯುತ್ ಶಕ್ತಿ ನಿಗಮ (NHPC) ದಲ್ಲಿ ಉತ್ತಮ ಉದ್ಯೋಗ ಅವಕಾಶ ಇದ್ದು, ಆಸಕ್ತರಿಗೆ ಸೆಪ್ಟಂಬರ್ 2ರಿಂದ ಅಕ್ಟೋಬರ್ 1 ರವರೆಗೆ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಇಲ್ಲಿ ಜೆಇ ಸೇರಿದಂತೆ ವಿವಿಧ ಒಟ್ಟು 248 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಶುರುವಾಗಿದೆ. ಹೆಚ್ಚಿನ ಮಾಹಿತಿ, ಅಧಿಸೂಚನೆ, ಆನ್‌ಲೈನ್ ಅರ್ಜಿ ಸಲ್ಲಿಕೆಗೆ ನೀವು ಅಧಿಕೃತ ವೆಬ್‌ಸೈಟ್ nhpcindia.com ಗೆ ಭೇಟಿ ನೀಡಬೇಕು. ಹುದ್ದೆಗಳು ಹಾಗೂ ನೇಮಕಾತಿ ಪೂರ್ಣ ವಿವರ ಇಲ್ಲಿದೆ.

ನೇಮಕಾತಿ ಪೂರ್ಣ ವಿವರ
ನೇಮಕಾತಿ ಸಂಸ್ಥೆ: ರಾಷ್ಟ್ರೀಯ ಜಲವಿದ್ಯುತ್ ಶಕ್ತಿ ನಿಗಮ (NHPC)
ಉದ್ಯೋಗಗಳು: ಕಿರಿಯ ಅಭಿಯಂತರ ಮತ್ತು ಇತರ
ಒಟ್ಟು ಹುದ್ದೆಗಳು: 248
ಅರ್ಜಿ ಸಲ್ಲಿಕೆ ಆರಂಭ: ಸೆಪ್ಟಂಬರ್ 2
ಅರ್ಜಿ ಸಲ್ಲಿಕೆ ಕೊನೆ ದಿನ: ಅಕ್ಟೋಬರ್ 1
ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್
ಹುದ್ದೆಗಳ ಇತರ ಮಾಹಿತಿ
* ಸಹಾಯಕ ಅಧಿಕೃತ ಭಾಷಾ ಅಧಿಕಾರಿ ಹುದ್ದೆಗಳು- 11
* ಜೂನಿಯರ್ ಎಂಜಿನಿಯರ್ (ಸಿವಿಲ್)- 109
* ಜೂನಿಯರ್ ಎಂಜಿನಿಯರ್ (ಎಲೆಕ್ಟ್ರಿಕಲ್)- 46
* ಜೂನಿಯರ್ ಎಂಜಿನಿಯರ್ (ಮೆಕ್ಯಾನಿಕಲ್) - 49
* ಜೂನಿಯರ್ ಎಂಜಿನಿಯರ್ -17
* ಸೂಪರ್‌ವೈಸರ್-1
* ಸೀನಿಯರ್ ಅಕೌಂಟೆಂಟ್ -10
* ಹಿಂದಿ ಅನುವಾದಕ-5 ಹುದ್ದೆಗಳು ಖಾಲಿ ಇವೆ
ವಿದ್ಯಾರ್ಹತೆ ಏನಿರಬೇಕು?
ನಿಗಮ ಅಧಿಸೂಚನೆ ಪ್ರಕಾರ ಸದರಿ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರಿಗೆ ಆಯಾ ಹುದ್ದೆಗೆ ತಕ್ಕಂತೆ ವಿದ್ಯಾರ್ಹತೆ ಇರಬೇಕು. ಡಿಪ್ಲೊಮಾ ಅಥವಾ ಪದವಿ ಪಡೆದಿರಬೇಕು. ಸೀನಿಯರ್ ಅಕೌಂಟೆಂಟ್ ಹುದ್ದೆಗೆ, ಅರ್ಜಿದಾರರು ಸಿಎ/ ಸಿಎಂಎ ಪದವಿ ಪಡೆದಿರಬೇಕು ಎಂದು ತಿಳಿಸಿದೆ.
ಆಯ್ಕೆ ಪ್ರಕ್ರಿಯೆ ಹೇಗೆ?
ಈ ಮೇಲಿನ ಹುದ್ದೆಗಳ ಅರ್ಜಿಗಳನ್ನು ಸಲ್ಲಿಸಿದ ಬಳಿಕ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆಯನ್ನು ಸಿಬಿಟಿ ಮೋಡ್‌ನಲ್ಲಿ ನಡೆಯಲಿದೆ. ಪರೀಕ್ಷೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿರಲಿದೆ. ಅಭ್ಯರ್ಥಿಗಳು ಎರಡು ಗಂಟೆಗಳ ಅವಧಿಯಲ್ಲಿ ಒಟ್ಟು 200 ಅಂಕಗಳ ಪ್ರಶ್ನೆಗಳಿಗೆ ಉತ್ತರಿಸಬೇಕಿದೆ. ನಂತರ ಅವರನ್ನು ಶಾರ್ಟ್ ಲಿಸ್ಟ್ ಮಾಡಿ ಆಯ್ಕೆ ಮಾಡಲಾಗುತ್ತದೆ. ನಿಯಮಾನುಸಾರ ಮಾಸಿಕ ವೇತನ ನೀಡಲಾಗುವುದು.
ಅರ್ಜಿ ಸಲ್ಲಿಕೆ ಹೇಗೆ ಹೇಗೆ?
ಅಭ್ಯರ್ಥಿಗಳು ಸೆಪ್ಟಂಬರ್ 2ರ ನಂತರ NHPC ಅಧಿಕೃತ ವೆಬ್‌ಸೈಟ್ nhpcindia.com ಗೆ ಭೇಟಿ ನೀಡಬೇಕು. ನಂತರ.
ಮುಖಪುಟದಲ್ಲಿರುವ ಜಾಬ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ನೇಮಕಾತಿಗೆ ಸಂಬಂಧಿಸಿದ ಲಿಂಕ್ ಅನ್ನು ಆಐ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಬೇಕು. ಅಗತ್ಯ ಎಲ್ಲ ದಾಖಲೆ ನೀಡಬೇಕು. ನಂತರ ಅರ್ಜಿಯ ಪ್ರತಿ ಪ್ರಿಂಟ್ ತೆಗೆದಿಟ್ಟುಕೊಳ್ಳಬೇಕು.












Click it and Unblock the Notifications