NHAI Jobs: ಹೆದ್ದಾರಿ ಪ್ರಾಧಿಕಾರದಿಂದ ಭರ್ಜರಿ ನೇಮಕಾತಿ, ₹29,00,000 ವೇತನದ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಂಗಳೂರು, ನವೆಂಬರ್ 04: ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ( NHAI) ದಲ್ಲಿ ಹತ್ತಾರು ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ವಾಷಿರ್ಕವಾಗಿ ಲಕ್ಷಾಂತರ ರೂಪಾಯಿ ವೇತನ ನೀಡಿ ಅರ್ಹ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲು ಪ್ರಾಧಿಕಾರ ಮುಂದಾಗಿದೆ. ಅನುಭವಿ ಅಭ್ಯರ್ಥಿಗಳಿಗೆ ಇದೊಂದು ಅತ್ಯುತ್ತಮ ಅವಕಾಶ ಎನ್ನಲಾಗಿದೆ. ಹಾಗಾದರೆ ಯಾವೆಲ್ಲ ಉದ್ಯೋಗಗಳು ಖಾಲಿ ಇವೆ, ವೇತನ ಎಷ್ಟು ಎಂಬ ಮಾಹಿತ ಇಲ್ಲಿದೆ.
ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)ದಲ್ಲಿ ಹೆಡ್-ಟೆಕ್ನಿಕಲ್ ಮತ್ತು ಹೆಡ್-ಟೋಲ್ ಆಪರೇಷನ್ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಅರ್ಹ ಆಸಕ್ತರ ಅಭ್ಯರ್ಥಿಗಳು ಕೂಡಲೇ ಅರ್ಜಿಗಳನ್ನು ಸಲ್ಲಿಸಬೇಕು. ಆನ್‌ಲೈನ್ ಮೂಲಕವೇ ಅಭ್ಯರ್ಥಿಗಳು (nhai.gov.in) ಅರ್ಜಿ ಸಲ್ಲಿಸಿ ಕೈತುಂಬ ವೇತನದ ಉದ್ಯೋಗ ಪಡೆಯಬಹುದಾಗಿದೆ ಎಂದು ನೇಮಕಾತಿ ಅಧಿಸೂಚನೆ ತಿಳಿಸಿದೆ.

ನೇಮಕಾತಿ ಪೂರ್ಣ ಮಾಹಿತಿ ಹೀಗಿದೆ
ನೇಮಕಾತಿ ಸಂಸ್ಥೆ: ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)
ನೇಮಕಾತಿ ಹುದ್ದೆಗಳು: ಹೆಡ್-ಟೆಕ್ನಿಕಲ್ ಮತ್ತು ಹೆಡ್-ಟೋಲ್ ಆಪರೇಟರ್
ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್
ಪೋಸ್ಟಿಂಗ್: ಭಾರತದಲ್ಲಿ
ವೇತನ : ವಾರ್ಷಿಕ 29ಲಕ್ಷ ರೂಪಾಯಿ.
ಗರಿಷ್ಠ ವಯೋಮಿತಿ : 55 ವರ್ಷಗಳು
ವಿದ್ಯಾರ್ಹತೆ ಏನಿರಬೇಕು?
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯಗಳಲ್ಲಿ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪೂರ್ಣಗೊಳಿಸಬೇಕು. B.E./B.Tech ಪದವಿ ಪಡೆದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು ಎಂದು ತಿಳಿಸಲಾಗಿದೆ.

ನೇಮಕಾತಿ ಹೇಗೆ?
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನೇಮಕಾತಿಯನ್ನು ಗುತ್ತಿಗೆ ಆಧಾರದಲ್ಲಿ ಇರುತ್ತದೆ. ಎಂದರೆ ಎರಡು (2) ವರ್ಷಗಳ ಅವಧಿಗೆ ಈ ನೇಮಕಾತಿ ನಡೆಯಲಿದೆ. NHIPMPL ನ ಅಗತ್ಯತೆಗಳ ಅನುಗುಣವಾಗಿ, ಅಭ್ಯರ್ಥಿಯ ಕೆಲಸ ದಕ್ಷತೆ, ಕಾರ್ಯನಿರ್ವಹಣೆ ಮೇಲೆ ಅವರ ಅವಧಿ ವಿಸ್ತರಣೆ ಮಾಡಲೂಬಹುದು.
ಅನುಭವ ಇರುವ ಹಾಗೂ ಕನಿಷ್ಠ ಶೈಕ್ಷಣಿಕ ಅರ್ಹತೆ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ. ಅರ್ಹತೆ ಮಾನದಂಡ ಜೊತೆಗೆ ಅನುಭವಕ್ಕೆ ಅನುಗುಣವಾಗಿ ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡಬೇಕು. ಅರ್ಜಿ ಮಾಡಿ ಕಳುಹಿಸಿದಲ್ಲಿ ನಿಮ್ಮ ಉದ್ಯೋಗ ಮಾಹಿತಿ, ಅನುಭವ, ಇನ್ನಿತರ ವಿಚಾರಗಳಿಗೆ ಯಾವುದೇ ಸ್ಪಷ್ಟೀಕರಣವನ್ನು ಪ್ರಾಧಿಕಾರ ನೇಮಕಾತಿ ಸಂದರ್ಭದಲ್ಲಿ ಸ್ವೀಕರಿಸುವುದಿಲ್ಲ. ಅರ್ಜಿಯಲ್ಲಿ ನಮೂದಿಸಿದ ಮಾಹಿತಿಯೇ ಅಂತಿಮವಾಗಿರುತ್ತದೆ.
ಇನ್ನೂ ಶೈಕ್ಷಣಿಕ ಅರ್ಹತೆಗಳನ್ನು ಯುಜಿಸಿ ಅಥವಾ ಎಐಸಿಟಿಇ (ಅನ್ವಯವಾಗುವಂತೆ) ಇಲ್ಲವೇ ದೇಶದಲ್ಲಿರುವಶಾಸನಬದ್ಧ ಪ್ರಾಧಿಕಾರದಿಂದ ಮಾನ್ಯತೆ ಪಡೆದ ಭಾರತೀಯ ವಿಶ್ವವಿದ್ಯಾಲಯಗಳು, ಶೈಕ್ಷಣಿಕ ಮಂಡಳಿಗಳಿಂದ ಪಡೆದಿರುವುದು ಕಡ್ಡಾಯವಾಗಿದೆ ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.
ವಯಸ್ಸಿನ ಮಿತಿ
ಅರ್ಜಿ ಸಲ್ಲಿಸಲು ಇಷ್ಟಪಡುವ ಅಭ್ಯರ್ಥಿಗಳ ಗರಿಷ್ಠ ವಯಸ್ಸು ಅರ್ಜಿ ಸಲ್ಲಿಕೆ ಕೊನೆ ದಿನಾಂಕಕ್ಕೆ ಗರಿಷ್ಠ 55 ವರ್ಷ ದಾಟಿರಬಾರದು. ಇನ್ನೂ ನಿವೃತ್ತ ಸರ್ಕಾರಿ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಕೆಗೆ ಗರಿಷ್ಠ ವಯಸ್ಸನ್ನು 63 ವರ್ಷವರೆಗೆ ಇರಲಿದೆ ಎಂದು ಪ್ರಾಧಿಕಾರ ತಿಳಿಸಿದೆ..
ವೇತನ ವಿವರ
ಗುತ್ತಿಗೆ ಆಧಾರದಲ್ಲಿ ನೇಮಕಗೊಳ್ಳಿರುವ ಅಭ್ಯರ್ಥಿಗಳಿಗೆ ವಾಹನದ ಪ್ರಯೋಜನ ನೀಡಲಾಗುತ್ತದೆ. ಅದರೊಂದಿಗೆ ವಾಷಿರ್ಕವಾಗಿ ಅಂದಾಜು 29,00,000 ರೂ. ವೇತನ ನೀಡಲಾಗುತ್ತದೆ.
ಅನುಭವ ಏನಿರಬೇಕು?
ಅರ್ಜಿ ಸಲ್ಲಿಸಲಿರುವ ಆಸಕ್ತ ಅಭ್ಯರ್ಥಿಗಳು ಸರ್ಕಾರಿ, ಪಿಎಸ್‌ಯು, ಸ್ವಾಯತ್ತ ಸಂಸ್ಥೆಗಳು ಅಥವಾ ರಸ್ತೆ ವಲಯದೊಳಗಿನ ಖಾಸಗಿ ಸಂಸ್ಥೆಗಳಲ್ಲಿ ಕನಿಷ್ಠ 20 ವರ್ಷಗಳ ಕಾರ್ಯಾನುಭವ ಹೊಂದಿರಬೇಕು. ಅಂತವರು ಅರ್ಜಿ ಸಲ್ಲಿಸಲು ಅರ್ಹರು.
ಗುತ್ತಿಗೆ ಆಧಾರದಲ್ಲಿ ನೇಮಕಾತಿ ಇದಾಗಿದ್ದರಿಂದ ನೇಮಕಾರಿ ಅವಧಿಯನ್ನು ಮಿತಿಗೊಳಿಸುವ, ವಿಸ್ತರಿಸುವ, ಇನ್ನಿತರ ಬದಲಾವಣೆ ತರುವ ಪೂರ್ಣ ಅಧಿಕಾರ NHIPMPL ಹೊಂದಿರುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ.












Click it and Unblock the Notifications