NHAI Recruitment 2023: ಕೇಂದ್ರ ಸರ್ಕಾರಿ ನೌಕರಿಗಾಗಿ ಇಂದೇ ಅರ್ಜಿ ಸಲ್ಲಿಸಿ, ಲಕ್ಷ ಸಂಬಳ ಪಡೆಯಿರಿ, ಹುದ್ದೆ ವಿವರ ತಿಳಿಯಿರಿ

ಬೆಂಗಳೂರು, ಏಪ್ರಿಲ್‌ 03: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ತನ್ನಲ್ಲಿರುವ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಪ್ರಕ್ರಿಯೆ ಆರಂಭವಾಗಲಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕೇಂದ್ರ ಸರ್ಕಾರಿ ಉದ್ಯೋಗ ಸೇರಿಬಯಸುವವರಿಗೆ ಇದೊಂದು ಸುವರ್ಣ ಅವಕಾಶವಾಗಿದೆ.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಒಟ್ಟು 42 ಪ್ರಧಾನ ವ್ಯವಸ್ಥಾಪಕ, ಉಪ ಪ್ರಧಾನ ವ್ಯವಸ್ಥಾಪಕರ ಹುದ್ದೆಗಳು ಖಾಲಿ ಇದ್ದು, ಅವುಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಆಸಕ್ತರು ಅರ್ಜಿಯನ್ನು ಮೇ 15ರೊಳಗಾಗಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.

NHAI Recruitment 2023: Invited Applications For 42 Posts of NHAI by Eligible

ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಅರ್ಜಿ ಸಲ್ಲಿಸುವ ಮೊದಲು ಹುದ್ದೆಯ ಪೂಣ್ ಮಾಹಿತಿ, ಶೈಕ್ಷಣಿಕ ಅರ್ಹತೆ, ವಯೋಮಿತಿ, ವೇತನ ಇನ್ನಿತರ ಅಗತ್ಯ ಮಾಹಿತಿ ತಿಳಿಯಿರಿ.

ಹುದ್ದೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ

ಹುದ್ದೆ ಹೆಸರು-ಪ್ರಧಾನ ವ್ಯವಸ್ಥಾಪಕ ಮತ್ತು ಉಪ ಪ್ರಧಾನ ವ್ಯವಸ್ಥಾಪಕ

ಖಾಲಿ ಹುದ್ದೆ ಸಂಖ್ಯೆ- 42

ಶೈಕ್ಷಣಿ ಅರ್ಹತೆ- ಪದವಿ

ಸಂಬಳ - ₹ 1,23,100 ರಿಂದ 2,15,900

ಉದ್ಯೋಗ ಸ್ಥಳ - ಭಾರತ

ಅರ್ಜಿ ಸಲ್ಲಿಸಲು ಕೊನೆಯ ದಿನ - 2023 ಮೇ 15

NHAI Recruitment 2023: Invited Applications For 42 Posts of NHAI by Eligible

ಹುದ್ದೆಯ ಇತರ ಮಾಹಿತಿ

ಪ್ರಧಾನ ವ್ಯವಸ್ಥಾಪಕ (ಲೀಗಲ್)- 1

ಮತ್ತು ಉಪ ಪ್ರಧಾನ ವ್ಯವಸ್ಥಾಪಕ (ಟೆಕ್ನಿಕಲ್)- 41

ವಿದ್ಯಾರ್ಹತೆ ಮತ್ತು ವೇತನ ವಿವರ

ಪ್ರಧಾನ ವ್ಯವಸ್ಥಾಪಕ (ಲೀಗಲ್) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ಕಡ್ಡಾಯವಾಗಿ ಕಾನೂನು ಪದವಿ ಮಾಡಿರಬೇಕು. ಇನ್ನೂ ಉಪ ಪ್ರಧಾನ ವ್ಯವಸ್ಥಾಪಕ (ಟೆಕ್ನಿಕಲ್) ಹುದ್ದೆಗಳಿಗೆ ಅಧಿಸೂಚನೆ ಪರಿಶೀಲಿಸಿ ಪೂರ್ತಿ ಓದಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು ಎಂದು ಪ್ರಾಧಿಕಾರ ತಿಳಿಸಿದೆ.

ಇನ್ನೂ ವೇತನ ನೋಡುವುದಾದರೆ ಜನರಲ್ ಮ್ಯಾನೇಜರ್ (ಲೀಗಲ್) ಹುದ್ದೆ ಆಯ್ಕೆಯಾಗುವವರು ತಿಂಗಳಿಗೆ ₹1,23,100ರಿಂದ 2,15,900 ಸಂಬಳ ಪಡೆಯಬಹುದಾಗಿದೆ. ಅದೇ ರೀತಿ ಡೆಪ್ಯುಟಿ ಜನರಲ್ ಮ್ಯಾನೇಜರ್ (ಟೆಕ್ನಿಕಲ್)- ಮಾಸಿಕ ₹78,800 ರಿಂದ 2,09,200 ರೂಪಾಯಿ ನಿಗದಿ ಮಾಡಲಾಗಿದೆ.

ವಯೋಮಿತಿ ನೋಡುವುದಾದರೆ, ಜನರಲ್ ಮ್ಯಾನೇಜರ್ ಹುದ್ದೆಯ ಅಭ್ಯರ್ಥಿಗಳಿಗೆ - 56 ವರ್ಷ ನಿಗದಿ ಮಾಡಲಾಗಿದೆ. ಇತ್ತ ಡೆಪ್ಯುಟಿ ಜನರಲ್ ಮ್ಯಾನೇಜರ್ (ಟೆಕ್ನಿಕಲ್) ಅಧಿಸೂಚನೆ ಯಲ್ಲಿ ತಿಳಿಸಿರುವಂತೆ ನಿಗದಿಪಡಿಸಲಾಗಿದೆ. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ. ಅಭ್ಯರ್ಥಿಗಳು ಅಧಿಸೂಚನೆಯನ್ನ ಆನ್‌ಲೈನ್‌ ಮೂಲಕ ಡೌನ್‌ಲೋಡ್ ಮಾಡಿಕೊಂಡು ಓದಿ ಅರ್ಜಿ ಸಲ್ಲಿಸಬೇಕಿದೆ.

ಅರ್ಜಿ ಸಲ್ಲಿಸಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರಿಕ್ಷೆ ನಡೆಯಲಿದೆ. ಅದರಲ್ಲಿ ಆಯ್ಕೆಯಾಗುವವರಿಗೆ ಸಂದರ್ಶನ ನಡೆಯಲಿದೆ. ಅರ್ಜಿಗೆ ಯಾವುದೇ ಶುಲ್ಕ ನಿಗದಿ ಮಾಡಿಲ್ಲ, ಸಂಪೂರ್ಣ ಉಚಿತ ಎನ್ನಲಾಗಿದೆ. ಅಧಿಕಸೂಚನೆಗೆ ಹಾಗೂ ಹೆಚ್ಚಿನ ಮಾಹಿತಿಗೆ https://www.nhai.gov.in/#/ ಸಂಪರ್ಕಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+