NHAI Recruitment 2023: ಕರ್ನಾಟಕದಲ್ಲಿವೆ 8 ಖಾಲಿ ಹುದ್ದೆಗಳು, ನೇಮಕಾತಿ ವಿವರ
ಬೆಂಗಳೂರು, ನವೆಂಬರ್ 22: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಖಾಲಿ ಇರುವ ಕೆಲವು ಹುದ್ದೆಗಳಿಗೆ ಅರ್ಹರನ್ನು ನೇಮಕ ಮಾಡಿಕೊಳ್ಳಲು ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ಸಂಬಂಧ ಆಸಕ್ತರು ಇದೇ ನವೆಂಬರ್ 25ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) 8 ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು, ಅವುಗಳಿಗೆ ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಿದೆ. ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ ಸಹಿತ ಕರ್ನಾಟಕದಲ್ಲಿಯೇ ಪೋಸ್ಟಿಂಗ್ ನೀಡಲಾಗುವುದು. ಈ ಕುರಿತ ಮಾಹಿತಿಗೆ ನೀಡಲಾಗಿರುವ ವೆಬ್‌ಸೈಟ್ ಪರಿಶೀಲಿಸಿ ಕೂಡಲೇ ಅರ್ಜಿಸಲ್ಲಿಸಬೇಕು ಎಂದು ತಿಳಿಸಲಾಗಿದೆ.

ನೇಮಕಾತಿ ಮಾಹಿತಿ
ಸಂಸ್ಥೆ ಹೆಸರು: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)
ಹುದ್ದೆ ಹೆಸರು: ವ್ಯವಸ್ಥಾಪಕರು (ಮ್ಯಾನೇಜರ್)
ಪೋಸ್ಟಿಂಗ್: ಕರ್ನಾಟಕ
ಮಾಸಿಕ ವೇತನ: ನಿಗದಿ ಮಾಡಲಾಗಿಲ್ಲ.
ಅರ್ಜಿ ಸಲ್ಲಿಕೆ ಕೊನೆ ದಿನ: ನವೆಂಬರ್ 25
ವಿದ್ಯಾರ್ಹತೆ ವಿವರ
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಅಧಿಸೂಚನೆ ಪ್ರಕಾರ, ಬಿಇ, ಬಿಟೆಕ್ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದೆ. ನಿಯಮಾನುಸಾರಿ ವಯೋಮಿತಿ ಇರಬೇಕು ಎಂದು ಪ್ರಾಧಿಕಾರ ತಿಳಿಸಿದೆ.
ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ನಿಗದಿತ ನಮೂನೆ ಸೂಕ್ತ ದಾಖಲೆಗಳ ಸಹಿತ ಇ-ಮೇಲ್ ಐಡಿ [email protected] ಗೆ ನಿಗದಿತ ದಿನಾಂಕಗೊಳದಗೆ ಅರ್ಜಿ ಕಳುಹಸಿಬೇಕು. ಅಧಿಸೂಚನೆಯಲ್ಲಿ ನೀಡಲಾಗಿರುವ ಎಲ್ಲ ಅಗತ್ಯ ದಾಖಲೆಗಳನ್ನು ನೀವು ಅರ್ಜಿ ಜೊತೆಗೆ ಕಳುಹಿಸಬೇಕು.
ಅಪ್ಲೈ ಮಾಡೋದು ಹೇಗೆ?
ಮೊದಲು ಅಧಿಕೃತ ಜಾಲತಾಣ https://nhai.gov.in ಕ್ಕೆ ಭೇಟಿ ನೀಡಬೇಕು. ಅಲ್ಲಿ ಕಾಣುವ ಮುಖ ಪುಟದಲ್ಲಿ ಅಗತ್ಯ ದಾಖಲೆ ನೀಡಬೇಕು. ಸರಿಯಾದ ಮೇಲ್ ಐಡಿ ಅಲ್ಲಿ ನಮೂದಿಸಬೇಕು. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ಹಾಕಬೇಕು. ಇದಾದ ಬಳಿಕ ಅರ್ಜಿ ಸಲ್ಲಿಕೆಯನ್ನು ಆಯ್ಕೆ ಮಾಡಿಕೊಳ್ಳಬೇಕು.












Click it and Unblock the Notifications