42 ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ ಎನ್ಎಫ್ಎಲ್
ಬೆಂಗಳೂರು, ನವೆಂಬರ್ 22 : ಎನ್ಎಫ್ಎಲ್ 42 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಡಿಸೆಂಬರ್ 14, 2018 ಕೊನೆಯ ದಿನವಾಗಿದೆ.
ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ (ಎನ್ಎಫ್ಎಲ್) ಅಕೌಂಟ್ಸ್ ಆಫೀಸರ್, ಸೀನಿಯರ್ ಮ್ಯಾನೇಜರ್ ಸೇರಿದಂತೆ 42 ವಿವಿಧ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು.
ಹಾಸನ ಗ್ರಾಮ ಲೆಕ್ಕಿಗರ ನೇಮಕಾತಿ, 61 ಹುದ್ದೆಗಳು ಖಾಲಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಐಸಿಎಐನಿಂದ ಚಾರ್ಟಡ್ ಅಕೌಂಟೆಟ್ ಅಥವ ಮ್ಯಾನೇಜ್ಮೆಂಟ್ ಅಕೌಂಟ್ ಅಥವ ಎರಡು ವರ್ಷದ ಪೂರ್ಣಾವಧಿ/ರೆಗ್ಯುಲರ್ ಎಂಬಿಎ ವಿತ್ ಫೈನಾನ್ಸ್/ಫೈನಾನ್ಸ್ ಮ್ಯಾನೇಜ್ಮೆಂಟ್ ಅನ್ನು ಶೇ 60ರಷ್ಟು ಅಂಕಗಳೊಂದಿಗೆ ಪೂರ್ಣಗೊಳಿಸಿರಬೇಕು.
ಬಾಗಲಕೋಟೆ ಜಿಲ್ಲಾ ನ್ಯಾಯಾಲಯದಲ್ಲಿ ಕೆಲಸ ಖಾಲಿ ಇದೆ
ವಯೋಮಿತಿ ವಿವರ : ಅಕೌಂಟ್ಸ್ ಆಫೀಸರ್ ಹುದ್ದೆಗೆ : 38 ವರ್ಷ, ಸೀನಿಯರ್ ಮ್ಯಾನೇಜರ್ ಹುದ್ದೆಗೆ 48 ವರ್ಷ (ಒಸಿಬಿ-ಎನ್ಸಿಎಲ್), 50 ವರ್ಷ (ಎಸ್ಸಿ) ನಿಗದಿ ಪಡಿಸಲಾಗಿದೆ. 30 ನವೆಂಬರ್ 2018ಕ್ಕೆ ಅನ್ವಯವಾಗುವಂತೆ.
ಹೊಸಕೋಟೆಯಲ್ಲಿ ಡಿಸೆಂಬರ್ 1, 2ರಂದು ಬೃಹತ್ ಉದ್ಯೋಗ ಮೇಳ
ವೇತನ ಶ್ರೇಣಿ : ಅಕೌಂಟ್ಸ್ ಆಫೀಸರ್ ಹುದ್ದೆಗೆ 16400-40500 ಪ್ರತಿ ತಿಂಗಳು, ಸೀನಿಯರ್ ಮ್ಯಾನೇಜರ್ ಹುದ್ದೆಗೆ 32900-58000 ಪ್ರತಿ ತಿಂಗಳ ವೇತನ ನಿಗದಿ ಮಾಡಲಾಗಿದೆ.
ಅರ್ಜಿ ಶುಲ್ಕಗಳು : ಎಸ್ಸಿ/ಎಸ್ಟಿ/ಅಂಗವಿಕಲ/ಇಲಾಖಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ. ಇತರ ಅಭ್ಯರ್ಥಿಗಳಿಗೆ 700 (ಅಕೌಂಟ್ ಆಫೀಸರ್), 1000 (ಸೀನಿಯರ್ ಮ್ಯಾನೇಜರ್) ಶುಲ್ಕ ನಿಗದಿ ಮಾಡಲಾಗಿದೆ.
ಆನ್ಲೈನ್ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ