Namma Metro Recruitment: ನಮ್ಮ ಮೆಟ್ರೋದಲ್ಲಿ ಮಾಸಿಕ ₹44,000 ಸಂಬಳದ ಹುದ್ದೆಗೆ ಅರ್ಜಿ ಆಹ್ವಾನ

Namma Metro Recruitment: ಬೆಂಗಳೂರಿನ ಜೀವನಾಡಿ ಸಾರಿಗಗಳಲ್ಲೊಂದಾದ ನಮ್ಮ ಮೆಟ್ರೋದಲ್ಲಿ 35 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹಾಗಾದ್ರೆ ಹುದ್ದೆಗಳ ಸಂಖ್ಯೆ, ಅರ್ಜಿ ಸಲ್ಲಿಸುವ ವಿಧಾನಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಬಿಎಂಆರ್‌ಸಿಎಲ್ ಸಿವಿಲ್ ಇಂಜಿನಿಯರಿಂಗ್ ಸೆಕ್ಷನ್‌ನ ಪ್ರಾಜೆಕ್ಟ್‌ ವಿಭಾಗದಲ್ಲಿ ಅಗತ್ಯವಿರುವ ಇಂಜಿನಿಯರಿಂಗ್ ಪದವೀಧರರನ್ನು ನೇಮಿಸಿಕೊಳ್ಳಲಿ ಅಧಿಸೂಚನೆ ಬಿಡುಗಡೆಗೊಳಿಸಿದೆ. ಈ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ. ಆಸಕ್ತರು ಅರ್ಜಿ ಸಲ್ಲಿಕೆ ಮಾಡಬಹುದು.

Namma Metro Recruitment BMRCL Applications Invited for Monthly 44 000 Salary Post

ಬಿಎಂಆರ್‌ಸಿಎಲ್ 35 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಯ್ಕೆಯಾದವರಿಗೆ ಮಾಸಿಕ ವೇತನ 44,000 ರೂಪಾಯಿ ಇರಲಿದೆ. ಭತ್ಯೆಗಳ ವಿಚಾರಕ್ಕೆ ಬಂದರೆ, ಬಿಎಂಆರ್‌ಸಿಎಲ್ ಒ ಅಂಡ್ ಎಂ ವಲಯದ ನಿಯಮಗಳ ಪ್ರಕಾರ ಅನ್ವಯ ಭತ್ಯಗಳನ್ನು ನೀಡಲಾಗುತ್ತದೆ.

ಈ ಹುದ್ದೆಗಳನ್ನು ಗುತ್ತಿಗೆ ಆಧಾರ 3 ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಬಳಿಕ ಕಾರ್ಯಕ್ಷಮತೆ ಆಧರಿಸಿ ಸೇವೆ ಅವಧಿ ವಿಸ್ತರಣೆ ಮಾಡಲಾಗುತ್ತದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಈ ಹುದ್ದೆಗಳಿಗೆ ಇರಬೇಕಾದ ಅರ್ಹತೆಗಳೇನು?: ಬಿಇ ಅಥವಾ ಬಿ.ಟೆಕ್‌ ಶಿಕ್ಷಣವನ್ನು ಸಿವಿಲ್‌ ಇಂಜಿನಿಯರಿಂಗ್ ಬ್ರ್ಯಾಂಚ್‌ನಲ್ಲಿ ಉತ್ತೀರ್ಣರಾಗಿರಬೇಕು. ಕನಿಷ್ಠ ಶೇಕಡ 60 ಅಂಕಗಳೊಂದಿಗೆ ಬಿಇ ಪಾಸ್‌ ಮಾಡಿರಬೇಕು. ನೋಟಿಫಿಕೇಶನ್‌ ಬಿಡುಗಡೆ ಮಾಡಿದ ದಿನಾಂಕಕ್ಕೆ ಗರಿಷ್ಠ 3 ವರ್ಷ ಮೀರಿರಬಾರದು. ಕನ್ನಡ ಓದಲು, ಬರೆಯಲು, ಮಾತನಾಡಲು ಗೊತ್ತಿರಬೇಕು.

ಆಯ್ಕೆ ವಿಧಾನಗಳು: ಮೊದಲು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಗೇಟ್‌ ಸ್ಕೋರ್‌ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ. ನಂತರ ಅವರನ್ನು ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನಕ್ಕೆ ಕರೆದು ಅಂತಿಮ ಆಯ್ಕೆ ಮಾಡಲಾಗುತ್ತದೆ.

ಈ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ 2025 ಮೇ 3 ಆಗಿದ್ದು, ಅರ್ಜಿಗಳ ಸಹಿ ಮಾಡಲಾದ ಪ್ರಿಂಟ್‌ಔಟ್‌ಗಳನ್ನು ಮೇ 7ರ ಸಂಜೆ 4 ಗಂಟೆವರೆಗೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ

* ಬಿಎಂಆರ್‌ಸಿಎಲ್‌ ವೆಬ್‌ಸೈಟ್‌ https://www.bmrc.co.in/career/ ಗೆ ಭೇಟಿ ನೀಡಿ.
* ಗ್ರಾಜುಯೇಟ್‌ ಇಂಜಿನಿಯರ್ ಅಧಿಸೂಚನೆ ಅಡಿಯಲ್ಲಿ 'Click Here to Apply Online' ಎಂಬುದರ ಮೇಳೆ ಕ್ಲಿಕ್ ಮಾಡಿ.
* ಮತ್ತೊಂದು ವೆಬ್‌ಪೇಜ್‌ನಲ್ಲಿ ಕೇಳಲಾದ ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಕೆ ಮಾಡಿ.
* ನಂತರ ಭರ್ತಿ ಮಾಡಿದ ಅರ್ಜಿ ಪ್ರಿಂಟ್ ತೆಗೆದುಕೊಂಡು ಇಲ್ಲಿ ನೀಡಲಾದ ವಿಳಾಸಕ್ಕೆ ಸಲ್ಲಿಸಬೇಕಾಗುತ್ತದೆ.

ಜೆನೆರಲ್ ಮ್ಯಾನೇಜರ್ (ಹೆಚ್‌ಆರ್‌), ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್, 3ನೇ ಮಹಡಿ, ಬಿಎಂಟಿಸಿ ಕಾಂಪ್ಲೆಕ್ಸ್‌, ಕೆ ಹೆಚ್ ರಸ್ತೆ, ಶಾಂತಿನಗರ, ಬೆಂಗಳೂರು - 560027ಗೆ ಭರ್ತಿ ಮಾಡಿದ ಅರ್ಜಿ ಪ್ರಿಂಟ್ ಸಲ್ಲಿಸಬೇಕಾಗುತ್ತದೆ. ಹೀಗೆ ಹಾಗಾಗ ಬೆಂಗಲೂರಿನ ನಮ್ಮ ಮೆಟ್ರೋದಲ್ಲಿ ಉದ್ಯೋಗಾವಕಾಶಗಳು ತೆರೆದುಕೊಳ್ಳುತ್ತಲೇ ಇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+