ಮೈಸೂರು ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಖಾಲಿ ಇದೆ: ನೇರ ಸಂದರ್ಶನ
ಮೈಸೂರು, ಅಕ್ಟೋಬರ್ 18: ಮೈಸೂರು ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 11 ಹುದ್ದೆಗಳು ಖಾಲಿ ಇದ್ದು, ಬಿ.ಎಸ್ಸಿ, ಬಿಸಿಎ, ಎಂ.ಎಸ್ಸಿ, ಮಾಸ್ಟರ್ ಡಿಗ್ರಿ, ಮಾಸ್ಟರ್ ಆಫ್ ಲೈಬ್ರರಿ ಸೈನ್ಸ್ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಸಹಾಯಕ ಪ್ರಾಧ್ಯಾಪಕ, ಕಂಪ್ಯೂಟರ್ ಸಹಾಯಕ, ಜೂನಿಯರ್ ಪ್ರಾಜೆಕ್ಟ್ ಫೆಲೋ, ಸೆಮಿ- ಪ್ರೊಫೆಸನಲ್ ಅಸಿಸ್ಟೆಂಟ್, ಪ್ರೊಫೆಸನಲ್ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇವೆ. ಅಭ್ಯರ್ಥಿಗಳಿಗೆ ಯಾವುದೇ ಪರೀಕ್ಷೆ ನಡೆಸಲಾಗುವುದಿಲ್ಲ. ಸಂದರ್ಶನದ ಮೂಲಕ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಇದೇ ಅಕ್ಟೋಬರ್ 21ರಿಂದ 23ರವರೆಗೆ ಮೈಸೂರು ಪ್ರಾದೇಶಿಕ ಶಿಕ್ಷಣ ಸಂಸ್ಥೆ ನಡೆಸುವ ಸಂದರ್ಶನದಲ್ಲಿ ಭಾಗಿಯಾಗಬಹುದು.
ಮೈಸೂರಿನ ಆರ್ಐಇನಲ್ಲಿ ಕೆಲಸ ಮಾಡಲು ಇಚ್ಛಿಸುವ ಅಭ್ಯರ್ಥಿಗಳು ಸಂದರ್ಶನಕ್ಕೆ ಹೋಗುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಸಂದರ್ಶನ, ಸಂದರ್ಶನದ ಸ್ಥಳ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯವಾಗಿದ್ದು, ಈ ಎಲ್ಲದರ ಕುರಿತಾಗಿ ಮಾಹಿತಿ ಕೆಳಕಂಡಂತಿದೆ.

ಸಂಸ್ಥೆ- ಪ್ರಾದೇಶಿಕ ಶಿಕ್ಷಣ ಸಂಸ್ಥೆ, ಮೈಸೂರು
ಹುದ್ದೆಯ ಹೆಸರು- ಸಹಾಯಕ ಪ್ರಾಧ್ಯಾಪಕ, ಕಂಪ್ಯೂಟರ್ ಅಸಿಸ್ಟೆಂಟ್, ಜೂನಿಯರ್ ಪ್ರಾಜೆಕ್ಟ್ ಫೆಲೋ, ಸೆಮಿ ಪ್ರೊಫೆಶನಲ್ ಅಸಿಸ್ಟೆಂಟ್, ಪ್ರೊಫೆಶನಲ್ ಅಸಿಸ್ಟೆಂಟ್
ಒಟ್ಟು ಹುದ್ದೆಗಳು- 11
ವಿದ್ಯಾರ್ಹತೆ- ಬಿ.ಎಸ್ಸಿ, ಬಿಸಿಎ, ಎಂ.ಎಡ್, ಎಂ.ಎಸ್ಸಿ, ಮಾಸ್ಟರ್ ಡಿಗ್ರಿ, ಮಾಸ್ಟರ್ ಆಫ್ ಲೈಬ್ರರಿ ಸೈನ್ಸ್
ಕೆಲಸದ ಸ್ಥಳ- ಮೈಸೂರು
ಸಂಬಳ- ಮಾಸಿಕ ವೇತನ 17,000- 45,000 ರೂ.
ಆಯ್ಕೆ ಪ್ರಕ್ರಿಯೆ- ಸಂದರ್ಶನ
ಸಂದರ್ಶನದ ದಿನಾಂಕ- ಅಕ್ಟೋಬರ್ 21-ಅಕ್ಟೋಬರ್ 23, 2021
ನೋಟಿಫಿಕೇಶನ್ ದಿನಾಂಕ: 08/10/2021
ವಿದ್ಯಾರ್ಹತೆ:
ಅಸಿಸ್ಟೆಂಟ್ ಪ್ರೊಫೆಸರ್: ಸ್ನಾತಕೋತ್ತರ ಪದವಿ
ಪ್ರೊಫೆಸನಲ್ ಅಸಿಸ್ಟೆಂಟ್: ಮಾಸ್ಟರ್ ಆಫ್ ಲೈಬ್ರರಿ ಸೈನ್ಸ್, ಎಂಎಡ್, ಎಂ.ಪಿಎಡ್- ಶೇ.50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
ಸೆಮಿ ಪ್ರೊಫೆಸನಲ್ ಅಸಿಸ್ಟೆಂಟ್: ಕಲಾ/ ವಿಜ್ಞಾನ/ ವಾಣಿಜ್ಯ/ ಬ್ಯಾಚುಲರ್ ಆಫ್ ಲೈಬ್ರರಿ ಸೈನ್ಸ್ ವಿಭಾಗದಲ್ಲಿ ಪದವಿ ಪಡೆದಿರಬೇಕು, ಕನಿಷ್ಠ ಶೇ.50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
ಕಂಪ್ಯೂಟರ್ ಅಸಿಸ್ಟೆಂಟ್: ಬಿ.ಎಸ್ಸಿ/ ಎಂ.ಎಸ್ಸಿ, ಬಿಸಿಎ (ಕಂಪ್ಯೂಟರ್ ಸೈನ್ಸ್)
ಜೂನಿಯರ್ ಪ್ರಾಜೆಕ್ಟ್ ಫೆಲೋ: ಎಜುಕೇಶನ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು, ಎಂ.ಎಡ್, ಬಿ.ಎಸ್ಸಿ ಮಾಡಿರಬೇಕು.
ವಯೋಮಿತಿ:
ಅಸಿಸ್ಟೆಂಟ್ ಪ್ರೊಫೆಸರ್- ಯುಜಿಸಿ/ ಎನ್ಸಿಇಆರ್ಟಿ/ ಜಿಒಐ ನಿಯಮಗಳನುಸಾರ
ಪ್ರೊಫೆಸನಲ್ ಅಸಿಸ್ಟೆಂಟ್: 30 ವರ್ಷ ಮೀರಿರಬಾರದು
ಸೆಮಿ ಪ್ರೊಫೆಸನಲ್ ಅಸಿಸ್ಟೆಂಟ್: 27 ವರ್ಷ ಮೀರಿರಬಾರದು
ಕಂಪ್ಯೂಟರ್ ಅಸಿಸ್ಟೆಂಟ್: 35 ವರ್ಷ ಮೀರಿರಬಾರದು
ಜೂನಿಯರ್ ಪ್ರಾಜೆಕ್ಟ್ ಫೆಲೋ: 30 ವರ್ಷ ಮೀರಿರಬಾರದು
ಸಂಬಳ:
ಅಸಿಸ್ಟೆಂಟ್ ಪ್ರೊಫೆಸರ್: 45,000 ರೂ.
ಪ್ರೊಫೆಸನಲ್ ಅಸಿಸ್ಟೆಂಟ್: 23,000 ರೂ.
ಸೆಮಿ-ಪ್ರೊಫೆಸನಲ್ ಅಸಿಸ್ಟೆಂಟ್: 19,000 ರೂ.
ಕಂಪ್ಯೂಟರ್ ಅಸಿಸ್ಟೆಂಟ್: 17,000 ರೂ.
ಜೂನಿಯರ್ ಪ್ರಾಜೆಕ್ಟ್ ಫೆಲೋ: 23,000 ರೂ.
ಆಯ್ಕೆ ಪ್ರಕ್ರಿಯೆ:
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ?
ಮೈಸೂರು ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕ, ಕಂಪ್ಯೂಟರ್ ಸಹಾಯಕ, ಜೂನಿಯರ್ ಪ್ರಾಜೆಕ್ಟ್ ಫೆಲೋ, ಸೆಮಿ-ಪ್ರೊಫೆಸನಲ್ ಅಸಿಸ್ಟೆಂಟ್, ಪ್ರೊಫೆಸನಲ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವವರು ಅಕ್ಟೋಬರ್ 21ರಿಂದ 23ರವರೆಗೆ ನಡೆಯಲಿರುವ ಸಂದರ್ಶನದಲ್ಲಿ ಪಾಲ್ಗೊಳ್ಳಬೇಕು. ಈ ಕೆಳಕಂಡ ಹಂತಗಳನ್ನು ಅನುಸರಿಸಿ
ಮೊದಲಿಗೆ ಮೈಸೂರು ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಅಧಿಕೃತ ವೆಬ್ಸೈಟ್ riemysore.ac.in.ಗೆ ಭೇಟಿ ನೀಡಬೇಕು. ಅಲ್ಲಿ ಕಾಣ ಸಿಗುವ "Recruitment/ Career/ Advertisement menu" ಲಿಂಕ್ ಮೇಲೆ ಕ್ಲಿಕ್ ಮಾಡಿ. ಸಹಾಯಕ ಪ್ರಾಧ್ಯಾಪಕ, ಕಂಪ್ಯೂಟರ್ ಸಹಾಯಕ, ಜೂನಿಯರ್ ಪ್ರಾಜೆಕ್ಟ್ ಫೆಲೋ, ಸೆಮಿ-ಪ್ರೊಫೆಸನಲ್ ಅಸಿಸ್ಟೆಂಟ್, ಪ್ರೊಫೆಸನಲ್ ಅಸಿಸ್ಟೆಂಟ್ ಹುದ್ದೆಗಳ ನೋಟಿಫಿಕೇಶನ್ನ್ನು ಹುಡುಕಿ, ಅದರ ಮೇಲೆ ಕ್ಲಿಕ್ ಮಾಡಿ.
ಅಧಿಕೃತ ನೋಟಿಫಿಕೇಶನ್ನ ಲಿಂಕ್ನ್ನು ಡೌನ್ಲೋಡ್ ಮಾಡಿಕೊಳ್ಳಿ. ನೋಟಿಫಿಕೇಶನ್ನಲ್ಲಿ ನೀಡಲಾಗಿರುವ ಎಲ್ಲಾ ಸೂಚನೆಗಳನ್ನು ಸರಿಯಾಗಿ ಓದಿ. ಕೆಳಗೆ ನೀಡಲಾಗಿರುವ Official Online Apply/ Registration ಲಿಂಕ್ ಮೇಲೆ ಕ್ಲಿಕ್ ಮಾಡಿ. ಅಗತ್ಯ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ.
ಕೇಳಿರುವ ಎಲ್ಲಾ ಅಗತ್ಯ ದಾಖಲೆಗಳನ್ನು ಸರಿಯಾದ ಫಾರ್ಮ್ಯಾಟ್ ಹಾಗೂ ಸೈಜ್‌ನಲ್ಲಿ ಅಪ್ಲೋಡ್ ಮಾಡಿ. ಕೊನೆಯಲ್ಲಿ ಎಲ್ಲಾ ಮಾಹಿತಿ ಸರಿಯಾಗಿದೆಯೇ ಎಂದು ಪರಿಶೀಲಿಸಿ, ಸಬ್ಮಿಟ್ ಕೊಡಿ. ಬಳಿಕ ಮೈಸೂರು ಪ್ರಾದೇಶಕ ಶಿಕ್ಷಣ ಸಂಸ್ಥೆ ಅರ್ಜಿ ಶುಲ್ಕ ಕೇಳಿದ್ದರೆ, ಪಾವತಿಸಿ. ಕೊನೆಯಲ್ಲಿ ಅರ್ಜಿಯನ್ನು ಸಬ್ಮಿಟ್ ಮಾಡಿ, ಒಂದು ಪ್ರತಿಯನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಿ. ಅಕ್ಟೋಬರ್ 21ರಿಂದ 23ರವರೆಗೆ ನಡೆಯಲಿರುವ ಸಂದರ್ಶನದಲ್ಲಿ ಪಾಲ್ಗೊಳ್ಳಿ.
-
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
SSLC ಪರೀಕ್ಷೆಗೆ ಹಾಜರಾತಿ ಶಾಕ್: ನಿಯಮ ಉಲ್ಲಂಘಿಸಿದ 35,000 ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತ -
ಹನುಮ ಜಯಂತಿ ಮುನ್ನವೇ ಅಯೋಧ್ಯೆಗೆ ಗೌತಮ್ ಅದಾನಿ ಭೇಟಿ: ಪ್ರಾಚೀನ ಗುರುಕುಲಕ್ಕೆ AI ಲ್ಯಾಬ್ ಘೋಷಣೆ -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ












Click it and Unblock the Notifications