ಅಗ್ನಿಪಥ್; ನೌಕಾಪಡೆಗೆ 80,000ಕ್ಕೂ ಹೆಚ್ಚು ಮಹಿಳೆಯರಿಂದ ಅರ್ಜಿ
ನವದೆಹಲಿ,ಆಗಸ್ಟ್ 4: ಅಗ್ನಿಪಥ್ ಯೋಜನೆಯಡಿ ಭಾರತೀಯ ನೌಕಾಪಡೆಯು ಮಹಿಳಾ ಅಭ್ಯರ್ಥಿಗಳಿಂದ 80,000 ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಿರಿಯ ಮಾಧ್ಯಮಿಕ ನೇಮಕಾತಿ (ಎಸ್‌ಎಸ್‌ಆರ್) ಮತ್ತು ಮೆಟ್ರಿಕ್ ನೇಮಕಾತಿ (ಎಂಆರ್) ನೋಂದಣಿ ಬುಧವಾರ ಮುಕ್ತಾಯಗೊಂಡಿದ್ದು, ಮಹಿಳಾ ಅಭ್ಯರ್ಥಿಗಳನ್ನು ನೇಮಕಾತಿಯನ್ನು ಅಗ್ನಿಪಥ್ ಯೋಜನೆಯಡಿ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ನೌಕಾಪಡೆಯ ಎಸ್‌ಎಸ್‌ಆರ್ (ಸೀನಿಯರ್ ಸೆಕೆಂಡರಿ ನೇಮಕಾತಿ) ಮತ್ತು ಎಂಆರ್ (ಮೆಟ್ರಿಕ್ ನೇಮಕಾತಿ) ನೋಂದಣಿ ಪ್ರಕ್ರಿಯೆಯು ಅಗ್ನಿಪತ್ ನೇಮಕಾತಿ ಯೋಜನೆಗೆ ಪೂರ್ಣಗೊಂಡಿದೆ. 82,000 ಮಹಿಳಾ ಆಕಾಂಕ್ಷಿಗಳು ಸೇರಿದಂತೆ 9.55 ಲಕ್ಷ ಅಗ್ನಿವೀರ್ ಅರ್ಜಿದಾರರು ಈಗ ನೋಂದಾಯಿಸಿಕೊಂಡಿದ್ದಾರೆ ಎಂದು ಭಾರತೀಯ ನೌಕಾಪಡೆಯು ಟ್ವೀಟ್ ಮಾಡಿದೆ.

ತನ್ನ ಎಲ್ಲಾ ವಿಭಾಗಗಳಲ್ಲಿ ಲಿಂಗ-ತಟಸ್ಥತೆಯ ಮೇಲೆ ಕೇಂದ್ರೀಕರಿಸಿದ ಭಾರತೀಯ ನೌಕಾಪಡೆಯು ಜೂನ್ 20 ರಂದು ಹೊಸದಾಗಿ ಜಾರಿಯಾದ ಅಗ್ನಿಪಥ್ ನೇಮಕಾತಿ ಯೋಜನೆಯ ಮೂಲಕ ಮಹಿಳಾ ನಾವಿಕರನ್ನು ನೇಮಿಸಿಕೊಳ್ಳುವ ನಿರ್ಧಾರವನ್ನು ಪ್ರಕಟಿಸಿತು. ಎಲ್ಲಾ ಮೂರು ಸೇವೆಗಳು - ಭೂಸೇನೆ, ವಾಯುಪಡೆ ಮತ್ತು ನೌಕಾಪಡೆ - ಮಹಿಳಾ ಅಧಿಕಾರಿಗಳನ್ನು ಹೊಂದಿದ್ದು, ಅಧಿಕಾರಿಗಳ ಶ್ರೇಣಿಯ ನಂತರದ ಸಿಬ್ಬಂದಿ ಹುದ್ದೆಗಳು ಮಹಿಳೆಯರಿಗೆ ಮುಕ್ತವಾಗಿರುವುದು ಇದೇ ಮೊದಲು.
ಅಗ್ನಿಪಥ್ ಯೋಜನೆಯ ಮೂಲಕ ನೇಮಕಗೊಳ್ಳುವ ಮಹಿಳಾ ಅಭ್ಯರ್ಥಿಗಳ ನಿಖರ ಸಂಖ್ಯೆಯನ್ನು ನಾವು ಇನ್ನೂ ಲೆಕ್ಕಹಾಕುತ್ತಿದ್ದೇವೆ ಎಂದು ಸಿಬ್ಬಂದಿ ಮುಖ್ಯಸ್ಥ ವೈಸ್ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ ರಕ್ಷಣಾ ಸಚಿವಾಲಯದಲ್ಲಿ ತ್ರಿಸೇನಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ವರ್ಷದ ನವೆಂಬರ್‌ನಲ್ಲಿ ಅಗ್ನಿವೀರ್‌ಗಳ ಮೊದಲ ಬ್ಯಾಚ್ ಪ್ರಾರಂಭವಾಗಲಿದೆ.
ಭಾರತೀಯ ನೌಕಾಪಡೆಯು ಪ್ರಸ್ತುತ ವಿವಿಧ ಹಡಗುಗಳಲ್ಲಿ ನೌಕಾಯಾನ ಮಾಡುತ್ತಿದೆ. 30 ಮಹಿಳಾ ಅಧಿಕಾರಿಗಳನ್ನು ಹೊಂದಿದೆ. ನಾವು ಅಗ್ನಿಪಥ್ ಯೋಜನೆಯಡಿಯಲ್ಲಿ ಮಹಿಳೆಯರನ್ನು ಸಹ ನೇಮಕ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ. ಅವರನ್ನು ಯುದ್ಧನೌಕೆಗಳಲ್ಲಿ ನಿಯೋಜಿಸಲಾಗುವುದು. ಒಡಿಶಾದ ಐಎನ್‌ಎಸ್ ಚಿಲ್ಕಾದಲ್ಲಿ ಭಾರತೀಯ ನೌಕಾಪಡೆಯ ಮೂಲ ತರಬೇತಿ ಸಂಸ್ಥೆಯಾಗಿದ್ದು, ಮಹಿಳಾ ನಾವಿಕರಿಗೆ ಅವಕಾಶ ಕಲ್ಪಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಈ ವರ್ಷದ ನವೆಂಬರ್ 21 ರಿಂದ ಮೊದಲ ನೌಕಾಪಡೆ ಅಗ್ನಿವೀರ್‌ಗಳು ಒಡಿಶಾದ ಐಎನ್‌ಎಸ್ ಚಿಲ್ಕಾದ ತರಬೇತಿ ಸಂಸ್ಥೆಯನ್ನು ತಲುಪಲು ಪ್ರಾರಂಭಿಸುತ್ತದೆ. ಹೆಣ್ಣು ಮತ್ತು ಪುರುಷ ಅಗ್ನಿವೀರ್‌ಗಳನ್ನು ಇದಕ್ಕಾಗಿ ನಿಯೀಜಿಸಲಾಗಿದೆ ಎಂದು ತ್ರಿಪಾಠಿ ಹೇಳಿದರು.
-
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು












Click it and Unblock the Notifications