BMTC: ಬಸ್‌ನಲ್ಲಿ ರೈಟ್.. ರೈಟ್... ಅನ್ಬೇಕಾ? ಇಂದೇ ಅರ್ಜಿ ಸಲ್ಲಿಸಿ

ಬಿಎಂಟಿಸಿ ಬಸ್‌ನಲ್ಲಿ ರೈಟ್.. ರೈಟ್... ಅನ್ಬೇಕು.. ನಾನು ಉದ್ಯೋಗ ಮಾಡಿದರೆ ಬಸ್‌ನಲ್ಲೇ ಅನ್ನೋರಿಗೆ ಸುವರ್ಣ ಅವಕಾಶ ಇದೆ. ಬಿಎಂಟಿಸಿ ಇದಕ್ಕೆ ಅವಕಾಶ ಕಲ್ಪಿಸಿದ್ದು ವಾಹನ ಚಲಾಯಿಸಲು ತರಬೇತಿಯನ್ನು ನೀಡಲಿದೆ. ಇದಕ್ಕಾಗಿ ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಸಕ್ತರಿಗಾಗಿ ಅರ್ಜಿ ಸಲ್ಲಿಸಲು ಅರ್ಹತೆ ಹಾಗೂ ದಾಖಲೆಗಳ ಮಾಹಿತಿ ಇಲ್ಲಿದೆ...

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ತರಬೇತಿ ಕೇಂದ್ರದಲ್ಲಿ ಸಾರ್ವಜನಿಕರಿಗೆ ಲಘು ಮತ್ತು ಭಾರಿ ವಾಹನಗಳ ಚಾಲನಾ ತರಬೇತಿ ನೀಡಲಾಗುತ್ತಿದೆ. ಲಘು ವಾಹನ ಚಾಲನಾ ತರಬೇತಿಗಾಗಿ ವಯಸ್ಸು ಕನಿಷ್ಟ 18 ವರ್ಷ ಇರಬೇಕು. ಜನನ ಪ್ರಮಾಣ ಪತ್ರ/ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ/ ಟಿಸಿ/ ನೋಟರಿಯಿಂದ ಪ್ರಮಾಣ ಪತ್ರ, ಆಧಾರ್‌ ಕಾರ್ಡ್‌, ಐದು ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರ ಇತರ ದಾಖಲಾತಿಗಳನ್ನು ನೀಡಬೇಕು.

Light and Heavy Vehicle Driving Training at BMTC Training Center How to Apply

ಇನ್ನೂ ಭಾರಿ ವಾಹನ ಚಾಲನಾ ತರಬೇತಿಗಾಗಿ 20 ವರ್ಷ ವಯಸ್ಸು ಇರಬೇಕು. ಇದಕ್ಕಾಗಿ ದಾಖಲೆಗಳು ಜನನ ಪ್ರಮಾಣ ಪತ್ರ/ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ/ ಟಿಸಿ/ ನೋಟರಿಯಿಂದ ಪ್ರಮಾಣ ಪತ್ರ, ಆಧಾರ್‌ ಕಾರ್ಡ್‌, ಐದು ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರ, ಲಘು ವಾಹನ ಪರವಾನಗಿ ಪಡೆದ ದಿನಾಂಕದಿಂದ ಒಂದು ವರ್ಷದ ಪೂರ್ಣಗೊಂಡಿರಬೇಕು. ಜೊತೆಗೆ ಇತರ ದಾಖಲಾತಿಗಳನ್ನು ನೀಡಬೇಕು.

ತರಬೇತಿ ಶುಲ್ಕ

ಇನ್ನೂ ತರಬೇತಿ ಶುಲ್ಕ ಹೀಗಿದೆ:- ಲಘು ವಾಹನಕ್ಕೆ 26 ದಿನಗಳ ವಾಹನ ಚಾಲನಾ ತರಬೇತಿಗಾಗಿ 13,000 ರೂಪಾಯಿ, ಭಾರಿ ವಾಹನಕ್ಕೆ 26 ದಿನಗಳ ವಾಹನ ಚಾಲನಾ ತರಬೇತಿಗಾಗಿ 16,000 ರೂಪಾಯಿ ಶುಲ್ಕವಿದೆ. ಇನ್ನೂ ವಸತಿ ರಹಿತ ತರಬೇತಿಗೆ ಲಘು ವಾಹನಕ್ಕೆ 26 ದಿನಗಳ ವಾಹನ ಚಾಲನಾ ತರಬೇತಿಗಾಗಿ 7000 ರೂಪಾಯಿ ಇದ್ದರೆ, ಭಾರಿ ವಾಹನಕ್ಕೆ 26 ದಿನಗಳ ವಾಹನ ಚಾಲನಾ ತರಬೇತಿಗಾಗಿ 11000 ರೂಪಾಯಿ ಶುಲ್ಕವಿದೆ.

Light and Heavy Vehicle Driving Training at BMTC Training Center How to Apply

ಅಲ್ಲದೆ ಡ್ರೈವಿಂಗ್ ಲೈಸೆನ್ಸ್‌ ಹೊಂದಿರುವವರಿಗೆ, ಲಘು ವಾಹನಕ್ಕೆ 26 ದಿನಗಳ ವಾಹನ ಚಾಲನಾ ಕೌಶಲ್ಯ ತರಬೇತಿಗಾಗಿ 4250 ರೂಪಾಯಿ (ವಸತಿ ಸಹಿತ)/ 3000 ರೂಪಾಯಿ (ವಸತಿ ರಹಿತ), ಜೊತೆಗೆ ಭಾರಿ ವಾಹನಕ್ಕೆ 26 ದಿನಗಳ ವಾಹನ ಚಾಲನಾ ಕೌಶಲ್ಯ ತರಬೇತಿಗಾಗಿ 6000 ರೂಪಾಯಿ(ವಸತಿ ಸಹಿತ)/ 5000 ರೂಪಾಯಿ (ವಸತಿ ರಹಿತ)

ಕಛೇರಿ ವಿಳಾಸ:

ಚಾಲಕರ ತರಬೇತಿ ಕೇಂದ್ರ,

ವಡ್ಡರಹಳ್ಳಿ, ಕಡಬಗೆರೆ ಅಂಚೆ,

ಮಾಗಡಿ ಮುಖ್ಯ ರಸ್ತೆ,

ಬೆಂಗಳೂರು-562130

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ -7760991085, 6364858520

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+