LIC ನೇಮಕಾತಿ 2023: 9000ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಅಪ್ರೆಂಟಿಸ್ ಡೆವಲಪ್‌ಮೆಂಟ್ ಆಫೀಸರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.

ನವದೆಹಲಿ, ಜನವರಿ 25: ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಅಪ್ರೆಂಟಿಸ್ ಡೆವಲಪ್‌ಮೆಂಟ್ ಆಫೀಸರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.

ಈ ನೇಮಕಾತಿಯ ಮೂಲಕ ಒಟ್ಟು 9,394 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಯಾರಾದರೂ ಎಲ್‌ಐಸಿಯ ಅಧಿಕೃತ ವೆಬ್‌ಸೈಟ್ ಆಗಿರುವ licindia.in ಭೇಟಿ ನೀಡಬೇಕಾಗಿದೆ. ಅಧಿಕೃತ ಅಧಿಸೂಚನೆಯು 10 ಫೆಬ್ರವರಿ 2023 ರೊಳಗೆ ಅರ್ಜಿಗಳನ್ನು ಸಲ್ಲಿಸಬೇಕು. ಎಲ್‌ಐಸಿ ಎಡಿಒ ನೇಮಕಾತಿ 2023ರ ಪ್ರಮುಖ ಮಾಹಿತಿ ಇಂತಿದೆ.

ಅಪ್ರೆಂಟಿಸ್ ಡೆವಲಪ್‌ಮೆಂಟ್ ಆಫೀಸರ್ ಹುದ್ದೆ ನೇಮಕಾತಿ 2023: ಪ್ರಮುಖ ದಿನಾಂಕಗಳು
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ: ಜನವರಿ 21, 2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 10, 2023

LIC Recruitment 2023: Applications invited for more than 9000 posts

ಎಲ್‌ಐಸಿ ನೇಮಕಾತಿ 2023: ವಯಸ್ಸಿನ ಮಿತಿ

ಅರ್ಜಿ ಸಲ್ಲಿಸುವಾಗ ಎಲ್ಲಾ ಅಭ್ಯರ್ಥಿಗಳು 21ರಿಂದ 30 ವರ್ಷದೊಳಗಿನವರಾಗಿರಬೇಕು. ಕಾಯ್ದಿರಿಸಿದ ವರ್ಗದ ಅಭ್ಯರ್ಥಿಗಳು ವಯೋಮಿತಿ ಸಡಿಲಿಕೆಯನ್ನು ಪಡೆಯುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಬಹುದು.

ಅರ್ಜಿ ಶುಲ್ಕ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು ರೂ 750 ಅರ್ಜಿ ಶುಲ್ಕವನ್ನು ಸಲ್ಲಿಸಬೇಕು ಮತ್ತು ಎಸ್‌ಸಿ ಮತ್ತು ಎಸ್‌ಟಿ ವರ್ಗಗಳ ಅರ್ಜಿದಾರರು ರೂ 100 ಅರ್ಜಿ ಶುಲ್ಕವನ್ನು ಸಲ್ಲಿಸಬೇಕು.

ಆಯ್ಕೆ ವಿಧಾನ: ಈ ಹುದ್ದೆಗೆ ಆಯ್ಕೆಯಾಗಲು ಅಭ್ಯರ್ಥಿಗಳು ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಉತ್ತೀರ್ಣರಾಗಬೇಕಾಗುತ್ತದೆ. ಶಾರ್ಟ್‌ಲಿಸ್ಟ್ ಮಾಡಿದ ನಂತರ ಅಭ್ಯರ್ಥಿಗಳು ಪೂರ್ವ ನೇಮಕಾತಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕಾಗಿರುತ್ತದೆ.

LIC Recruitment 2023: Applications invited for more than 9000 posts

ಎಲ್‌ಐಸಿ ನೇಮಕಾತಿ 2023: ಹುದ್ದೆಯ ಮಾಹಿತಿ
ದಕ್ಷಿಣ ವಲಯ ಕಚೇರಿ: 1516 ಹುದ್ದೆಗಳು
ದಕ್ಷಿಣ ಮಧ್ಯ ವಲಯ ಕಚೇರಿ: 1408 ಹುದ್ದೆಗಳು
ಉತ್ತರ ವಲಯ ಕಚೇರಿ: 1216 ಹುದ್ದೆಗಳು
ಉತ್ತರ ಕೇಂದ್ರ ವಲಯ ಕಚೇರಿ: 1033 ಹುದ್ದೆಗಳು
ಪೂರ್ವ ವಲಯ ಕಚೇರಿ: 1049 ಹುದ್ದೆಗಳು
ಪೂರ್ವ ಕೇಂದ್ರ ವಲಯ ಕಚೇರಿ: 669 ಹುದ್ದೆಗಳು
ಕೇಂದ್ರ ವಲಯ ಕಚೇರಿ: 561 ಹುದ್ದೆಗಳು
ಪಶ್ಚಿಮ ವಲಯ ಕಚೇರಿ: 1942 ಹುದ್ದೆಗಳು ಖಾಲಿ ಇವೆ.

ಆನ್‌ಲೈನ್‌ನಲ್ಲಿ ನೋಂದಾಯಿಸಲು ಸೂಚನೆಗಳು: ನಿಮ್ಮ ಅರ್ಜಿಯನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲು https://licindia.in/BottomLinks ನಲ್ಲಿ ವೃತ್ತಿಯ ಪುಟವನ್ನು ವೀಕ್ಷಿಸಿ. ಹೊಸ ನೋಂದಣಿಗಾಗಿ ಇಲ್ಲಿ ಮಾಡಿ ಕ್ಲಿಕ್ ಮಾಡಿದ ನಂತರ ನಿಮ್ಮ ಹೆಸರು, ಸಂಪರ್ಕ ಮಾಹಿತಿ ಮತ್ತು ಇಮೇಲ್ ವಿಳಾಸವನ್ನು ನಮೂದಿಸಬೇಕು.

ಅಕೌಂಟ್‌ ಕ್ರಿಯೇಟ್‌ ಮಾಡಿ ಪಾಸ್‌ವರ್ಡ್ ರಚಿಸಿ ಮತ್ತು ಅರ್ಜಿ ನಮೂನೆಯನ್ನು ಪೂರ್ಣಗೊಳಿಸಿ. ಅಗತ್ಯ ಮಾಹಿತಿ ಮತ್ತು ದಾಖಲಾತಿಗಳನ್ನು ಒದಗಿಸಿದ ನಂತರ ಫಾರ್ಮ್ ಅನ್ನು ಸಲ್ಲಿಸಬೇಕು. ಪಾವತಿ ಮಾಡಲು, ಪಾವತಿ ಟ್ಯಾಬ್ ಆಯ್ಕೆಮಾಡಿ. ಬಳಿಕ ಸಬ್ಮಿಟ್‌ ಬಟನ್ ಒತ್ತಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+